Sign In

By signing in or creating an account, you agree with Associated Broadcasting Company's Terms & Conditions and Privacy Policy.

CET Exam: ಇಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ, ಮೇ.22 ಕನ್ನಡ ಭಾಷಾ ಪರೀಕ್ಷೆ

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಿನ್ನೆ (ಮೇ.20) ರಿಂದ ಸಿಇಟಿ ಪರೀಕ್ಷೆಗಳು ಆರಂಭವಾಗಿದ್ದು, ಇಂದು (ಮೇ.21) ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿವೆ.

CET Exam: ಇಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ, ಮೇ.22 ಕನ್ನಡ ಭಾಷಾ ಪರೀಕ್ಷೆ
ಪರೀಕ್ಷೆ
Follow us
ವಿವೇಕ ಬಿರಾದಾರ
|

Updated on: May 21, 2023 | 6:38 AM

ಬೆಂಗಳೂರು: ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಿನ್ನೆ (ಮೇ.20) ರಿಂದ ಸಿಇಟಿ (CET) ಪರೀಕ್ಷೆಗಳು ಆರಂಭವಾಗಿದ್ದು, ಇಂದು (ಮೇ.21) ಭೌತಶಾಸ್ತ್ರ (Physics) , ರಸಾಯನಶಾಸ್ತ್ರ (Chemistry) ಪರೀಕ್ಷೆ ನಡೆಯಲಿವೆ. ಬೆಂಗಳೂರು, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.

ಮೇ 22ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಬೆಳಿಗ್ಗೆ 11.30ರಿಂದ 12.30ರವರೆಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ‌ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. ಇದರಲ್ಲಿ ಒಟ್ಟು 2,084 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಕನ್ನಡ ಭಾಷಾ ಪರೀಕ್ಷೆಯ ಬೆಲ್‌ ಸಮಯ ಮತ್ತು ವಿವರಗಳು

ಮೊದಲನೇ ಬೆಲ್‌ ಬೆಳಗ್ಗೆ 11.10ಕ್ಕೆ – ಈ ಬೆಲ್‌ ಆದ ಮೇಲೆ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ, ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಬೇಕು.

ಎರಡನೇ ಬೆಲ್‌ ಬೆಳಗ್ಗೆ 11.20ಕ್ಕೆ – ಈ ಬೆಲ್ ಆದ ಮೇಲೆ ಕೊಠಡಿ ಮೇಲ್ವಿಚಾರಕರು ಸೀಲ್‌ ಮಾಡಿರುವ ಪ್ರಶ್ನೆ ಪತ್ರಿಕೆ ಸಮೇತ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಮೂರನೇ ಬೆಲ್‌ 11.30ಕ್ಕೆ – ಈ ಬೆಲ್‌ ಆದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಮತ್ತು ಹೊರ ಹೋಗಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಅವಕಾಶ ನೀಡಲಾಗುತ್ತದೆ.

ನಾಲ್ಕನೇ ಬೆಲ್‌ 12ಕ್ಕೆ – ಇದು ಮೊದಲನೇಯ ಎಚ್ಚರಿಕೆ ಬೆಲ್‌. ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಪರೀಕ್ಷೆಯ ಅರ್ಧಗಂಟೆಯ ಅವಧಿ ಮುಗಿದಿದೆ ಎಂದು ಹೇಳುತ್ತಾರೆ.

ಐದನೇ ಬೆಲ್‌ ಮಧ್ಯಾಹ್ನ 12.25ಕ್ಕೆ– ಇದು ಎರಡನೆಯ ಹಾಗೂ ಕೊನೆಯ ಎಚ್ಚರಿಕೆಯ ಬೆಲ್‌. ಪರೀಕ್ಷೆ ಮುಗಿಯಲು ಕೇವಲ ಐದು ನಿಮಿಷ ಬಾಕಿ ಇರುವಾಗ ಈ ಬೆಲ್‌ ಮಾಡಲಾಗುತ್ತದೆ.

ಆರನೆಯ ಬೆಲ್‌ ಹಾಗೂ ಕೊನೆಯ ಬೆಲ್‌ ಮಧ್ಯಾಹ್ನ 12.30ಕ್ಕೆ – ಇದು ಪರೀಕ್ಷೆ ಮುಕ್ತಾಯದ ಬೆಲ್‌. ಕೊಠಡಿಯ ಮೇಲ್ವಿಚಾರಕರು ಅಭ್ಯರ್ಥಿಗಳಿಂದ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ ಪತ್ರಕೆಯನ್ನು ಪಡೆದುಕೊಳ್ಳುವುದು.

ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಬಿಗಿ ಕ್ರಮ

592 ವೀಕ್ಷಕರು, 1,184 ಮಂದಿ ಇರುವ ವಿಶೇಷ ಸ್ಕ್ವಾಡ್‌, 592 ಕಸ್ಟೋಡಿಯನ್ಸ್ ಸೇರಿದಂತೆ ಒಟ್ಟು 23 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ