Heeraben Funeral: ಶತಾಯುಷಿ ಹೀರಾಬೆನ್ ನಿಧನ; ತಾಯಿಯ ಅಂತಿಮಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ನರೇಂದ್ರ ಮೋದಿ

Heeraben Funeral: ಶತಾಯುಷಿ ಹೀರಾಬೆನ್ ನಿಧನ; ತಾಯಿಯ ಅಂತಿಮಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ನರೇಂದ್ರ ಮೋದಿ

TV9 Web
| Updated By: Digi Tech Desk

Updated on:Dec 30, 2022 | 9:45 AM

ಶತಾಯುಷಿಯಾಗಿದ್ದ ತಮ್ಮ ತಾಯಿಯ ಅಂತಿಮ ದರ್ಶನ ಪಡೆದ ನರೇಂದ್ರ ಮೋದಿ ಅಂತಿಮಯಾತ್ರೆಯಲ್ಲಿ ತಾಯಿ ಹೀರಾಬೆನ್ ಅವರ ಮೃತದೇಹಕ್ಕೆ ಹೆಗಲು ಕೊಟ್ಟಿದ್ದಾರೆ.

ಗುಜರಾತ್​​ನ ಅಹಮದಾಬಾದ್​ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ (Heeraben Modi) ಕೊನೆಯುಸಿರೆಳೆದಿದ್ದಾರೆ. ಶತಾಯುಷಿಯಾಗಿದ್ದ ತಮ್ಮ ತಾಯಿಯ ಅಂತಿಮ ದರ್ಶನ ಪಡೆದ ನರೇಂದ್ರ ಮೋದಿ (Narendra Modi) ಅಂತಿಮಯಾತ್ರೆಯಲ್ಲಿ ತಾಯಿ ಹೀರಾಬೆನ್ ಅವರ ಮೃತದೇಹಕ್ಕೆ ಹೆಗಲು ಕೊಟ್ಟಿದ್ದಾರೆ. ಗಾಂಧಿನಗರದ (Gandhinagar) ರಸ್ತೆಗಳಲ್ಲಿ ತಾಯಿಯ ಮೃತದೇಹವನ್ನು ಹೊತ್ತು ಸಾಗಿದ ನರೇಂದ್ರ ಮೋದಿ ಅಮ್ಮನಿಗೆ ಅಂತಿಮ ವಿದಾಯ ಹೇಳಿದ್ದಾರೆ. ಗುಲಾಬಿ ಹೂವಿನ ಎಸಳುಗಳನ್ನು ಅಂತಿಮಯಾತ್ರೆಯ ರಸ್ತೆಯುದ್ದಕ್ಕೂ ಹಾಕುವ ಮೂಲಕ ಹೀರಾಬೆನ್ ಮೋದಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.

Published on: Dec 30, 2022 09:25 AM