SSLC Supplementary Exam 2022 Date: SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಜೂನ್ 27 ರಿಂದ ಜುಲೈ 4ರವರೆಗೆ ಎಕ್ಸಾಂ

| Updated By: ಆಯೇಷಾ ಬಾನು

Updated on: Jun 21, 2022 | 1:05 PM

ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ 2022 ವೇಳಾಪಟ್ಟಿ: ಜೂ.27ರಿಂದ ಜು.4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಮಂಡಳಿಯ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

SSLC Supplementary Exam 2022 Date: SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಜೂನ್ 27 ರಿಂದ ಜುಲೈ 4ರವರೆಗೆ ಎಕ್ಸಾಂ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು(Karnataka Secondary Education Examination Board) 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ(SSLC Supplementary Exam) ವೇಳಾಪಟ್ಟಿ ಪ್ರಕಟಿಸಿದೆ. ಜೂ.27ರಿಂದ ಜು.4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಮಂಡಳಿಯ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಅಥವಾ ಕಾಲೇಜು ಆಡಳಿತ ಮಂಡಳಿ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಬಹುದು ಎಂದು ತಿಳಿಸಿದೆ.

SSLC ಪೂರಕ ಪರೀಕ್ಷೆ ವೇಳಾಪಟ್ಟಿ
ಜೂ. 27 (ಸೋಮವಾರ): ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ.
ಜೂ.28 (ಮಂಗಳವಾರ): ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ,ಮರಾಠಿ, ಉರ್ದು, ಇಂಗ್ಲಿಷ್‌, ಸಂಸ್ಕೃತ)
ಜೂ.29 (ಬುಧವಾರ): ದ್ವಿತೀಯ ಭಾಷೆ (ಇಂಗ್ಲಿಷ್‌,ಕನ್ನಡ)
ಜೂ.30 (ಗುರುವಾರ): ಸಮಾಜ ವಿಜ್ಞಾನ
ಜುಲೈ 1 (ಶುಕ್ರವಾರ): ತೃತೀಯ ಭಾಷೆ (ಹಿಂದಿ, ಕನ್ನಡ ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು); ಎನ್‌.ಎಸ್‌.ಕ್ಯೂ.ಎಫ್‌ ಪರೀಕ್ಷಾ ವಿಷಯಗಳು (ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್‌, ಬ್ಯೂಟಿ ಅಂಡ್‌ ವೆಲ್‌ನೆಸ್‌)
ಜುಲೈ 2 (ಶನಿವಾರ): ಎಲಿಮೆಂಟ್‌ ಆಫ್‌ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌-2,ಇಂಜಿನಿಯರ್‌ ಗ್ರಾಫಿಕ್ಸ್‌-2, ಎಲಿಮೆಂಟ್ಸ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಎಲಿಮೆಂಟ್ಸ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌, ಅರ್ಥಶಾಸ್ತ್ರ
ಜುಲೈ 4 (ಸೋಮವಾರ): ಗಣಿತ, ಸಮಾಜ ಶಾಸ್ತ್ರ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:53 pm, Tue, 21 June 22