ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಮಾಸ್ಟರ್​​ ಪ್ಲ್ಯಾನ್​​: ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಶಿಕ್ಷಕರ ಕೊರತೆ ಮತ್ತು ಏಕೋಪಾಧ್ಯಾಯ ಶಾಲೆಗಳ ಹೆಚ್ಚಳದಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಳಿಮುಖವಾಗಿದೆ. ಇದನ್ನು ನಿಭಾಯಿಸಲು ಶಿಕ್ಷಣ ಇಲಾಖೆ 'ಮಾಸ್ಟರ್ ಪ್ಲಾನ್' ರೂಪಿಸಿದೆ. ಉಚಿತ ನೋಟ್‌ಬುಕ್‌ಗಳು, ವಾರಕ್ಕೆ ಐದು ದಿನ ಮೊಟ್ಟೆ ವಿತರಣೆ ಹಾಗೂ ಶುಲ್ಕವಿಲ್ಲದ ಶಿಕ್ಷಣದ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಇಲಾಖೆ ಮುಂದಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಮಾಸ್ಟರ್​​ ಪ್ಲ್ಯಾನ್​​: ಇಲ್ಲಿದೆ ಮಾಹಿತಿ
ಸರ್ಕಾರಿ ಶಾಲೆ
Edited By:

Updated on: Jan 15, 2026 | 3:23 PM

ಬೆಂಗಳೂರು, ಜನವರಿ 15: ಖಾಸಗಿ ಶಾಲೆಗಳ ಹಾವಳಿ ಸೇರಿ ನಾನಾ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಸಕಾ್ರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿದೆ. ಹೀಗಾಗಿ ಇವುಗಳನ್ನು ಇಳಿಕೆ ಮಾಡಲು ಶಿಕ್ಷಣ ಇಲಾಖೆ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದು, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಿನ್ನೆಲೆ ಹೊಸ ಭಾಗ್ಯಗಳ ಘೋಷಣೆಯ ಮೊರೆ ಹೋಗಿದೆ.  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಒಂದೇ ವರ್ಷದಲ್ಲಿ 2.25 ಲಕ್ಷದಷ್ಟು ಕಡಿಮೆ ಆಗಿರೋದು ಗಂಭೀರ ಪ್ರಶ್ನೆಗಳಿಗೆ ಕಾರಣವಾದ ಬೆನ್ನಲ್ಲೇ ಇಲಾಖೆ ಅಲರ್ಟ್​​ ಆಗಿದೆ.

ಹೊಸ ಯೋಜನೆ ಏನು?

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಉಚಿತವಾಗಿ ಪುಸ್ತಕ, ಶೂ, ಬಟ್ಟೆ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗ್ತಿದೆ. ಇದರ ಜೊತೆಗೆ ಇನ್ಮುಂದೆ ಓರ್ವ ವಿದ್ಯಾರ್ಥಿಗೆ 6 ನೋಟ್​​ ಬುಕ್​​ಗಳನ್ನೂ ಇಲಾಖೆ ನೀಡಲಿದೆ. ಹಾಗೆಯೇ ವಾರದ ಐದು ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಕೂಡ ಇರಲಿದೆ. ಜನವರಿಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭದ ಜೊತೆಗೆ ಯಾವುದೇ ಶುಲ್ಕಗಳು ಇಲ್ಲದಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಲು ಕ್ಯಾಂಪೇನ್​​ನ ​​ ಕೂಡ ಇಲಾಖೆ ಆರಂಭಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿವೆ 6,675 ಏಕೋಪಾಧ್ಯಾಯ ಶಾಲೆಗಳು, 188 ಸ್ಕೂಲ್​​ಗಳಲ್ಲಿ ಶೂನ್ಯ ದಾಖಲಾತಿ

ವಿಧಾನಪರಿಷತ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 188 ಸರ್ಕಾರಿ ಶಾಲೆಗಳಲ್ಲಿ ಒಂದೂ ಪ್ರವೇಶವಾಗಿಲ್ಲ. ಇದರಲ್ಲಿ 160 ಕಿರಿಯ ಪ್ರಾಥಮಿಕ ಶಾಲೆಗಳು, 25 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 3 ಪ್ರೌಢಶಾಲೆಗಳಿವೆ. ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳು ತುಮಕೂರಿನಲ್ಲಿ 45 ಇದ್ದು, ನಂತರ ಕಲಬುರಗಿ 21, ಕೋಲಾರ 20, ಕೊಪ್ಪಳ 18 ಮತ್ತು ಬೀದರ್​​ನಲ್ಲಿ 17 ಇವೆ.

ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಳ

2018ರಲ್ಲಿ 3,450 ಇದ್ದ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 2025-26ನೇ ಸಾಲಿನಲ್ಲಿ 6,675ಕ್ಕೆ ಏರಿಕೆ ಕಂಡಿದೆ. 1ರಿಂದ 5ನೇ ತರಗತಿವರೆಗೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರಾದರೂ ಇರಬೇಕು ಅಥವಾ ಕನಿಷ್ಠ 12 ಮಕ್ಕಳಿದ್ದರೆ ಇಬ್ಬರು ಶಿಕ್ಷಕರಿರಬೇಕೆಂಬ ನಿಯಮ ಇದೆ. ಆದರೆ ಶಿಕ್ಷಕರ ಸಂಖ್ಯೆಯ ಕೊರತೆಯ ಕಾರಣ ಈ ನಿಯಮ ಪಾಲನೆ ಆಗುತ್ತಿಲ್ಲ. ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಅದಾಗಲೇ ಖಾಲಿ ಇದ್ದು, 2028ರವೇಳೆಗೆ ಇನ್ನೂ 28 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:22 pm, Thu, 15 January 26