18 ತಿಂಗಳ ಮಗುವಿನ ಕೈಯಲ್ಲಿ ಮೂಡಿದ ಅದ್ಭುತ ಕಲಾಕೃತಿ; ವರ್ಲ್ಡ್ ಬುಕ್ ದಾಖಲೆ ಬರೆದ ಪುಟಾಣಿ

ಒಂದುವರೆ ವರ್ಷದ ಮಗುವೊಂದು ಅದ್ಭುತ ಕಲಾಕೃತಿಯನ್ನು ರಚಿಸುವ ಮೂಲಕ ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದೆ. ಈ ಮೂಲಕ ಈ ಮಗು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್​ನಿಂದ ಚೈಲ್ಡ್ ಪ್ರಾಡಿಜಿ” ಎಂಬ ಮನ್ನಣೆಯನ್ನು ಗಳಿಸಿದೆ.

Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 14, 2023 | 7:11 PM

ಒಂದುವರೆ ವರ್ಷದ ಮಗುವೊಂದು ಅದ್ಭುತ ಕಲಾಕೃತಿಯನ್ನು ರಚಿಸುವ ಮೂಲಕ ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದೆ. ಅರ್ಹಾನ್ ಸಾಯಿ ಗೌರಿಶೆಟ್ಟಿ (Arhan Sai Gaurishetty) ಎಂಬ 18 ತಿಂಗಳ ಮಗು ಸಾಂಪ್ರದಾಯಿಕ ಕುಂಚವನ್ನು ಬಳಸದೆ 43 ಕಲಾತಂತ್ರವನ್ನು ಬಳಸಿ 50 ಸಮಕಾಲೀನ ದ್ರವ ವರ್ಣಚಿತ್ರಗಳನ್ನು ರಚಿಸುವ ಮೂಲಕ ಅತ್ಯಂತ ಕಿರಿಯ ಕಲಾವಿದ ಎಂಬ ಹೆಗ್ಗಲಿಕೆಯನ್ನು ಪಡೆದುಕೊಂಡಿದ್ದಾನೆ. 18 ತಿಂಗಳ ವಯಸ್ಸಿನ ಮಗುವಿನ ಅದ್ಭುತ ಸಾಧನೆಯು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್​ನಿಂದ ಚೈಲ್ಡ್ ಪ್ರಾಡಿಜಿ” ಎಂಬ ಮನ್ನಣೆಯನ್ನು ಗಳಿಸಿದೆ. ವಿಶಿಷ್ಟ ವಿನ್ಯಾಸಗಳನ್ನು ರಚಿಸಲು ಆಟಿಕೆ ಕಾರಿನ ಚಕ್ರವನ್ನು ಸಾಧನವಾಗಿ ಬಳಸುವುದು ಆ ಮಗುವಿನ ಆವಿಷ್ಕಾರಗಳಲ್ಲಿ ಒಂದಾಗಿದೆ. ಆದರೆ ಅರ್ಹಾನ್ ಕಲೆ ಮತ್ತು ಚಿತ್ರಕಲೆಯಲ್ಲಿ ಯಾವುದೇ ಔಪಚಾರಿಕ ತರಬೇತಿಯನ್ನು ಪಡೆಯದೆ ಅದ್ಭುತವಾಗಿ ಕಲಾಕೃತಿಯನ್ನು ರಚಿಸುವ ಕಲೆಯನ್ನು ಹೊಂದಿದ್ದಾನೆ.

ಅರ್ಹಾನ್ ಮಾತ್ರವಲ್ಲದೆ ಅವನ ಹಿರಿಯ ಸಹೋದರ ಅದಿತ್ ಗೌರಿಶೆಟ್ಟಿ ಕೇವಲ 21 ತಿಂಗಳ ವಯಸ್ಸಿನವನಾಗಿದ್ದಾಗ ಆತನ ಅಸಾಧಾರಣ ಜ್ಞಾಪಕ ಕೌಶಲ್ಯದ ಪ್ರದರ್ಶನಕ್ಕಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದನು. ಇವರ ಕುಟುಂಬ ಜೀನಿಯಸ್ ಕುಟುಂಬವಾಗಿದ್ದು, ಈ ಮೊದಲು ಮೂರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ನ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಅರ್ಹಾನ್ ಸ್ಲಿನ್ ಆರ್ಟ್, ರಿಪಲ್ ಪೇಂಟಿಂಗ್ ಮುಂತಾದ ವಿಭಿನ್ನ ತಂತ್ರಗಳನ್ನು ಕಲಾಕೃತಿಗಳಲ್ಲಿ ಬಳಸುತ್ತಾನೆ. ಮಗುವಿಗೆ ಅದರ ಹೆಸರುಗಳು ತಿಳಿದಿಲ್ಲ ಆದರೆ ಅವರು ಬಳಸುತ್ತಿರುವ ತಂತ್ರಗಳ ಮೂಲಕ ಕಲಾಕೃತಿಯನ್ನು ರಚಿಸುತ್ತಾನೆ. ನಮಗೆ ತುಂಬಾ ಸಂತೋಷವಿದೆ. ಈ ಕ್ಷೇತ್ರದಲ್ಲಿ ಮುಂದುವರೆಯಲು ಸಾಧನೆ ಮಾಡಲು ಮಗುವಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲು ಬಯಸುತ್ತೇವೆ’ ಎಂದು ಅರ್ಹನ್‌ನ ತಾಯಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದ ಅತ್ಯಂತ ಹಿರಿಯ ವಯಸ್ಸಿನ ಮಹಿಳೆ 135 ವರ್ಷದಲ್ಲಿ ನಿಧನ

ನನ್ನ ಹಿರಿಯ ಮಗ ಅವನ ಸ್ಮರಣೆ ಶಕ್ತಿಗಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್​​ನ ದಾಖಲೆಯನ್ನು ಪಡೆದಿದ್ದನು. ಅರ್ಹಾನ್‌ನನ್ನು ಸೇರಿ ನನ್ನ ಕುಟುಂಬದಲ್ಲಿ ನಾಲ್ಕು ಜನ ವರ್ಲ್ಡ್ ಬುಕ್ ಆಫ್ ರೆಕಾರ್ಡ್​​ನ ದಾಖಲೆದಾರರಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಇತರ ಮೂರು ಮಕ್ಕಳು ಜ್ಞಾಪಕ ಕೌಶಲ್ಯದ ಮೂಲಕ ದಾಖಲೆ ಮಾಡಿದ್ದಾರೆ, ಆದರೆ ಅರ್ಹಾನ್ ಮಾತ್ರ ಕಲಾತ್ಮಕ ಕೌಶಲ್ಯದ ಪ್ರದರ್ಶನಕ್ಕಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನ ದಾಖಲೆಯನ್ನು ಪಡೆದುಕೊಂಡಿದ್ದಾನೆ’ ಎಂದು ಅರ್ಹಾನ್ ತಾಯಿ ಹೇಳುತ್ತಾರೆ.

Published On - 7:10 pm, Tue, 14 March 23

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ