Karnataka 2nd PUC Exam Timetable : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

| Updated By: ವಿವೇಕ ಬಿರಾದಾರ

Updated on: Nov 28, 2022 | 9:46 PM

Karnataka 2nd PUC Exam 2023 Schedule: 2023ರ ಮಾರ್ಚ್‌ನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

Karnataka 2nd PUC Exam Timetable : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: 2023ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಟ್ಟಿಯನ್ನು ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ದಿನಾಂಕ 09-3-2023 ರಿಂದ 29-3-2023ರ ವರೆಗೆ ನಡೆಸಲು ಪಿಯು ಬೋರ್ಡ್ ತೀರ್ಮಾನಿಸಿದ್ದು, ಇಂದು (ನವೆಂಬರ್​ 28) ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ,ಸಿ, ನಾಗೇಶ್ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಪರೀಕ್ಷಾ ದಿನಾಂಕ ವಿಷಯ
09-03-2023 ಕನ್ನಡ, ಅರೇಬಿಕ್
11-03-2023 ಗಣಿತ, ಶಿಕ್ಷಣ ಶಾಸ್ತ್ರ
13-03-2023 ಅರ್ಥಶಾಸ್ತ್ರ
14-03-2023 ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಾಸಾಯನಶಾಸ್ತ್ರ, ಮೂಲ ಗಣಿತ
15-03-2023 ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್​
16-03-2023 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
17-03-2023 ಮಾಹಿತಿ ತಂತ್ರಜ್ಞಾನ, ರೀಟೈಲ್​​, ಆಟೋಮೊಬೈಲ್​, ಹೆಲ್ತಕೇರ್​, ಬ್ಯೂಟಿ ಆಂಡ್​ ವೆಲ್​ನೆಸ್​
18-03-2023 ಭೂಗೋಳಶಾಸ್ತ್ರ, ಜೀವಶಾಸ್ತ್ರ
20-03-2023 ಇತಿಹಾಸ, ಭೌತಶಾಸತ್ರ
21-03-2023 ಹಿಂದಿ
23-03-2023 ಇಂಗ್ಲೀಷ್​
25-03-2023 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
27-03-2023 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ಶಾಸ್ತ್ರ
29-03-2023 ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ಮುಂದಿನ ನಿರ್ಧಾರಕ್ಕೆ ಪೂರಕ

ಅಷ್ಟೇ ಅಲ್ಲ ತಮ್ಮ ಅಂಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಆ ಕಾರಣದಿಂದ ಸರಿಯಾಗಿ ಅಭ್ಯಾಸ ಮಾಡಿ ಅಂಕಗಳಿಸಲು ಪ್ರಯತ್ನಿಸುತ್ತಾರೆ. ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಮಕ್ಕಳು ಸಿದ್ಧತೆ ನಡೆಸುತ್ತಾರೆ. ಈಗ ಇನ್ನು ಕೆಲವೇ ತಿಂಗಳು ಬಾಕಿ ಇದ್ದು ವಿಶೇಷ ಅಧ್ಯಯನಕ್ಕೆ ಸಿದ್ಧರಾಗುತ್ತಾರೆ.

ಪರೀಕ್ಷೆಗೆ ಹೇಗೆ ಅಭ್ಯಾಸ ಮಾಡಬೇಕು?

ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ತಮ್ಮ ಪರೀಕ್ಷಾ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ತರಗತಿಯ ವಿಷಯಗಳೊಂದಿಗೆ ಏಕಕಾಲದಲ್ಲಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಹಾಯವಾಗುತ್ತದೆ. ಓದಿದ ವಿಷಯವನ್ನು ಇನ್ನೊಮ್ಮೆ ಓದಿ ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುವುದು ಮತ್ತು ಇತರ ವಿಷಯಗಳಲ್ಲಿನ ಸಂಶಯಗಳನ್ನು ಉಪನ್ಯಾಸಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ನೆರವಾಗುತ್ತದೆ.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಉತ್ತಮವಾಗಿ ಬರೆಯಲು ಅಗತ್ಯವಾದ ಸಿದ್ಧತಾ ಸಲಹೆಗಳು ಮತ್ತು ತಂತ್ರಗಳ ಬಗ್ಗೆ ತಿಳಿದುಕೊಳ್ಳಬೇಕು.

Published On - 6:49 pm, Mon, 28 November 22