ಸಿಬಿಎಸ್​ಸಿ ಸಿಲೆಬಸ್ ಪಾಠ ಮಾಡಿ, ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ: ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 28, 2023 | 3:11 PM

ಸಿಬಿಎಸ್​​ಇ ಮಾನ್ಯತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಬಿಎಸ್​​ಸಿ ಪಾಠ ಮಾಡುತ್ತೇವೆ ಎಂದು ಲಕ್ಷ ಲಕ್ಷ ಫೀಸ್ ಕಿತ್ತುಕೊಳ್ಳಲಾಗಿದೆ. ಆದರೆ ಈಗ ಸ್ಟೇಟ್ ಸಿಲೆಬಸ್‌ನಲ್ಲಿ ಎಕ್ಸಾಂ ಬರೆಯಿಸಲು ಮುಂದಾಗಿರುವುದು ಪೋಷಕರನ್ನ ಕೆರಳುವಂತೆ ಮಾಡಿದೆ.

ಸಿಬಿಎಸ್​ಸಿ ಸಿಲೆಬಸ್ ಪಾಠ ಮಾಡಿ, ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ: ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ
ಪೋಷಕರ ಆಕ್ರೋಶ
Follow us on

ಬೆಂಗಳೂರು: ಸಿಬಿಎಸ್​​ಇ (Cbse syllabus) ಮಾನ್ಯತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಬಿಎಸ್​​ಸಿ ಪಾಠ ಮಾಡುತ್ತೇವೆ ಎಂದು ಲಕ್ಷ ಲಕ್ಷ ಫೀಸ್ ಕಿತ್ತುಕೊಳ್ಳಲಾಗಿದೆ. ಆದರೆ ಈಗ ಸ್ಟೇಟ್ ಸಿಲೆಬಸ್‌ನಲ್ಲಿ ಎಕ್ಸಾಂ ಬರೆಯಿಸಲು ಮುಂದಾಗಿರುವುದು ಪೋಷಕರನ್ನ ಕೆರಳುವಂತೆ ಮಾಡಿದೆ. ಸದ್ಯ ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ವರ್ಷ ಪೂರ್ತಿ ಸಿಬಿಎಸ್​ಸಿ ಸಿಲೆಬಸ್ ಪಾಠ ಮಾಡಿ ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ ಬರೆಯುವಂತೆ ಹೇಳುತ್ತಿದ್ದಾರೆ. ಹೇಗೆ ಮಕ್ಕಳು ಒಂದು ತಿಂಗಳಲ್ಲಿ ಎಕ್ಸಾಂ ಬರೆಯೊದಕ್ಕೆ ಆಗುತ್ತೆ. ಮಕ್ಕಳ ಎಕ್ಸಾಂ ಬರೆದರೆ ಸಾಕು, ನಾವೇ ಚೆನ್ನಾಗಿ ಮೌಲ್ಯಮಾಪನ ಮಾಡಿ ಮಾರ್ಕ್ಸ್ ಕೊಡುತ್ತೇವೆ. ಮಕ್ಕಳಿಗೆ ಹೇಗೆ ಮೋಸ ಮಾಡಬೇಕು ಅಂತಾ ಹೇಳಿ ಕೊಡ್ತಾ ಇದ್ದಾರೆ. ಮೋಸ ಮಾಡಿ ಪಾಸ್ ಯಾಕೆ ಡೈರೆಕ್ಟ್ ಪಾಸ್ ಮಾಡಿ ಬಿಡಿ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿಲೆಬಸ್ ಸಡನ್ ಚೇಂಜ್ ಆದ್ರೆ ಮಕ್ಕಳ ಭವಿಷ್ಯ ಏನು?

ಆರ್ಕಿಡ್ ಚೆನ್ನಾಗಿದೆ ಅಂತಾ ಮಕ್ಕಳ ದಾಖಲಾತಿ ಮಾಡಿದ್ರೆ ಹೀಗೆ ಮಾಡಿದ್ದಾರೆ. ಈ ಶಾಲೆಗೆ ಶಿಕ್ಷಣ ಇಲಾಖೆಯಿಂದ ಎನ್​ಒಸಿ ಕೂಡ ಈ ವರ್ಷ ತಗೆದುಕೊಂಡಿದ್ದಾರೆ. ಈ ಶಾಲೆಗೆ ರಾಜ್ಯ ಶಿಕ್ಷಣ ಇಲಾಖೆಯ ಪರ್ಮಿಷನ್ ಸಿಕ್ಕಿರೋದು ಡೌಟ್. ಈ ಶಾಲೆ ನಮಗೆ ವಂಚನೆ ಮಾಡಿದೆ ಅಂತಾ ಪೋಷಕರು ಹೇಳುತ್ತಿದ್ದಾರೆ. ಸಿಲೆಬಸ್ ಸಡನ್ ಚೇಂಜ್ ಆದ್ರೆ ಮಕ್ಕಳ ಭವಿಷ್ಯ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಗ್ರೇಡ್ – 5ಗೆ 1,5 ಲಕ್ಷ ಶುಲ್ಕವನ್ನ ತಗೆದುಕೊಂಡಿದ್ದಾರೆ. ಸಿಬಿಎಸ್​ಸಿ ಬುಕ್ಸ್​ಗೆ 12.5 ಸಾವಿರ ಹಣ ಕಟ್ಟಿಸಿಕೊಂಡಿದ್ದಾರೆ. ಸಿಬಿಎಸ್​ಸಿ ಅಂತಾ ಮೋಸ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನಧಿಕೃತ ಶಾಲೆಗಳ ಹಾವಳಿ: ಪೋಷಕರೇ ಎಚ್ಚರ ಎಚ್ಚರ..!

ಕಳ್ಳಾಟದ ಬಳಿಕ ಪೋಷಕರಿಂದ ರಿಕ್ವೇಸ್ಟ್ ಪತ್ರ

ಶಾಲೆಯ ಕಳ್ಳಾಟದ ಬಳಿಕ ಈಗ ಪೋಷಕರ ಬಳಿ ರಿಕ್ವೇಸ್ಟ್ ಮಾಡಿ ಪತ್ರದಲ್ಲಿ ಸಹಿ ಪಡೆಯುತ್ತಿದ್ದಾರೆ. ಸಿಬಿಎಸ್​ಸಿ ಶಾಲೆ ಅಂತಾ ಬೇರೆ ಬೇರೆ ರಾಜ್ಯದಿಂದ ಬಂದಿರುವ ಪೋಷಕರ ಮಕ್ಕಳ ದಾಖಲಾತಿ ಮಾಡಿದ್ದಾರೆ. ಆದ್ರೆ ಈಗ ರಾಜ್ಯ ಪಠ್ಯಕ್ರಮ ಅಂದ್ರೆ ನಮ್ಮ ಮಕ್ಕಳ ಭವಿಷ್ಯ ಏನು ಅಂತಾ ಗಲಾಟೆ ಮಾಡುತ್ತಿದ್ದಾರೆ. ಸಿಬಿಎಸ್​ಸಿಗೂ ರಾಜ್ಯ ಪಠ್ಯಕ್ರಮದ ಶಿಕ್ಷಣಕ್ಕೂ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾ ಹೇಳುತ್ತಿದ್ದಾರೆ. ಈ ಶಾಲಾ ಆಡಳಿತ ಮಂಡಳಿ ವಂಚನೆ ಮಾಡುವ ಮೂಲಕ ಪೋಷಕರನ್ನ ಪೂಲ್ ಮಾಡಿದೆ. ನಮ್ಗೆ ದುಡ್ಡು ಮುಖ್ಯ ಇಲ್ಲ. ಮಕ್ಕಳ ಭವಿಷ್ಯದ ಗತಿ ಏನು? ಇಷ್ಟು ವರ್ಷದಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗಿದೆ ಇದನ್ನ ಯಾರೂ ಕೊಡ್ತಾರೆ ಎಂದು ಪೋಷಕರು ತಮ್ಮ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರಿನ ಆರ್ಕಿಡ್​ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು​, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ಕಳಾಟ್ಟವಾಡುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್

ಇಷ್ಟು ವರ್ಷ ಶಾಲೆಗಳು ಮಾಡಿದ್ದೇ ಆಟ, ಆಡಿದ್ದೆ ಪಾಠ ಎನ್ನುವಂತಾಗಿತ್ತು. ಆದ್ರೆ ಈಗ ಐದನೇ ತರಗತಿಗೆ ಪಬ್ಲಿಕ್ ಮಾದರಿಯಲ್ಲಿ ಎಕ್ಸಾಂ ಹಿನ್ನಲೆ ಶಾಲೆಗಳ ಬಣ್ಣ ಬಯಲಾಗುತ್ತಿದೆ. ಸಾಲು ಸಾಲು ಆರ್ಕಿಡ್ ಶಾಲೆಗಳ ಎಡವಟ್ಟು ಹೊರ ಬರ್ತಿದ್ದಂತೆ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲೆಗಳ ನೋಂದಣಿ ಹಾಗೂ ಪಠ್ಯಕ್ರಮ ಮಾದರಿ ಎಲ್ಲ ಮಾಹಿತಿ ಪಡೆಯಲು ಮುಂದಾಗಿದೆ. ಎಲ್ಲ ಖಾಸಗಿ ಶಾಲೆಗಳಿಗೆ ಸಿಆರ್​ಪಿ ಕಳಸಿ ಕಂಪ್ಲೀಟ್ ಶಾಲೆಗಳ ವರದಿ ಪಡೆಯಲು ಮುಂದಾಗಿದೆ. ಅನುಮತಿ ಪಡೆಯದೆ ಕಳಾಟ್ಟವಾಡುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಇಲಾಖೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:11 pm, Sat, 28 January 23