ಗುಜರಾತ್‌ನಲ್ಲಿ ಕಾಂಗ್ರೆಸ್ ಚುನಾವಣಾ ರ‍್ಯಾಲಿ ವೇಳೆ ನುಗ್ಗಿದ ಗೂಳಿ; ಬಿಜೆಪಿಯದ್ದೇ ಕೈವಾಡ ಎಂದ ಗೆಹ್ಲೋಟ್
Gujarat Assembly Elections: ಬಿಜೆಪಿಗೆ ಹಿಡಿಶಾಪ ಹಾಕಿರುವ ಅಶೋಕ್ ಗೆಹ್ಲೋಟ್, ನಾನು ಚಿಕ್ಕಂದಿನಿಂದಲೂ ಕಾಂಗ್ರೆಸ್ ಸಭೆ ನಡೆದಾಗಲೆಲ್ಲ ಈ ಬಿಜೆಪಿಗರು ಗೂಳಿ, ಹಸುಗಳನ್ನು ಬಿಡುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ.
ಅಹಮದಾಬಾದ್: ಗುಜರಾತ್‌ನಲ್ಲಿ ಚುನಾವಣೆಗೂ (Gujarat Assembly Elections 2022) ಮುನ್ನ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಗುಜರಾತ್ ಚುನಾವಣೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಭಾಷಣ ಮಾಡುತ್ತಿದ್ದಾಗ ಗೂಳಿಯೊಂದು ಆ ಸ್ಥಳಕ್ಕೆ ನುಗ್ಗಿದೆ. ಗುಜರಾತ್‌ನ ಮೆಹ್ಸಾನಾದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಚುನಾವಣಾ ರ‍್ಯಾಲಿ ಇತ್ತು. ಈ ವೇಳೆ ಗೂಳಿಯೊಂದು ಸಭೆಯ ಮಧ್ಯದಲ್ಲಿ ನುಗ್ಗಿತು. ಈ ಬಗ್ಗೆ ಬಿಜೆಪಿಗೆ ಹಿಡಿಶಾಪ ಹಾಕಿರುವ ಅಶೋಕ್ ಗೆಹ್ಲೋಟ್, ನಾನು ಚಿಕ್ಕಂದಿನಿಂದಲೂ ಕಾಂಗ್ರೆಸ್ ಸಭೆ ನಡೆದಾಗಲೆಲ್ಲ ಈ ಬಿಜೆಪಿಗರು ಗೂಳಿ, ಹಸುಗಳನ್ನು ಬಿಡುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ.
ನಮ್ಮ ಸಭೆಗೆ ಅಡ್ಡಿಪಡಿಸಲು ಬಿಜೆಪಿಯವರು ಈ ಗೂಳಿಯನ್ನು ಕಳುಹಿಸಿದ್ದಾರೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಭೆಗಳಿಗೆ ಅಡ್ಡಿಪಡಿಸಲು ಇಂತಹ ಇನ್ನಷ್ಟು ತಂತ್ರಗಳನ್ನು ಅನುಸರಿಸಲಿದೆ. ಗೂಳಿ ಸಭೆಗೆ ಪ್ರವೇಶಿಸಿದಾಗ ಗೊಂದಲ ಉಂಟಾಯಿತು. ಸಭೆಯಲ್ಲಿ ಸೇರಿದ್ದ ಜನರಿಗೆ ಶಾಂತವಾಗಿರಲು ಹೇಳಿದ ಸಿಎಂ ಅಶೋಕ್ ಗೆಹ್ಲೋಟ್, ಗೂಳಿ ತಾನಾಗಿಯೇ ಹೊರಹೋಗುತ್ತದೆ ಎಂದು ಹೇಳಿದರು.
गुजरात मे @ashokgehlot51 की सभा में घुसा सांड!! सीएम बोले…. मैं बचपन से देखता आ रहा हूं, ये भाजपा भेजती है मेरी सभा में सांडों को. pic.twitter.com/RkB8oSmowx
— Sharad (@DrSharadPurohit) November 28, 2022
ಇದನ್ನೂ ಓದಿ: Ashok Gehlot: ಸಚಿನ್ ಪೈಲಟ್ನಂತಹ ದೇಶದ್ರೋಹಿ ಸಿಎಂ ಆಗಲು ಅಸಾಧ್ಯ; ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಗೂಳಿ ಅಲ್ಲಿ ಇಲ್ಲಿ ಓಡುತ್ತಿದ್ದು, ಅದನ್ನು ತಪ್ಪಿಸಲು ಜನರು ಓಡಿದ್ದಾರೆ. ಇಷ್ಟೆಲ್ಲ ಗದ್ದಲದ ನಡುವೆ ಅಶೋಕ್ ಗೆಹ್ಲೋಟ್ ವೇದಿಕೆಯಿಂದ ಶಾಂತವಾಗಿರುವಂತೆ ಜನರಿಗೆ ಸಲಹೆ ನೀಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಇದು ಬಿಜೆಪಿಯ ಷಡ್ಯಂತ್ರ ಎಂದು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.