Karnataka 12th Result 2021: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಪಾಸ್​ಗಿಂತ ಫೇಲ್ ಆದವರೇ ಹೆಚ್ಚು

| Updated By: sandhya thejappa

Updated on: Sep 20, 2021 | 11:57 AM

Karnataka 12th Result 2021: ಖಾಸಗಿ ವಿದ್ಯಾರ್ಥಿಗಳು, ರಿಸಲ್ಟ್ ತಿರಸ್ಕರಿಸಿದ್ದ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಒಟ್ಟು 18,414 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.

Karnataka 12th Result 2021: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಪಾಸ್​ಗಿಂತ ಫೇಲ್ ಆದವರೇ ಹೆಚ್ಚು
Follow us on

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಸೆ.20) ಪ್ರಕಟವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಪತ್ರಿಕಾಗೋಷ್ಠಿ ನಡೆಸಿ ಖಾಸಗಿ ವಿದ್ಯಾರ್ಥಿಗಳು, ರಿಸಲ್ಟ್ ತಿರಸ್ಕರಿಸಿದ್ದ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಒಟ್ಟು 18,414 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 17,470 ಖಾಸಗಿ ವಿದ್ಯಾರ್ಥಿಗಳು, 351 ರಿಪೀಟರ್ಸ್, 592 ಪ್ರೆಶರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

18,414 ವಿದ್ಯಾರ್ಥಿಗಳ ಪೈಕಿ 5,507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 556 ಪ್ರೆಶರ್ಸ್, 183 ರಿಪೀಟರ್ಸ್ ಪಾಸ್ ಆಗಿದ್ದಾರೆ. 17,470 ಖಾಸಗಿ ವಿದ್ಯಾರ್ಥಿಗಳ ಪೈಕಿ 4,768 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 600ಕ್ಕೆ 573 ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 600 ಅಂಕಕ್ಕೆ 592 ಅತಿ ಹೆಚ್ಚು ಅಂಕ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅತಿ ಹೆಚ್ಚು ಅಂಕ ಗಳಿಸಿದ್ದಾರೆ.

ಅಭ್ಯರ್ಥಿಗಳು http://karresults.nic.in ಲಿಂಕ್ ಮೂಲಕ ಫಲಿತಾಂಶ ಪಡೆಯಬಹುದು. ಈ ಮುನ್ನ ಘೋಷಿಸಿದ್ದ ದ್ವಿತೀಯ ಪಿಯುಸಿ ಫಲಿತಾಂಶವನ್ನು ತಿರಸ್ಕರಿಸಿ ಪರೀಕ್ಷೆ ಬರೆಯುವುದಾಗಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದರು.  ರಾಜ್ಯದ 187 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲಾಗಿತ್ತು.

ಇದನ್ನೂ ಓದಿ

ಕೊವಿಡ್ ಕರ್ತವ್ಯದಲ್ಲಿದ್ದ ವೈದ್ಯರಿಗೆ ಸಂಬಳ ನೀಡದೆ ಒಟ್ಟು ₹1.26 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ, ವೈದ್ಯರ ಪ್ರತಿಭಟನೆ

ಬಿಜೆಪಿ ಸರ್ಕಾರ ಸುಳ್ಳು ಹೇಳ್ಕೊಂಡು ಅಧಿಕಾರ ಮಾಡ್ತಿದೆ; ಚಿನ್ನವನ್ನೆಲ್ಲಾ ಬ್ಯಾಂಕ್​ನಲ್ಲಿ ಇಟ್ಟು ಜನ ಜೀವನ ಮಾಡಬೇಕಿದೆ: ಸಿದ್ದರಾಮಯ್ಯ

(BC Nagesh announces second PUC result in bengaluru)

Published On - 10:51 am, Mon, 20 September 21