JEE-Advanced Results 2022 : ಜೆಇಇ ಅಡ್ವಾನ್ಸ್ಡ್​ ಪರೀಕ್ಷೆಯ ಫಲಿತಾಂಶ ಪ್ರಕಟ, ಬೆಂಗಳೂರಿನ ವಿದ್ಯಾರ್ಥಿ ಶಿಶಿರ್ ಟಾಪರ್

| Updated By: ನಯನಾ ರಾಜೀವ್

Updated on: Sep 11, 2022 | 1:23 PM

ಜೆಇಇ ಅಡ್ವಾನ್ಸ್ಡ್‌ 2022 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ವಿದ್ಯಾರ್ಥಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕರ್ನಾಟಕ ಮೂಲದ ಕೆ ಶಿಶಿರ್ ಪ್ರಥಮ ಸ್ಥಾನ ಪಡೆದಿದ್ದಾರೆ

JEE-Advanced Results 2022 : ಜೆಇಇ ಅಡ್ವಾನ್ಸ್ಡ್​ ಪರೀಕ್ಷೆಯ ಫಲಿತಾಂಶ ಪ್ರಕಟ, ಬೆಂಗಳೂರಿನ ವಿದ್ಯಾರ್ಥಿ ಶಿಶಿರ್ ಟಾಪರ್
JEE
Follow us on

ಜೆಇಇ ಅಡ್ವಾನ್ಸ್ಡ್‌ 2022 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ವಿದ್ಯಾರ್ಥಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕರ್ನಾಟಕ ಮೂಲದ ಕೆ ಶಿಶಿರ್ ಪ್ರಥಮ ಸ್ಥಾನ ಪಡೆದಿದ್ದಾರೆ, ಇವರು ಐಐಟಿ ಝೋನ್​ನಿಂದ ಪರೀಕ್ಷೆ ಬರೆದವರು. ಹಾಗೆಯೇ ಪೋಲು ಲಕ್ಷ್ಮೀ ಸಾಯಿ  ಲೋಹಿತ್ ರೆಡ್ಡಿ ಎರಡನೇ ಮತ್ತು ಥಾಮಸ್ ಬಿಜು ಚೀರಂವೇಲಿಲ್ ಮೂರನೇ ಶ್ರೇಯಾಂಕ ಪಡೆದಿದ್ದಾರೆ. ಆಗಸ್ಟ್ 28ರಂದು ಪರೀಕ್ಷೆ ನಡೆದಿತ್ತು, ಜೆಇಇ ಅಡ್ವಾನ್ಸ್ಡ್‌ 2022 ಫಲಿತಾಂಶ – jeeadv.ac.in – ಜೆಇಇ ಅಡ್ವಾನ್ಸ್ಡ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಅಭ್ಯರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್ ಹಾಗೂ ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಲಾಗಿನ್‌ ಆಗಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈ ವೆಬ್‌ಸೈಟ್‌ನ ಪರದೆ ಮೇಲೆ ಜೆಇಇ ಅಡ್ವಾನ್ಸ್ಡ್‌ 2022 ಸ್ಕೋರ್‌ಕಾರ್ಡ್‌ ಅನ್ನು ನೋಡಬಹುದಾಗಿದೆ. ಬಳಿಕ ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಪ್ರಿಂಟ್‌ಔಟ್‌ ಅನ್ನೂ ತೆಗೆದುಕೊಳ್ಳಬಹುದು.

ಆದರೆ ಈ ಬಾರಿ ಟಾಪ್ 10ರಲ್ಲಿ ಎಲ್ಲರೂ ಹುಡುಗರೇ ಇದ್ದಾರೆ, 16ನೇ ರ್ಯಾಂಕ್​ ಅನ್ನು ಐಐಟಿ ದೆಹಲಿ ಝೋನ್​ನ ತನಿಷ್ಕಾ ಕಾಬ್ರಾ ಪಡೆದಿದ್ದಾರೆ. ಹಾಗೆಯೇ ವಂಗಪಲ್ಲಿ ಸಾಯಿ ಸಿದ್ಧಾರ್ಥ್​ 4ನೇ ಸ್ಥಾನ, ಮಯಾಂಕ್ ಮೋಟ್ವಾನಿ 5ನೇ ಸ್ಥಾನ, ಪೋಲಿಸೆಟ್ಟಿ ಕಾರ್ತಿಕೇಯ 6ನೇ ಸ್ಥಾನ, ಪ್ರತೀಕ್ ಸಾಹೂ 7ನೇ ಸ್ಥಾನ, ಧೀರಜ್ ಕುರುಕುಂದಾ 8ನೇ ಸ್ಥಾನ, ಮಹಿತ್ 9ನೇ ಸ್ಥಾನ ಹಾಗೂ ಮಹೇಶ್ 10ನೇ ಸ್ಥಾನ ಪಡೆದಿದ್ದಾರೆ.

ಜೆಇಇ ಅಡ್ವಾನ್ಸ್ಡ್‌ 2022 ಫಲಿತಾಂಶ ವೀಕ್ಷಿಸುವುದು ಹೇಗೆ?
-ಮೊದಲನೆಯದಾಗಿ ಜೆಇಇ ಅಡ್ವಾನ್ಸ್ಡ್‌ನ ಅಧಿಕೃತ ವೆಬ್‌ಸೈಟ್‌ jeeadv.ac.in ಗೆ ಭೇಟಿ ನೀಡಿ
– ಹೋಂ ಪೇಜ್​ನಲ್ಲಿ ನಿಮಗೆ ಕಾಣಿಸುವ JEE Advanced Resullt ಲಿಂಕ್ ಮೇಲೆ ಕ್ಲಿಕ್ ಮಾಡಿ
-ನಿಮ್ಮ ಅಪ್ಲಿಕೇಷನ್ ನಂಬರ್, ಡೇಟ್ ಆಫ್ ಬರ್ಥ್​, ಹಾಗೂ ಕೇಳಿರುವ ಇತರೆ ಮಾಹಿತಿಯನ್ನು ನಮೂದಿಸಿ ಸಬ್​ಮಿಟ್ ಕ್ಲಿಕ್ ಮಾಡಿ.
— ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
– ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿ.
– ಅದರ ಹಾರ್ಡ್ ಕಾಪಿಯ ಪ್ರಿಂಟ್‌ ಔಟ್‌ ಅನ್ನು ಕೂಡ ನೀವು ತೆಗೆದಿಟ್ಟುಕೊಳ್ಳಬಹುದು.

 

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ