ಬೆಂಗಳೂರು: ಕೊರೊನಾ ಸೋಂಕು ಹಾವಳಿಯ ಹಿನ್ನೆಲೆಯಲ್ಲಿ, 2021-22ನೇ ಸಾಲಿಗೆ ಅನ್ವಯವಾಗುವಂತೆ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ‘ಪೂರ್ಣ ಕ್ಯಾರಿ ಓವರ್’ಗೆ ಅನುಮತಿ ನೀಡಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ. ಕೊವಿಡ್ ಸಂಕಷ್ಟ ಹಿನ್ನೆಲೆ 2021-22ನೇ ಸಾಲಿನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಫುಲ್ ಕ್ಯಾರಿ ಓವರ್ ನೀಡಲು ನಿರ್ಧಾರ ಮಾಡಲಾಗಿದ್ದು ಹಾಲಿ ಚಾಲ್ತಿಯಲ್ಲಿರುವ ಗರಿಷ್ಠ 4 ವಿಷಯಗಳ ಕ್ಯಾರಿ ಓವರ್ ಮಿತಿಯ ಬದಲು ಫುಲ್ ಕ್ಯಾರಿ ಓವರ್ ನೀಡಲು ಉನ್ನತ ಶಿಕ್ಷಣ ಇಲಾಖೆಯಿಂದ ನಿರ್ಧರಿಸಿದೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ‘ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಗರಿಷ್ಠ 4 ವಿಷಯಗಳಿಗೆ ಮಾತ್ರ ಕ್ಯಾರಿ ಓವರ್ ಕೊಡುವ ಪದ್ಧತಿ ಇದೆ. ಆದರೆ, ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದರಿಂದ ವಿದ್ಯಾರ್ಥಿಗಳಿಗೆ ಅನನುಕೂಲವಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಸ್ತಕ ಶೈಕ್ಷಣಿಕ ವರ್ಷಕ್ಕೆ ಪೂರ್ಣ ಕ್ಯಾರಿ ಓವರ್ ಗೆ ಅವಕಾಶ ಕೊಡಲಾಗಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: 3 ವರ್ಷಗಳ ಡಿಪ್ಲೊಮಾ ನೇರ ನೇಮಕಾತಿ, ಅನುಕಂಪದ ನೇಮಕಾತಿ, ಉನ್ನತ ಶಿಕ್ಷಣ ಪಡೆಯಲು ಪಿಯುಸಿಗೆ ಸಮ
ಇದನ್ನೂ ಓದಿ: ಡಿಪ್ಲೊಮಾ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಪರೀಕ್ಷೆಗೆ ತೀವ್ರ ವಿರೋಧ