ಬೆಂಗಳೂರು: ಮಕ್ಕಳ ಭವಿಷ್ಯ ರೂಪಿಸಬೇಕಾಗಿದ್ದ ಶಿಕ್ಷಣ ಸಂಸ್ಥೆಗಳು ಮಕ್ಕಳ ಕಲಿಕಾ ಭವಿಷ್ಯದ ಜೊತೆ ಚೆಲ್ಲಾಟವಾಡಲು ಮುಂದಾಗಿವೆ. ಶಾಲೆಯ ಮೋಸದಾಟಕ್ಕೆ ಮಕ್ಕಳ ಭವಿಷ್ಯ ಅತಂತ್ರಾಗಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಾಯಿಕೊಡೆಯಂತೆ 100ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ತಲೆ ಎತ್ತಿವೆ. ದಕ್ಷಿಣ ವಲಯದಲ್ಲಿಯೇ ಅತಿ ಹೆಚ್ಚು ಅನಧಿಕೃತ ಖಾಸಗಿ ಶಾಲೆಗಳ ತಲೆ ಎತ್ತಿವೆ. CBSC ಸಿ / ICSC ಹಾಗೂ ರಾಜ್ಯ ಪಠ್ಯಕ್ರಮದ ಶಿಕ್ಷಣದ ಹೆಸರಲ್ಲಿ ಅನಧಿಕೃತ ಪಠ್ಯಕ್ರಮದ 100ಕ್ಕೂ ಹೆಚ್ಚು ಶಾಲೆಗಳು ತಲೆ ಎತ್ತಿವೆ.
ಆರ್ಕಿಡ್ ಶಾಲೆಯ ಕಳ್ಳಾಟದ ಬಳಿಕ ಹೊರ ಬರ್ತಿವೆ ಕೆಲ ಖಾಸಗಿ ಶಾಲೆಗಳ ಬಂಡವಾಳ
ಸಾಲು ಸಾಲು ಆರ್ಕಿಡ್ ಶಾಲೆಗಳ ಕಿರಿಕ್ ಹಿನ್ನಲೆ ಅನಧಿಕೃತ ಶಾಲೆಗಳ ಪರಿಶೀಲನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿನ ಅನಧಿಕೃತ ಶಾಲೆಗಳ ಮಾಹಿತಿ ಪಡೆದು ವರದಿ ನೀಡುವಂತೆ ಡಿಡಿಪಿಐ ಹಾಗೂ ಬಿಇಎಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸಕ್ತ ವರ್ಷ ಶಿಕ್ಷಣ ಇಲಾಖೆ 5 ನೇ ತರಗತಿ ಹಾಗೂ 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುತ್ತಿದ್ದಂತೆ ಒಂದೊಂದೆ ಖಾಸಗಿ ಶಾಲೆಗಳ ಹುಳಕು ಹೊರಕ್ಕೆ ಬರ್ತಿವೆ.
ಇದನ್ನೂ ಓದಿ: ಬೆಂಗಳೂರಿನ ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ
ಇಷ್ಟು ವರ್ಷ ಶಾಲೆಗಳು ಮಾಡಿದ್ದೇ ಆಟ, ಆಡಿದ್ದೆ ಪಾಠ ಎನ್ನುವಂತಾಗಿತ್ತು. ಆದ್ರೆ ಈಗ ಐದನೇ ತರಗತಿಗೆ ಪಬ್ಲಿಕ್ ಮಾದರಿಯಲ್ಲಿ ಎಕ್ಸಾಂ ಹಿನ್ನಲೆ ಶಾಲೆಗಳ ಬಣ್ಣ ಬಯಲಾಗುತ್ತಿದೆ. ಸಾಲು ಸಾಲು ಆರ್ಕಿಡ್ ಶಾಲೆಗಳ ಎಡವಟ್ಟು ಹೊರ ಬರ್ತಿದ್ದಂತೆ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲೆಗಳ ನೋಂದಣಿ ಹಾಗೂ ಪಠ್ಯಕ್ರಮ ಮಾದರಿ ಎಲ್ಲ ಮಾಹಿತಿ ಪಡೆಯಲು ಮುಂದಾಗಿದೆ. ಎಲ್ಲ ಖಾಸಗಿ ಶಾಲೆಗಳಿಗೆ ಸಿಆರ್ಪಿ ಕಳಸಿ ಕಂಪ್ಲೀಟ್ ಶಾಲೆಗಳ ವರದಿ ಪಡೆಯಲು ಮುಂದಾಗಿದೆ. ಅನುಮತಿ ಪಡೆಯದೆ ಕಳಾಟ್ಟವಾಡುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಇಲಾಖೆ ಮುಂದಾಗಿದೆ.
ಈ ಕುರಿತಾಗಿ ದಕ್ಷಿಣ ವಿಭಾಗದ ಡಿಡಿಪಿಐ ಬೈಲಾಜಂನಪ್ಪ ಪ್ರತಿಕ್ರಿಯೆ ನೀಡಿದ್ದು, ಆರ್ಕಿಡ್ ಶಾಲೆಗಳ ಕಿರಿಕ್ ಬೆನ್ನಲೆ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿನ ಅನಧಿಕೃತ ಶಾಲೆಗಳ ಮಾಹಿತಿ ಪಡೆದು ವರದಿ ನೀಡಲು ಡಿಡಿಪಿಐ ಹಾಗೂ ಬಿಇಎಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಹಿನ್ನಲೆ ಸದ್ಯ ಬೆಂಗಳೂರು ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿಯೇ 127 ಶಾಲೆಗಳು ಅನಧಿಕೃತ ಪಠ್ಯಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳು ಕಂಡು ಬಂದಿವೆ. ಅತಂಹ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಸಿಬಿಎಸ್ಇ ಸುಳ್ಳು ನೆಪ ಹೇಳಿ ಲಕ್ಷಾಂತರ ಶುಲ್ಕ: ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಪೋಷಕರ ಪ್ರತಿಭಟನೆ
ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಕಳ್ಳಾಟದ ಬಳಿಕ ಖಾಸಗಿ ಶಾಲೆಗಳ ನೋಂದಣಿ ಹಾಗೂ ಪಠ್ಯಕ್ರಮ ಮಾದರಿ ಎಲ್ಲ ಮಾಹಿತಿ ಪಡೆಯಲು ಮುಂದಾಗಿದೆ. ಎಲ್ಲ ಖಾಸಗಿ ಶಾಲೆಗಳಿಗೆ ಸಿಆರ್ಪಿ ಕಳಸಿ ಕಂಪ್ಲೀಟ್ ಶಾಲೆಗಳ ವರದಿ ಪಡೆಯಲು ಮುಂದಾಗಿದೆ. ಅನುಮತಿ ಪಡೆಯದೆ ಕಳಾಟ್ಟವಾಡುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಇಲಾಖೆ ಮುಂದಾಗಿದೆ. ಜೊತೆಗೆ ಅಕ್ರಮ ಶಾಲೆಗಳ ಆಡಳಿತ ಮಂಡಳಿಗಳ ಕಪ್ಪು ಪಟ್ಟಿ ಸೇರಿಸಲು ಇಲಾಖೆ ಚಿತಂನೆ ನಡೆಸಿದೆ.
ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.