ಬೀದರ್: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 60 ಸೀಟುಗಳೊಂದಿಗೆ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ (BSc Nursing) ಆರಂಭಿಸಲು ಆರೋಗ್ಯ ವಿವಿಯಿಂದ ಅನುಮತಿ ನೀಡಲಾಗಿದೆ. ಈ ಕುರಿತಾಗಿ ಸಚಿವ ಡಾ. ಕೆ. ಸುಧಾಕರ ಅವರು ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಕೊಡುಗೆ. ಯಾದಗಿರಿಯಲ್ಲಿ 150 ಎಂಬಿಬಿಎಸ್ ಸೀಟುಗಳೊಂದಿಗೆ ನೂತನ ಸರ್ಕಾರಿ ಮೆಡಿಕಲ್ ಕಾಲೇಜಿನ ಆರಂಭಕ್ಕೆ ಅನುಮತಿ ದೊರೆತಿರುವ ಬೆನ್ನಲ್ಲೇ ಈಗ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 60 ಸೀಟುಗಳೊಂದಿಗೆ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್ ಆರಂಭಿಸಲು ಆರೋಗ್ಯ ವಿವಿಯಿಂದ ಅನುಮತಿ ದೊರೆತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ಅಲ್ಪಾವಧಿ ಕೋರ್ಸ್ ಪ್ರಾರಂಭಕ್ಕೆ ಸರ್ಕಾರ ಚಿಂತನೆ: ಸಿಎಂ ಬೊಮ್ಮಾಯಿ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಕೊಡುಗೆ!
ಯಾದಗಿರಿಯಲ್ಲಿ 150 ಎಂಬಿಬಿಎಸ್ ಸೀಟುಗಳೊಂದಿಗೆ ನೂತನ ಸರ್ಕಾರಿ ಮೆಡಿಕಲ್ ಕಾಲೇಜಿನ ಆರಂಭಕ್ಕೆ ಅನುಮತಿ ದೊರೆತಿರುವ ಬೆನ್ನಲ್ಲೇ ಈಗ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 60 ಸೀಟುಗಳೊಂದಿಗೆ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್ ಆರಂಭಿಸಲು ಆರೋಗ್ಯ ವಿವಿಯಿಂದ ಅನುಮತಿ ದೊರೆತಿದೆ.
1/2 pic.twitter.com/X4hqkiV92n
— Dr Sudhakar K (@mla_sudhakar) December 30, 2022
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿನಿಯಮ, 1994ರ ಕಲಂ 45(5)ರಡಿ ಅಧಿಕಾರವನ್ನು ಚಲಾಯಿಸಿ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲೆಯಲ್ಲಿ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ನ್ನು 60 ಸೀಟುಗಳ ಪ್ರವೇಶಮಿತಿಯೊಂದಿಗೆ 2022-23ನೇ ಸಾಲಿನಿಂದ ಹೊಸದಾಗಿ ಪ್ರಾರಂಭಿಸಲು ಅನುಮತಿ ನೀಡಿದ್ದು, ಕೆಲ ಷರತ್ತುಗಳನ್ನು ಸಹ ವಿಧಿಸಲಾಗಿದೆ.
ಇದನ್ನೂ ಓದಿ: Pariksha Pe Charcha 2023: ಪರೀಕ್ಷಾ ಪೇ ಚರ್ಚಾ 2023 ನೋಂದಣಿಗೆ ಇಂದು ಕೊನೆ ದಿನಾಂಕ
ಆರೋಗ್ಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಈ ಹಿಂದೆಯೇ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸುತ್ತು. ಅದನ್ನು ಪರಿಶೀಲಿಸಿರುವ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ವೈದ್ಯಕೀಯ ಕ್ಷೇತ್ರಾಸಕ್ತ ವಿದ್ಯಾರ್ಥಿಗಳ ಕಲಿಕೆ ಅನುಕೂಲವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Fri, 30 December 22