Indian Degrees: ಭಾರತದಲ್ಲಿ ಪಡೆದ ಪದವಿಗಳಿಗೆ ಮಾನ್ಯತೆ ನೀಡಲಿರುವ ಆಸ್ಟ್ರೇಲಿಯಾ

ವೊಲೊಂಗೊಂಗ್ ವಿಶ್ವವಿದ್ಯಾಲಯದ ಬ್ರಾಂಡ್ ಅಂಬಾಸಿಡರ್, ವೊಲೊಂಗೊಂಗ್ ಕ್ಯಾಂಪಸ್​ನಲ್ಲಿ 'ಗುಜರಾತ್‌ನ GIFT ಸಿಟಿ' ಬ್ರಾಂಚ್ ಅನ್ನು ಪ್ರಾರಂಭಿಸುತ್ತಿರುವ ಬಗ್ಗೆ ಕ್ಲೇರ್ ತಿಳಿಸಿದರು.

Indian Degrees: ಭಾರತದಲ್ಲಿ ಪಡೆದ ಪದವಿಗಳಿಗೆ ಮಾನ್ಯತೆ ನೀಡಲಿರುವ ಆಸ್ಟ್ರೇಲಿಯಾ
Australian Education Minister with Dharmendra PradhanImage Credit source: Indian Express
Follow us
ನಯನಾ ಎಸ್​ಪಿ
|

Updated on:Mar 02, 2023 | 3:56 PM

ಇಂದಿನಿಂದ (ಮಾರ್ಚ್ 2) ಆಸ್ಟ್ರೇಲಿಯಾ (Australia) ಮತ್ತು ಭಾರತದ (India) ನಡುವೆ ನಡೆದ ಒಪ್ಪಂದದ ಮೇರೆಗೆ ಭಾರತದಲ್ಲಿ ಪಡೆದ ಉನ್ನತ ಶಿಕ್ಷಣ ಪದವಿಗಳಿಗೆ ಮಾನ್ಯತೆ ನೀಡಲಿರುದೆ, ಆದರೆ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮತ್ತು ಇತರ ವೃತ್ತಿಪರ ಕೋರ್ಸ್‌ಗಳು ಈ ವ್ಯಾಪ್ತಿಯಲ್ಲಿ ಬರುವುದಿಲ್ಲ. ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರೊಂದಿಗೆ ಗುಣಮಟ್ಟವನ್ನು ಗುರುತಿಸುವ ಕಾರ್ಯವಿಧಾನದ ಒಪ್ಪಂದಕ್ಕೆ ಸಹಿ ಹಾಕಿರುವ ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ (Jason Clare) ಬುಧವಾರ ದೆಹಲಿಯಲ್ಲಿ ಈ ಒಪ್ಪಂದ ಒಂದು ದಶಕದಲ್ಲಿ ನಡೆದ ಚರ್ಚೆಯ ಫಲಿತಾಂಶವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್​ಗೆ ಹೇಳಿದರು.

“ಭಾರತವು ಅಮೆರಿಕದಂತಹ ದೇಶಗಳೊಂದಿಗೆ ಇತರ ಒಪ್ಪಂದಗಳನ್ನು ಹೊಂದಿದೆ. ಅಮೇರಿಕಾ ಜೊತೆಗಿನ ಒಪ್ಪಂದಕ್ಕಿಂತ ಇದು ವಿಶಾಲವಾದದ್ದು, ಏಕೆಂದರೆ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಭಾರತದಲ್ಲಿ ನಡೆಸಬಹುದಾದ ಕೋರ್ಸ್‌ಗಳು, ವೊಲೊಂಗಾಂಗ್ ವಿಶ್ವವಿದ್ಯಾಲಯ ಸ್ಥಾಪಿಸುತ್ತಿರುವಂತಹ ಸ್ವತಂತ್ರ ಕ್ಯಾಂಪಸ್‌ ಜೊತೆಗೆ ಆನ್‌ಲೈನ್ ಕೋರ್ಸ್‌ಗಳ ವಿಷಯಗಳನ್ನು ಈ ಒಪ್ಪಂದ ಒಳಗೊಂಡಿದೆ,” ಎಂದು ಕ್ಲೇರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

“ಆದ್ದರಿಂದ ಇದರರ್ಥ ನೀವು ಆಸ್ಟ್ರೇಲಿಯನ್ ವಿಶ್ವವಿದ್ಯಾನಿಲಯದೊಂದಿಗೆ ಅಥವಾ ಭಾರತದಲ್ಲಿರುವ ಆಸ್ಟ್ರೇಲಿಯನ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವ ಅವಕಾಶವಿರುತ್ತದೆ. ಆಸ್ಟ್ರೇಲಿಯನ್ ಆನ್ಲೈನ್ ಕೋರ್ಸ್ ಮಾಡಲು ಅವಕಾಶವಿದೆ. ಈ ಪದವಿಗಳಿಗೆ ಭಾರತ ಹಾಗು ಆಸ್ಟ್ರೇಲಿಯಾದಲ್ಲಿ ಮಾನ್ಯತೆ ನೀಡಲಾಗುತ್ತದೆ.” ಎಂದು ತಳಿಸಿದರು.

ಈ ಒಪ್ಪಂದ ವೃತ್ತಿಪರ ಪದವಿಗಳಿಗೂ ಅನುಸರಿಸುತ್ತವೆಯೇ ಎಂದು ಕೇಳಿದಾಗ “ಇದರ ಬಗ್ಗೆ ನಾವಿನ್ನು ಚರ್ಚಿಸುತ್ತಿದ್ದೇವೆ, ಸದ್ಯಕ್ಕೆ ಇದು ವೃತ್ತಿಪರ ಪದವಿಗಳಿಗೆ ಅನುಸರಿಸುವುದಿಲ್ಲ. ಆದರೆ ಒಬ್ಬ ಭಾರತೀಯ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿಯನ್ನು ಹೊಂದಿರುವ ವೈದ್ಯನಾಗಿದ್ದರೆ ಆತ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಬಹುದು ಮತ್ತು ವೈದ್ಯಕೀಯ ಅಭ್ಯಾಸ ಮಾಡಬಹುದು” ಎಂದು ಕ್ಲೇರ್ ತಿಳಿಸಿದರು

ಇದನ್ನೂ ಓದಿ: ಯುಜಿಸಿ NET ಫೇಸ್ 3 ಪ್ರವೇಶ ಪತ್ರ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ

ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ ಅವರು ಭಾಗವಹಿಸಿದ್ದ 2015ರ ಆಸ್ಟ್ರೇಲಿಯಾ-ಭಾರತ ಶಿಕ್ಷಣ ಮಂಡಳಿಯ ಸಭೆಯನ್ನು ನೆನಪಿಸಿಕೊಂಡು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಮ್ ಗಿಲ್‌ಕ್ರಿಸ್ಟ್, ವೊಲೊಂಗೊಂಗ್ ವಿಶ್ವವಿದ್ಯಾಲಯದ ಬ್ರಾಂಡ್ ಅಂಬಾಸಿಡರ್, ವೊಲೊಂಗೊಂಗ್ ಕ್ಯಾಂಪಸ್​ನಲ್ಲಿ ‘ಗುಜರಾತ್‌ನ GIFT ಸಿಟಿ’ ಬ್ರಾಂಚ್ ಅನ್ನು ಪ್ರಾರಂಭಿಸುತ್ತಿರುವ ಬಗ್ಗೆ ತಿಳಿಸಿದರು. “ವೊಲೊಂಗೊಂಗ್ ವಿಶ್ವವಿದ್ಯಾನಿಲಯದ ಜೊತೆಗೆ, ಡೀಕಿನ್ ವಿಶ್ವವಿದ್ಯಾಲಯವು GIFT ಸಿಟಿ ಕ್ಯಾಂಪಸ್ ಅನ್ನು ಸಹ ಸ್ಥಾಪಿಸಲಿದೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರ ಈ ತಿಂಗಳು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆಯಿದೆ” ಎಂದು ತಿಳಿಸಿದರು.

Published On - 3:55 pm, Thu, 2 March 23

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ