ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಸ್ಪೆಷಲಿಸ್ಟ್ ಆಫೀಸರ್ (SO)ಹುದ್ದೆ ನೇಮಕಾತಿಗಾಗಿ ಅಭ್ಯರ್ಥಿಗಳಿಗೆ ನಡೆಸಲಾಗಿದ್ದ ಪೂರ್ವಭಾವಿ ಪರೀಕ್ಷೆ (preliminary Exams) ಫಲಿತಾಂಶವನ್ನು ಐಬಿಪಿಎಸ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ 2022ರ ಜನವರಿ 18ರಂದು ಪ್ರಕಟಿಸಿದೆ. ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿ, ಪೂರ್ವಭಾವಿ ಪರೀಕ್ಷೆ ಬರೆದವರು https://ibps.in. ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳಬಹುದು. ಅಂದಹಾಗೇ, ಫಲಿತಾಂಶ ಜನವರಿ 24ರವರೆಗೂ ವೆಬ್ಸೈಟ್ನಲ್ಲಿ ಇರಲಿದೆ.
ರಿಸಲ್ಟ್ ನೋಡುವುದು ಹೇಗೆ?
1. ಮೊದಲು ಐಬಿಪಿಎಸ್ನ ವೆಬ್ಸೈಟ್ https://ibps.in ಗೆ ಭೇಟಿ ನೀಡಿ
2. ಹೋಂ ಪೇಜ್ನಲ್ಲಿ ಕಾಣಿಸಿಕೊಳ್ಳುವ IBPS SO Prelims Result 2021 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ ನಿಮ್ಮ ನೋಂದಣಿ ನಂಬರ್, ಹುಟ್ಟಿದ ದಿನಾಂಕ ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
4. ಆಗ ಐಬಿಪಿಎಸ್ ಎಸ್ಒ ಪೂರ್ಭಭಾವಿ ಪರೀಕ್ಷೆ 2021ರ ನಿಮ್ಮ ಫಲಿತಾಂಶ ಅಲ್ಲಿ ಕಾಣಿಸಿಕೊಳ್ಳುತ್ತದೆ.
5. ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅಗತ್ಯವಿರುವಷ್ಟು ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಐಬಿಪಿಎಸ್ ಎಸ್ಒ ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಈ ಪರೀಕ್ಷೆ ಜನವರಿ 30ರಂದು ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಪಾಸ್ ಆದವರು ಮುಂದಿನ ಸುತ್ತು ಸಂದರ್ಶನವನ್ನು ಎದುರಿಸಬೇಕಾಗುತ್ತದೆ. ಸ್ಪೆಷಲಿಸ್ಟ್ ಆಫೀಸರ್ ವಿಭಾಗದಲ್ಲಿ ಖಾಲಿ ಇರುವ ಒಟ್ಟು 1828 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅದರಡಿ ಪೂರ್ವಭಾವಿ ಪರೀಕ್ಷೆಯೊಂದು ಮುಕ್ತಾಯಗೊಂಡಿದೆ. 2021ರ ನವೆಂಬರ್ 3ರಿಂದ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಡಿಸೆಂಬರ್ 26ರಂದು ಪೂರ್ಭಾವಿ ಪರೀಕ್ಷೆ ನಡೆದಿತ್ತು. ಡಿಸೆಂಬರ್ 10ರಂದು ಅಭ್ಯರ್ಥಿಗಳ ಪ್ರವೇಶ ಪತ್ರ ಬಿಡುಗಡೆಯಾಗಿತ್ತು.
ಇದನ್ನೂ ಓದಿ: ‘ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿದೆ’ ಎಂದು ಬರ್ತ್ಡೇ ಆಚರಣೆಗೆ ದುನಿಯಾ ವಿಜಯ್ ಬ್ರೇಕ್