ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ನೋಂದಣಿ ಆರಂಭ
Pariksha Pe Charcha ಪರೀಕ್ಷಾ ಪೇ ಚರ್ಚಾದಲ್ಲಿ ಪೋಷಕರು ಮತ್ತು ಶಿಕ್ಷಕರು ಕೂಡಾ ಭಾಗವಹಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾರೆ
ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂವಾದ ನಡೆಸುವ ಪರೀಕ್ಷಾ ಪೇ ಚರ್ಚಾದ 2023ರ(Pariksha Pe Charcha) ಆವೃತ್ತಿಯ ನೋಂದಣಿ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 9-12 ನೇ ತರಗತಿಯ ವಿದ್ಯಾರ್ಥಿಗಳು mygov.in ನಲ್ಲಿ ನೋಂದಾಯಿಸಿಕೊಂಡ ನಂತರ PPC 2023 ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಗೆಲ್ಲಬಹುದು.PPC ಯಲ್ಲಿ ಪ್ರಧಾನಿ ಮೋದಿ ಅವರು ಪರೀಕ್ಷೆಯ ಒತ್ತಡವನ್ನು ಜಯಿಸಲು ವಿದ್ಯಾರ್ಥಿಗಳೊಂದಿಗೆ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿದ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಪರೀಕ್ಷಾ ಪೇ ಚರ್ಚಾದಲ್ಲಿ ಪೋಷಕರು ಮತ್ತು ಶಿಕ್ಷಕರು ಕೂಡಾ ಭಾಗವಹಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾರೆ. ವಿದ್ಯಾರ್ಥಿಗಳ ಎಲ್ಲಾ ಕನಸುಗಳು ಮತ್ತು ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಏನು ಮಾಡಬೇಕೆಂಬುದರ ಬಗ್ಗೆಯೂ ಸಲಹೆ ನೀಡುತ್ತಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದರ ಜೊತೆಗೆ, MyGov ನಲ್ಲಿನ ಸ್ಪರ್ಧೆಯ ಮೂಲಕ ಆಯ್ಕೆಯಾದ ಸುಮಾರು 2,050 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಶಿಕ್ಷಣ ಸಚಿವಾಲಯವು ಪರೀಕ್ಷಾ ಪೆ ಚರ್ಚಾ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಿದೆ.
ಸಂವಾದದಲ್ಲಿ ಭಾಗವಹಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ 25 ರಲ್ಲಿ ನೋಂದಾಯಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ — innovateindia.mygov.in/ppc-2023 ನಲ್ಲಿ ನೋಂದಾಯಿಸಿಕೊಳ್ಳಬಹುದು.
Know the mantra to overcome your fears & celebrate exams like festivals!
Take part in #PPC2023 activities & stand a chance to interact directly with Hon’ble PM Shri @narendramodi.
Visit: https://t.co/PpA2Mja27s #ParikshaPeCharcha2023 pic.twitter.com/mDxv2Uzc0h
— Ministry of Education (@EduMinOfIndia) November 29, 2022
“ನಿಮ್ಮ ಭಯವನ್ನು ಹೋಗಲಾಡಿಸಲು ಮತ್ತು ಹಬ್ಬಗಳಂತೆ ಪರೀಕ್ಷೆಗಳನ್ನು ಆಚರಿಸಲು ಮಂತ್ರವನ್ನು ತಿಳಿದುಕೊಳ್ಳಿ! #PPC2023 ಚಟುವಟಿಕೆಗಳಲ್ಲಿ ಭಾಗವಹಿಸಿ ಮತ್ತು ಗೌರವಾನ್ವಿತ ಪ್ರಧಾನಿಯವರೊಂದಿಗೆ ನೇರವಾಗಿ ಸಂವಹನ ನಡೆಸುವ ಅವಕಾಶವನ್ನು ಪಡೆದುಕೊಳ್ಳಿ, ”ಎಂದು ಶಿಕ್ಷಣ ಸಚಿವಾಲಯ ಟ್ವೀಟ್ ಮಾಡಿದೆ.
ನೋಂದಣಿ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ: https://innovateindia.mygov.in/ppc-2023/