ಬೆಂಗಳೂರು: ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ನವೆಂಬರ್ 29 ರಿಂದ ಡಿಸೆಂಬರ್ 10 ರ ವರೆಗೆ ಪರೀಕ್ಷೆ ನಡೆಯಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು (ನವೆಂಬರ್ 12) ವೇಳಾಪಟ್ಟಿ ಪ್ರಕಟಿಸಿದೆ. ಅಕ್ಟೋಬರ್ 3ರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶೇಕಡಾ 100ರಷ್ಟು ಮಕ್ಕಳ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಸಭೆ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದರು. ಅಕ್ಟೋಬರ್ 3ರಿಂದ ಪಬ್‌ಗಳಲ್ಲೂ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದರು. ಇದೀಗ ಎಲ್ಕೆಜಿ, ಯುಕೆಜಿ ಸಹಿತ ಎಲ್ಲಾ ಶಾಲಾ ತರಗತಿಗಳು ಕೂಡ ಆರಂಭವಾಗಿದೆ. ಕೊರೊನಾ ಸಂಬಂಧಿಸಿ ಇದ್ದ ನೈಟ್ ಕರ್ಫ್ಯೂ ಕೂಡ ಸಂಪೂರ್ಣವಾಗಿ ಹಿಂಪಡೆಯಲಾಗಿದೆ.
ಕೊರೊನಾ ಎರಡನೇ ಅಲೆ ಬಳಿಕ ಜನಜೀವನ ಸಮತೋಲನಕ್ಕೆ ಬರುತ್ತಿದೆ. ಆನ್ಲೈನ್ ವಿಧಾನದಲ್ಲೇ ಸಾಗಿದ್ದ ಶಿಕ್ಷಣ ಮತ್ತೆ ಆಫ್ಲೈನ್ ಮೂಲಕ ಸಾಗುತ್ತಿದೆ. ಶಾಲೆ, ಕಾಲೇಜು ತರಗತಿಗಳು ಮತ್ತೆ ತುಂಬಿಕೊಂಡಿವೆ. ಈ ನಡುವೆ ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಶುಕ್ರವಾರ ಪ್ರಕಟವಾಗಿದೆ. ಪರೀಕ್ಷೆ ದಿನಾಂಕವನ್ನು ಹೇಳಲಾಗಿದೆ.
ಇದನ್ನೂ ಓದಿ: ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ವಿಚಾರ; ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ ಎಂದು ಪ್ರಶ್ನಿಸಿದ ಹೈಕೋರ್ಟ್
Published On - 9:29 pm, Fri, 12 November 21