ಭಗತ್ ಸಿಂಗ್ ಪಾಠ ಔಟ್! ಶಾಲಾ ಮಕ್ಕಳಿಗೆ ಭಗತ್ ಸಿಂಗ್ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ

| Updated By: ಸಾಧು ಶ್ರೀನಾಥ್​

Updated on: Oct 08, 2022 | 11:25 AM

Bhagat Singh: ವಿರೋಧಗಳೆಲ್ಲ ತಣ್ಣಗಾದ ಮೇಲೆ ಸುಮ್ಮನಾಗದ ಶಿಕ್ಷಣ ಇಲಾಖೆ ಈಗ ವಿರೋಧ ಮಾಡಿದ ಲೇಖಕರ ಪಠ್ಯ ಬೋಧನೆಯಿಂದ ಕೈಬಿಟ್ಟಿದ್ದು ಭಗತ್ ಸಿಂಗ್ ಕುರಿತಾದ ಪಠ್ಯಕ್ಕೂ ಕೊಕ್ ನೀಡಿದೆ .. ಸದ್ಯ ಭಗತ್ ಸಿಂಗ್ ಪಾಠವನ್ನೂ ಪಠ್ಯ ಭೋದನೆಯಿಂದ ಕೈಬಿಟ್ಟಿರುವುದು ವಿರೊಧಕ್ಕೆ ಕಾರಣವಾಗುತ್ತಿದೆ..

ಭಗತ್ ಸಿಂಗ್ ಪಾಠ ಔಟ್! ಶಾಲಾ ಮಕ್ಕಳಿಗೆ ಭಗತ್ ಸಿಂಗ್ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ
ಶಾಲಾ ಮಕ್ಕಳಿಗೆ ಭಗತ್ ಸಿಂಗ್ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ
Follow us on

ಬೆಂಗಳೂರು : ರಾಜ್ಯದಲ್ಲಿ ಶಾಲಾ ಆರಂಭವಾದಗಿನಿಂದ ಪಠ್ಯ ಪುಸ್ತಕ ಪರಿಷ್ಕರಣೆಯ ದಂಗಲ್ ಶುರುವಾಗಿದೆ.. ನೂತನ ಪಠ್ಯ ಪರಿಷ್ಕರಣೆಗೆ  ಆರಂಭದಿಂದಲೇ ಸಾಹಿತ್ಯ ವಲಯ, ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ಕೇಳಿ ಬರ್ತಿದ್ದು ಹೋರಾಟದ ಸ್ವರೂಪ ಕೂಡಾ ಪಡೆದುಕೊಂಡಿತ್ತು.. ಆದ್ರೆ ಎಷ್ಟೇ ವಿರೋಧ ಇದ್ರೂ ಡೋಂಟ್ ಕೇರ್ ಅಂತಾ ಶಿಕ್ಷಣ ಸಚಿವರು ಪರಿಷ್ಕರಣೆಯ ಪಠ್ಯವನ್ನ (school text book) ಮಕ್ಕಳಿಗೆ ನೀಡಿದ್ರು. ಈ ವೇಳೆ ಕೆಲ ಲೇಖಕರು ವಿರೋಧ ಕೂಡಾ ವ್ಯಕ್ತಪಡಿಸಿ ಈ ಸಮಿತಿಯ ಪರಿಷ್ಕರಣೆಯಲ್ಲಿ ನಮ್ಮ ಲೇಖನ ಬೇಡಾ ಅಂತಾ ವಿರೋಧ ಮಾಡಿದ್ರು.. ವಿರೋಧ ಎಲ್ಲ ತಣ್ಣಗಾದ ಮೇಲೆ ಸುಮ್ಮನಾಗದ ಶಿಕ್ಷಣ ಇಲಾಖೆ (education Department) ಈಗ ವಿರೋಧ ಮಾಡಿದ ಲೇಖಕರ ಪಠ್ಯ ಬೋಧನೆಯಿಂದ ಕೈಬಿಟ್ಟಿದ್ದು ಭಗತ್ ಸಿಂಗ್ ಕುರಿತಾದ ಪಠ್ಯಕ್ಕೂ ಕೊಕ್ ನೀಡಿದೆ .. ಸದ್ಯ ಭಗತ್ ಸಿಂಗ್ (Bhagat Singh) ಪಾಠವನ್ನೂ ಪಠ್ಯ ಭೋದನೆಯಿಂದ ಕೈಬಿಟ್ಟಿರುವುದು ವಿರೊಧಕ್ಕೆ ಕಾರಣವಾಗುತ್ತಿದೆ..

ಶಾಲಾ ಪಠ್ಯದಿಂದ ಭಗತ್ ಸಿಂಗ್ ಪಾಠ ಔಟ್

ಶಿಕ್ಷಣ ಇಲಾಖೆ ಭಗತ್ ಸಿಂಗ್ ಪಾಠವನ್ನ ಭೋದನೆಯಿಂದ ಕೈಬಿಟ್ಟಿರೊದಕ್ಕೆ ಲೇಖಕರು ಹಾಗೂ ವಿದ್ಯಾರ್ಥಿಗಳ ಸಂಘಟನೆಗಳು ವಿರೋಧ ಹೊರ ಹಾಕುತ್ತಿವೆ. ಪಠ್ಯ ಪರಿಷ್ಕರಣೆ ವೇಳೆಯೇ ಭಗತ್ ಸಿಂಗ್ ಪಾಠ ಕೈಬಿಟ್ಟು ವಿರೋಧಕ್ಕೆ ಶಿಕ್ಷಣ ಇಲಾಖೆ ಗುರಿಯಾಗಿತ್ತು. ವ್ಯಾಪಕ ವಿರೋಧದ ಬಳಿಕ ಪಾಠ ಕೈಬಿಟ್ಟಿಲ್ಲ ಅಂತಾ ನಾಟಕವಾಡಿತ್ತು. ಆದ್ರೆ ಈಗ ಲೇಖಕರು ವಿರೋಧ ಮಾಡಿದ್ದಾರೆ ಅನ್ನೋ ಕಾರಣ ಮುಂದಿಟ್ಟು ಎಸ್ಎಸ್ಎಲ್ ಸಿ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣವಾಗೀರೊ ಭಗತ್ ಸಿಂಗ್ ಪಾಠವನ್ನ ಭೋದನೆಯಿಂದ ಕೈಬಿಟ್ಟಿದೆ. ಮಕ್ಕಳಿಗೆ ಭಗತ್ ಸಿಂಗ್ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದೆ.. ಶಿಕ್ಷಣ ಇಲಾಖೆಯ ಈ ನಡೆಗೆ ವ್ಯಾಪಕ ವಿರೋಧ ಕೇಳಿ ಬರ್ತಿದೆ..

ಶಿಕ್ಷಣ ಇಲಾಖೆ ನಡೆಗೆ ಲೇಖಕ ಹಾಗೂ ಶಿಕ್ಷಣ ತಜ್ಞ ಜಿ ರಾಮಕೃಷ್ಣ ವಿರೋಧ

ಮಕ್ಕಳಿಗೆ ಭಗತ್ ಸಿಂಗ್ ನತಂಹ ಸ್ವಾತಂತ್ರ್ಯ ಹೋರಾಟಗಾರನ ಪಾಠ ಕೈಬಿಟ್ಟಿರೋದಕ್ಕೆ ಭಗತ್ ಸಿಂಗ್ ಪಾಠದ ಲೇಖಕ ಹಾಗೂ ಶಿಕ್ಷಣ ತಜ್ಞ ಜಿ ರಾಮಕೃಷ್ಣ ಶಿಕ್ಷಣ ಸಚಿವರ ವಿರುದ್ಧ ಚಾಟಿ ಬೀಸಿದ್ದಾರೆ. ನಾನು ವಿರೋಧ ಮಾಡಿರೋದು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ವಿರುದ್ಧ ನಾನು ಈಗಲೂ ಆ ಸಮಿತಿಯನ್ನ ವಿರೋಧ ಮಾಡ್ತೀನಿ ಆದ್ರೆ ಶಿಕ್ಷ ಣ ಸಚಿವರು ಕಾನೂನಿಡಿ ಬದ್ಧವಲ್ಲದ ಸಮಿತಿ ವಿರುದ್ಧ ನಿಲ್ಲದೇ ನನ್ನ ಭಗತ್ ಸಿಂಗ್ ಪಾಠ ಕೈಬಿಟ್ಟಿದ್ದಾರೆ.. ನಾನು ಯಾವುದೇ ಪ್ರೋತ್ಸಾಹಧನಕ್ಕೆ ಗೆ ಭಗತ್ ಸಿಂಗ್ ಪಾಠದ ಹಕ್ಕು ಕೊಟ್ಟವನಲ್ಲ ಪಾಠ ಕೈಬಿಟ್ಟದ್ದಾರೆ ಅಂದ್ರೆ ಶಿಕ್ಷಣ ಸಚಿವರ ನಡೆ ಯಾವ ಕಡೆ ಅಂತಾ ಸ್ಪಷ್ಟವಗುತ್ತೆ ಅಂತಾ ಶಿಕ್ಷಣ ಇಲಾಖೆಯ ನಡೆ ವಿರುದ್ಧ ಗರಂ ಆಗಿದ್ದಾರೆ

ಒಟ್ನಲ್ಲಿ ಶಿಕ್ಷಣ ಇಲಾಖೆ ವಿರುದ್ಧ ಈಗ ಮತ್ತೆ ಪಠ್ಯ ಕೈಬಿಟ್ಟಿರೋ ವಿರೋಧ ಶುರುವಾಗಿದೆ.. ಭಗತ್ ಸಿಂಗ್ ಪಾಠ ಕೈಬಿಟ್ಟಿರೋದಕ್ಕೆ ವಿವಿಧ ವಲಯಗಳಿಂದ ರಾಜ್ಯದ್ಯಂತ ವಿರೋಧ ಕೇಳಿ ಬರ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳುತೆ ಅಂತಾ ಕಾದು  ನೋಡಬೇಕಿದೆ. ವಿನಯಕುಮಾರ್ ಕಾಶಪ್ಪನವರ್, ಟಿವಿ 9, ಬೆಂಗಳೂರು