ಎಸ್​ಎಸ್​ಎಲ್​ಸಿ ನಂತರ ಮುಂದೇನು: ವಿದ್ಯಾರ್ಥಿಗಳ ಮನದ ಗೊಂದಲಕ್ಕೆ ಯುವಸ್ಪಂದನದ ಉತ್ತರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 20, 2022 | 3:13 PM

ಪಿಯುಸಿಯಲ್ಲಿ ಹೀಗಾಗಿ ಯಾವ ವಿಭಾಗ ಆರಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಆಪ್ತಸಮಾಲೋಚನೆ ಮಹತ್ವದ ಪಾತ್ರ ನಿರ್ವಹಿಸುತ್ತದೆ.

ಎಸ್​ಎಸ್​ಎಲ್​ಸಿ ನಂತರ ಮುಂದೇನು: ವಿದ್ಯಾರ್ಥಿಗಳ ಮನದ ಗೊಂದಲಕ್ಕೆ ಯುವಸ್ಪಂದನದ ಉತ್ತರ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: 10ನೇ ತರಗತಿಯವರೆಗೆ (ಎಸ್​ಎಸ್​ಎಲ್​ಸಿ) ಸರ್ಕಾರ ನಿಗದಿಪಡಿಸಿರುವ ಪಠ್ಯಕ್ರಮವನ್ನಷ್ಟೇ ಓದಿ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಮುಗಿದ ನಂತರ ಯಾವ ವಿಭಾಗ ಆರಿಸಿಕೊಳ್ಳಬೇಕೆಂಬ ಗೊಂದಲಕ್ಕೆ ಒಳಗಾಗುತ್ತಾರೆ. ವಾಣಿಜ್ಯ (Commerce), ವಿಜ್ಞಾನ (Science) ಮತ್ತು ಕಲಾ (Arts) ವಿಭಾಗಗಳ ಪೈಕಿ ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತವೆ. ಈ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ವಿದ್ಯಾರ್ಥಿಯ ವಿದ್ಯಾಭ್ಯಾಸವಷ್ಟೇ ಅಲ್ಲ, ವೃತ್ತಿ ಭವಿಷ್ಯವನ್ನೂ ನಿರ್ಧರಿಸಲಿದೆ. ಹೀಗಾಗಿ ಯಾವ ವಿಭಾಗ ಆರಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಆಪ್ತಸಮಾಲೋಚನೆ ಮಹತ್ವದ ಪಾತ್ರ ನಿರ್ವಹಿಸುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಯುವಸ್ಪಂದನ ಸಹಾಯವಾಣಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಯುವಸ್ಪಂದನ ಸಹಾಯವಾಣಿಯ ಮೂಲಕ ಯಾವ ವಿಭಾಗ ಆರಿಸಿಕೊಳ್ಳುವುದರ ಪರಿಣಾಮ ಏನು ಎಂಬ ಬಗ್ಗೆ ಮಾಹಿತಿ, ಮಾರ್ಗದರ್ಶನ ಪಡೆದುಕೊಳ್ಳಬಹುದು. ಸಹಾಯವಾಣಿಯ ಜೊತೆಗೆ ಜಿಲ್ಲಾ ಕ್ರೀಡಾಂಗಣಗಳಲ್ಲಿರುವ ಯುವಸ್ಪಂದನ ಕೇಂದ್ರಗಳಲ್ಲಿಯೂ ಆಸಕ್ತ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.

ಯುವಸ್ಪಂದನ ಕೇಂದ್ರಗಳ ಮೂಲಕ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ನಪಾಸಾದವರಿಗೂ ಧೈರ್ಯತುಂಬಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಫೇಲ್ ಆದವರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಕೇವಲ ಒಂದೇ ಒಂದು ಪರೀಕ್ಷೆ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಚಿಂತೆ ಮಾಡದೆ ಪೂರಕ ಪರೀಕ್ಷೆಗೆ ತಯಾರಾಗಿ. ಯುವ ಸ್ಪಂದನ ಕೇಂದ್ರದಲ್ಲಿ ಅಗತ್ಯ ಶೈಕ್ಷಣಿಕ ನೆರವು ಒದಗಿಸಲಾಗುವುದು ಎಂದು ಸರ್ಕಾರವು ಭರವಸೆ ತುಂಬಿದೆ.

ಯುವಸ್ಪಂದನ ಸೌಲಭ್ಯ ಪಡೆದುಕೊಳ್ಳಲು ಇಚ್ಛಿಸುವವರು 155265 ಸಂಖ್ಯೆಗೆ ಕರೆ ಮಾಡಬಹುದು.

Published On - 3:13 pm, Fri, 20 May 22