ಎಸ್‌ಎಸ್‌ಎಲ್‌ಸಿ (2022-23ನೇ ಸಾಲಿನ) ವಾರ್ಷಿಕ ಪರೀಕ್ಷೆಯ ಫಲಿತಾಂಶ (SSLC Exam Result 2023) ಪ್ರಕಟವಾಗಿದೆ. ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ (KSEAB SSLC results 2023) ಹೊರಬಿದ್ದಿದ್ದು, ಈ ಬಾರಿ ಶೇಕಡ 83.89 ಫಲಿತಾಂಶ ದಾಖಲಾಗಿದೆ. ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 3,41,108 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 3,59,511 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಕರ್ನಾಟಕ SSLC ಪರೀಕ್ಷೆ 2023 ರಲ್ಲಿ ಉತ್ತೀರ್ಣರಾಗಲು, ಅಭ್ಯರ್ಥಿಗಳು ಲಭ್ಯವಿರುವ ಅಂಕಗಳಲ್ಲಿ ಕನಿಷ್ಠ 35% ಅನ್ನು ಪಡೆಯಬೇಕು.
ಇನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಚಿಂತೆ ಬೇಡ, ಇಂತಹ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ತಯಾರಿಯನ್ನು ಪ್ರಾರಂಭಿಸಿ. ಶೀಘ್ರದಲ್ಲಿ ಪೂರಕ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಇನ್ನು ಮರುಮೌಲ್ಯಮಾಪನವನ್ನು ಬಯಸುವ ವಿದ್ಯಾರ್ಥಿಗಳು ಈ ಸೂಚನೆಯನ್ನು ಗಮನಿಸಬೇಕು. ಮೇ 15ರಿಂದ ಮೇ 21ರವರೆಗೆ ಮರುಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಮೇ 14 ರಿಂದ ಅರ್ಜಿ ಸಲ್ಲಿಸಬಹುದು. ಇಂದಿನಿಂದ ಮೇ 15ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನೋಂದಣಿಗೆ ಅವಕಾಶ
ಇದನ್ನೂ ಓದಿ: ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ, ಯಾದಗಿರಿಗೆ ಕೊನೆಯ ಸ್ಥಾನ
ಅರ್ಜಿದಾರರು ತಮ್ಮ 10 ನೇ ತರಗತಿ ಪರೀಕ್ಷೆಗಳನ್ನು ಕರ್ನಾಟಕ ರಾಜ್ಯ ಮಂಡಳಿಯ ಮೂಲಕ ಪೂರ್ಣಗೊಳಿಸಿರಬೇಕು.
Published On - 11:42 am, Mon, 8 May 23