CBSE Term 1 Board Exam 2021 Date ಸಿಬಿಎಸ್ಇ ಟರ್ಮ್ 1 ಪರೀಕ್ಷೆ ನ.30 ರಿಂದ ಆರಂಭ

| Updated By: ರಶ್ಮಿ ಕಲ್ಲಕಟ್ಟ

Updated on: Oct 18, 2021 | 9:56 PM

CBSE 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನವೆಂಬರ್ 30 ರಿಂದ ಆರಂಭವಾಗಿ ಡಿಸೆಂಬರ್ 11 ರವರೆಗೆ ಮತ್ತು  12ನೇ ತರಗತಿ ಪರೀಕ್ಷೆಗಳು ಡಿಸೆಂಬರ್ 1 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿದೆ.

CBSE Term 1 Board Exam 2021 Date ಸಿಬಿಎಸ್ಇ ಟರ್ಮ್ 1 ಪರೀಕ್ಷೆ ನ.30 ರಿಂದ ಆರಂಭ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ನಡೆಸುವ 10 ನೇ ತರಗತಿ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆಯಲಿವೆ. 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನವೆಂಬರ್ 30 ರಿಂದ ಆರಂಭವಾಗಿ ಡಿಸೆಂಬರ್ 11 ರವರೆಗೆ ಮತ್ತು  12ನೇ ತರಗತಿ ಪರೀಕ್ಷೆಗಳು ಡಿಸೆಂಬರ್ 1 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿದೆ.   ಸಿಬಿಎಸ್‌ಇ ತನ್ನ 2021-22 ಬ್ಯಾಚ್ ವಿದ್ಯಾರ್ಥಿಗಳಿಗಾಗಿ ಎರಡು ಅವಧಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಟರ್ಮ್ 2 ಪರೀಕ್ಷೆಗಳನ್ನು ಮಾರ್ಚ್-ಏಪ್ರಿಲ್, 2022 ಕ್ಕೆ ನಿಗದಿಪಡಿಸಲಾಗಿದೆ.  ಚಳಿಗಾಲವಾಗಿರುವುದರಿಂದ ಪರೀಕ್ಷೆ ಬೆಳಗ್ಗೆ 10.30ಕ್ಕೆ ನಡೆಯುವ ಬದಲು 11.30ಕ್ಕ ನಡೆಯಲಿದೆ. ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಓದಲು ಎಲ್ಲ ವಿದ್ಯಾರ್ಥಿಗಳಿಗೆ 20 ನಿಮಿಷ ಸಮಯ ನೀಡಲಾಗುವುದು.

ಟರ್ಮ್ 1 ಪತ್ರಿಕೆಗಳು ಅಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಮಾತ್ರ ಹೊಂದಿರುತ್ತದೆ. ಪ್ರತಿ ಪರೀಕ್ಷೆಯ ಅವಧಿ 90 ನಿಮಿಷಗಳು.

ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯ ವಿಷಯಗಳನ್ನು ಲಘು ಮತ್ತು ಕಠಿಣ ಎರಡು ಗುಂಪುಗಳಾಗಿ ವಿಂಗಡಿಸಿದೆ. ಮೊದಲಿಗೆ ಲಘು ಪರೀಕ್ಷೆ ನಡೆಯಲಿದ್ದು ನಂತರ ಕಠಿಣ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಟ್ಟು ಅಂಕಗಳಲ್ಲಿ ಶೇ 50ರಷ್ಟು ಅಂಕಗಳು ಪ್ರಾಯೋಗಿಕ ಪರೀಕ್ಷೆಗಳು, ಆಂತರಿಕ ಮೌಲ್ಯಮಾಪನ ಮತ್ತು ಪ್ರಾಜೆಕ್ಟ್ ಹೊಂದಿದ್ದು 1 ನೇ ಟರ್ಮ್ ಮುಗಿಯುವ ಮುನ್ನವೇ ಶಾಲೆಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಿಬಿಎಸ್‌ಇ ಹೇಳಿದೆ.

ಸಿಬಿಎಸ್‌ಇ ಅಭ್ಯರ್ಥಿಗಳನ್ನು ಟರ್ಮ್ 1 ಪರೀಕ್ಷೆಯ ಕೊನೆಯಲ್ಲಿ “ಪಾಸ್”, “ಕಂಪಾರ್ಟ್ಮೆಂಟ್” ಅಥವಾ “ಎಸೆನ್ಶಿಯಲ್ ರಿಪೀಟ್” ವಿಭಾಗಗಳಲ್ಲಿ ಸೇರಿಸುವುದಿಲ್ಲ. ಟರ್ಮ್ 2 ಪರೀಕ್ಷೆಗಳು ನಡೆದ ನಂತರವೇ ಅಂತಿಮ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಇದನ್ನೂ ಓದಿ: ಮತಾಂತರ ಆರೋಪ: ಹುಬ್ಬಳ್ಳಿಯ ಚರ್ಚ್​ನಲ್ಲಿ ಕುಳಿತು ಭಜನೆ ಮಾಡಿ ಪ್ರತಿಭಟಿಸಿದ ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು