ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದ್ದು, ಇಂದು (ಏಪ್ರಿಲ್ 21) ಬೆಳಗ್ಗೆ 10 ಗಂಟೆಗೆ ಶಿಕ್ಷಣ ಇಲಾಖೆ ಪ್ರಕಟಿಸಲಿದೆ. ಇನ್ನು 11 ಗಂಟೆಗೆ ಆನ್ಲೈನ್ನಲ್ಲಿ ಫಲಿತಾಂಶ ದೊರೆಯುತ್ತದೆ. ಫಲಿತಾಂಶ ಅಧಿಕೃತ ವೆಬ್‌ಸೈಟ್ karresults.nic ನಲ್ಲಿ ನೋಡಬಹುದಾಗಿ ಹಾಗಾದ್ರೆ, ಆನ್ಲೈನ್ನಲ್ಲಿ ಫಲಿತಾಂಶ ನೋಡುವುದೇಗೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಅನುಸರಿ ನೋಡಬಹುದು. ಹಾಗೇ ಸ್ಕೋರ್ ಕಾರ್ಡ್ ಡೌನ್‌ಲೌಡ್ ಮಾಡಿಕೊಳ್ಳಬಹುದು.
Second PU results will be announced on Friday, 10am onwards. Results will be available at https://t.co/xDi4adGZI9 from 11 am. #SECONDPU
— Kevin Mendonsa (@KevinMTOI) April 20, 2023
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ನಂತರ ಮರುಪರಿಶೀಲಿಸಲು ಬಯಸುವವರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಲಿಂಕ್ ಸಕ್ರಿಯವಾದ ನಂತರ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ, ವಿದ್ಯಾರ್ಥಿಗಳು ಕರ್ನಾಟಕ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಲು ಸೂಚಿಸಲಾಗಿದೆ.
Published On - 6:40 pm, Thu, 20 April 23