Pariksha Pe Charcha 2023: ಪರೀಕ್ಷಾ ಪೇ ಚರ್ಚಾ 2023 ನೋಂದಣಿಗೆ ಇಂದು ಕೊನೆ ದಿನಾಂಕ
ಪರೀಕ್ಷಾ ಪೇ ಚರ್ಚಾ ವಿಶಿಷ್ಟವಾದ ಸಂವಾದಾತ್ಮಕ ಕಾರ್ಯಕ್ರಮವಾಗಿದ್ದು ಇದರಲ್ಲಿ ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ನರೇಂದ್ರ ಮೋದಿ ಜತೆ ಸಂವಹನ ನಡೆಸುತ್ತಾರೆ.
ಪರೀಕ್ಷಾ ಪೇ ಚರ್ಚಾ 2023 (Pariksha Pe Charcha) ನೋಂದಣಿಗೆ ಇಂದು (ಡಿಸೆಂಬರ್ 30) ಕೊನೆಯ ದಿನಾಂಕವಾಗಿದೆ. 9 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಇದಕ್ಕಾಗಿ www.innovateindia.mygov.in ನಲ್ಲಿ ಅರ್ಜಿ ಸಲ್ಲಿಸಬಬಹುದು. ಆನ್‌ಲೈನ್ ಸೃಜನಶೀಲ ಬರವಣಿಗೆ ಸ್ಪರ್ಧೆಯ ಮೂಲಕ ಅವರನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷಾ ಪೇ ಚರ್ಚಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ನಡೆಸುವ ವಿಶಿಷ್ಟವಾದ ಸಂವಾದಾತ್ಮಕ ಕಾರ್ಯಕ್ರಮವಾಗಿದೆ. ಇದರಲ್ಲಿ ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಮತ್ತು ಅವರೊಂದಿಗೆ ಸಂವಹನ ನಡೆಸುತ್ತಾರೆ. ಪರೀಕ್ಷೆಯ ಒತ್ತಡವನ್ನು ನಿವಾರಿಸಲು ಇಲ್ಲಿ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. MyGov ನಲ್ಲಿ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಶಿಕ್ಷಣ ಸಚಿವಾಲಯದಿಂದ PPC ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ PPC 2023 ಥೀಮ್‌ಗಳು
ನಿಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ತಿಳಿದುಕೊಳ್ಳಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ನನ್ನ ಪುಸ್ತಕ ನನ್ನ ಸ್ಫೂರ್ತಿ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ನನ್ನ ಜೀವನ, ನನ್ನ ಆರೋಗ್ಯ ಆರೋಗ್ಯವಾಗಿರುವುದು ಏಕೆ ಮುಖ್ಯ? ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಏನು ಮಾಡುತ್ತೀರಿ? ನನ್ನ ಸ್ಟಾರ್ಟ್ಅಪ್ ಕನಸು STEM ಶಿಕ್ಷಣ / ಗಡಿಗಳಿಲ್ಲದ ಶಿಕ್ಷಣ ಶಾಲೆಗಳಲ್ಲಿ ಕಲಿಕೆಗಾಗಿ ಆಟಿಕೆಗಳು ಮತ್ತು ಆಟಗಳು
ಶಿಕ್ಷಕರಿಗಾಗಿ PPC 2023 ಥೀಮ್‌ಗಳು
ನಮ್ಮ ಪರಂಪರೆ ಕಲಿಕೆಯ ಪರಿಸರವನ್ನು ಸಕ್ರಿಯಗೊಳಿಸುವುದು ಕೌಶಲ್ಯಕ್ಕಾಗಿ ಶಿಕ್ಷಣ ಕಡಿಮೆ ಪಠ್ಯಕ್ರಮದ ಹೊರೆ ಮತ್ತು ಪರೀಕ್ಷಾ ಭಯ ಇಲ್ಲದಿರುವುದು ಭವಿಷ್ಯದ ಶೈಕ್ಷಣಿಕ ಸವಾಲುಗಳು
ಪೋಷಕರಿಗಾಗಿ ಥೀಮ್‌ಗಳು
ನನ್ನ ಮಗು, ನನ್ನ ಶಿಕ್ಷಕ ವಯಸ್ಕರ ಶಿಕ್ಷಣ- ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವುದು ಒಟ್ಟಿಗೆ ಕಲಿಯುವುದು ಮತ್ತು ಬೆಳೆಯುವುದು
ಇದನ್ನೂ ಓದಿ:ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ನೋಂದಣಿ ಆರಂಭ
PPC 2023 ಕಾರ್ಯಕ್ರಮವು ಜನವರಿ 2023 ರಲ್ಲಿ ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಟೌನ್ ಹಾಲ್ ರೂಪದಲ್ಲಿ ನಡೆಯಲಿದೆ. 2022 ರಲ್ಲಿ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 2.71 ಲಕ್ಷ ಶಿಕ್ಷಕರು ಮತ್ತು 90,000 ಪೋಷಕರು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ.
ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ