ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಿಎಂಎ ಜೂನ್ ಪರೀಕ್ಷೆ 2023 (ICMAI CMA) ನೋಂದಣಿಗಳನ್ನು ನಡೆಸುತ್ತಿದೆ ಮತ್ತು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ (ಫೆಬ್ರವರಿ 10). ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ icmai.in ನಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್ icmai.in ನಲ್ಲಿ ನೋಂದಣಿ ಪೋರ್ಟಲ್ ತೆರೆದಿದೆ. ನೋಂದಣಿ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳು ತಡ ಮಾಡದೆ ಈಗಲೇ ಅರ್ಜಿ ಸಲ್ಲಿಸಿ. ಕೊನೆಯ ಕ್ಷಣದಲ್ಲಾಗುವ ಗಾಬರಿಯಿಂದ ತಪ್ಪಿಸಿಕೊಳ್ಳಿ. ಕೊನೆಯ ದಿನಾಂಕವು ಮೂಲತಃ ಜನವರಿ 31, 2023 ಆಗಿತ್ತು ಆದರೆ ನಂತರ ಅದನ್ನು ಫೆಬ್ರವರಿ 10, 2023 ರವರೆಗೆ ವಿಸ್ತರಿಸಲಾಯಿತು.
“1959 ರ ವೆಚ್ಚ ಮತ್ತು ಕಾರ್ಯಗಳ ಲೆಕ್ಕಪರಿಶೋಧಕರ ನಿಯಂತ್ರಣ, 20ಬಿ (Regulation 20B of Cost and Works Accountants Regulation,1959) ಯ ಅನುಸಾರವಾಗಿ, ಫೌಂಡೇಶನ್, ಮಧ್ಯಂತರ ಮತ್ತು ಅಂತಿಮ ಕೋರ್ಸ್‌ನ ಜೂನ್ 2023 ರ ಪರೀಕ್ಷೆಯ ಪ್ರವೇಶ/ನೋಂದಣಿ/ ದಾಖಲಾತಿಗಾಗಿ ಕೊನೆಯ ದಿನಾಂಕವನ್ನು 10 ನೇ ಫೆಬ್ರವರಿ, 2023 (ಶುಕ್ರವಾರ) ವರೆಗೆ ವಿಸ್ತರಿಸಲಾಗಿದೆ.” ಎಂದು ಅಧಿಕೃತ ಸೂಚನೆಯು ತಿಳಿಸುತ್ತದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ನಿರ್ಧಿಷ್ಟ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಫೌಂಡೇಶನ್ ಕೋರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 6,000 ರೂ. ಪಾವತಿಸಬೇಕು, ಇಂಟರ್ಮೀಡಿಯೇಟ್ ಕೋರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು 23,100 ರೂ. ಪಾವತಿಸಬೇಕು. ಫೈನಲ್ ಕೋರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು 25,000 ರೂ. ಪಾವತಿಸಬೇಕಿದೆ.
ಐಸಿಎಂಎಐ ಸಿಎಂಎ ಜೂನ್ 2023 ಪರೀಕ್ಷೆ ನೋಂದಣಿಗೆ ಅರ್ಜಿ ಸಲ್ಲಿಸಲು ನೇರ ಲಿಂಕ್
ಇದನ್ನೂ ಓದಿ: ಎಥಿಕಲ್ ಹ್ಯಾಕರ್ ಆಗುವುದು ಹೇಗೆ? ಉದ್ಯೋಗಾವಕಾಶ ಮತ್ತು ಟಾಪ್ ಇನ್ಸ್ಟಿಟ್ಯೂಟ್ಗಳ ಮಾಹಿತಿ
ಡಿಸೆಂಬರ್ 2022 ರ ಅವಧಿಯ ಫಲಿತಾಂಶವನ್ನು ಈಗಾಗಲೇ ಜನವರಿ 31, 2023 ರಂದು ಬಿಡುಗಡೆ ಮಾಡಲಾಗಿದೆ. ಐಸಿಎಂಎಐ ಸಿಎಂಎ ನ ಹೆಚ್ಚಿನ ಅಪ್ಡೇಟ್ಗಳಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 am, Fri, 10 February 23