AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC Repeaters 2022: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದ ಸಂಪೂರ್ಣ ಮಾಹಿತಿ

2021-2022 ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಅನುತೀರ್ಣರಾದ ಎಲ್ಲಾ ರಿಪೀಟರ್ಸ್ಗಳಿಗೆ ಜೂನ್ 27 ರಿಂದ ಜುಲೈ 4 ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. 20/05/2022 ರಿಂದ 30/5/2022 ವರೆಗೆ ರಿಜಿಸ್ಟರ್ ಮಾಡಲು ಅವಕಾಶ ನೀಡಲಾಗಿದೆ.

SSLC Repeaters 2022: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದ ಸಂಪೂರ್ಣ ಮಾಹಿತಿ
ಸಾಂಧರ್ಬಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:May 19, 2022 | 9:53 PM

Share

ಬೆಂಗಳೂರು: ವರ್ಷಪೂರ್ತಿ ಕಷ್ಟಪಟ್ಟು ಓದಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಸಂತಸದಲ್ಲಿ ತೇಲುತ್ತಿದ್ದಾರೆ. ಇಂದು (ಮೇ 29) ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪರೀಕ್ಷೆಯ ರಿಸಲ್ಟ್ನ ಘೋಷಿಸಿದ್ದಾರೆ. ರಾಜ್ಯದ ಶೇಕಡಾವಾರು ಫಲಿತಾಂಶ 85.63 ಪರ್ಸೆಂಟ್ ಬಂದಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಕೊರೊನಾ ವರ್ಷ ಹೊರತುಪಡಿಸಿ ಕಳೆದ 10 ವರ್ಷದಲ್ಲಿ ಅತ್ಯಂತ ಹೆಚ್ಚು ಶೇಕಡಾವಾರು ಫಲಿತಾಂಶ ಈ ವರ್ಷ ಬಂದಿದೆ. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಭಾಗದ ಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಈ ವರ್ಷ 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನ ಪಡೆದು ಟಾಪರ್ ಆಗಿದ್ದಾರೆ. 2021-2022 ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಅನುತೀರ್ಣರಾದ ಎಲ್ಲಾ ರಿಪೀಟರ್ಸ್ಗಳಿಗೆ ಜೂನ್ 27 ರಿಂದ ಜುಲೈ 4 ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. 20/05/2022 ರಿಂದ 30/5/2022 ವರೆಗೆ ರಿಜಿಸ್ಟರ್ ಮಾಡಲು ಅವಕಾಶ ನೀಡಲಾಗಿದೆ.

ಫೇಲ್ ಆದ ಅಭ್ಯರ್ಥಿಗಳಿಗೆ ಪೂರಕ ಪರೀಕ್ಷೆ ಜೂನ್ 27ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, https://sslc.karnataka.gov.in ಗೆ ಲಾಗಿನ್ ಆಗಿ ಆನ್ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಮೇ 30ರವರೆಗೆ ಅವಕಾಶ ಕಲ್ಪಿಸಲಾಗಿದೆ. 2002-03ರಿಂದ 2021- 22ರ ಮುಖ್ಯ ಪರೀಕ್ಷೆವರೆಗೆ ಮತ್ತು 2002-2003ಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಈ ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಬೆಳಗ್ಗೆ 10:30ರಿಂದ 1:45ರ ತನಕ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನ ನೀಡಲಾಗುತ್ತದೆ. ಇದನ್ನೂ ಓದಿ: SSLC Result: ಬಡತನ ಮೆಟ್ಟಿನಿಂತು ಸಾಧನೆ ಮಾಡಿದ 1st Rank ಅಮಿತ್ ಮಾದರ: ಕಟ್ಟಿಕೊಂಡಿರುವ ಕನಸಾದರೂ ಏನು ಗೊತ್ತಾ?

ಪೂರಕ ಪರೀಕ್ಷೆ ನೋಂದಣಿ ಹೇಗೆ? 1.2002-03ರಿಂದ 2021-22ರ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆವರೆಗೆ ಅನುತ್ತೀರ್ಣರಾದ ಅಭ್ಯರ್ಥಿಗಳು https://sslc.karnataka.gov.in ಗೆ ಲಾಗಿನ್ ಆಗಿ ನೋಂದಾಯಿಸಿಕೊಳ್ಳಬಹುದು. 2.Registration for June 2022 Examನ್ನು ಕ್ಲಿಕ್ ಮಾಡಿದಾಗ Upload Repeaters Details ಎನ್ನುವ ಆಯ್ಕೆಯನ್ನು ಒತ್ತಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ನೊಂದಣಿ ಸಂಖ್ಯೆಯನ್ನು ನಮೂದಿಸಿ Submit ಕೊಡಬೇಕು. 3.ಜೂನ್ 2022ರ ಪೂರಕ ಪರೀಕ್ಷೆಗೆ ಹಾಜರಾಗುವ ಅರ್ಹ ಅನುತ್ತೀರ್ಣ ವಿದ್ಯಾರ್ಥಿಗಳು ಮಾತ್ರ ಭಾವಚಿತ್ರ (60-80kb) ಹಾಗೂ ಸಹಿ(40-50 kb) ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡಿ Save ಮಾಡಬೇಕು. 4.2003ಕ್ಕೂ ಹಿಂದಿನ ವರ್ಷದ ಅನುತ್ತೀರ್ಣ ವಿದ್ಯಾರ್ಥಿಗಳು MSA ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಮೂಲಕ ಸಲ್ಲಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪರೀಕ್ಷಾ ಶುಲ್ಕದ ಮಾಹಿತಿ ಒಂದು ವಿಷಯಕ್ಕೆ – 370 ರೂ. ಎರಡು ವಿಷಯಕ್ಕೆ – 461 ರೂ. ಮೂರು ಅಥವಾ ಮೂರಕ್ಕಿಂತ ಮೇಲ್ಪಟ್ಟು -620 ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹಾಗೂ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಪೂರಕ ಪರೀಕ್ಷೆಯ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದೆ.

ಸಹಾಯವಾಣಿ: ಪೂರಕ ಪರೀಕ್ಷೆಯ ನೋಂದಣಿ ಇತ್ಯಾದಿ‌ ವಿಷಯಗಳ ಕುರಿತು ಯಾವುದೇ ಮಾಹಿತಿ ಪಡೆಯಲು ಇಲಾಖೆ ಸಹಾಯವಾಣಿ ಆರಂಭಿಸಿದೆ. 080-23310075, 080-23310076, 080-23562267, 080- 23561271ಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.

Published On - 9:53 pm, Thu, 19 May 22

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ