ಕರ್ನಾಟಕ ಮುಕ್ತ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್, ಪರೀಕ್ಷೆಗೆ ಒಂದು ದಿನ ಮೊದಲೇ ವಾಟ್ಸಪ್​ನಲ್ಲಿ ಮಾರಾಟ

| Updated By: ರಮೇಶ್ ಬಿ. ಜವಳಗೇರಾ

Updated on: Sep 22, 2023 | 9:27 AM

KSOU question paper Leaked: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮತ್ತೊಂದು ಅವತಾರ ಬಯಲಾಗಿದೆ. ಪರೀಕ್ಷೆಗೆ ಒಂದು ದಿನ ಮೊದಲೇ ಕರ್ನಾಟಕ ಮುಕ್ತ ವಿಶ್ವವಿದ್ಯಾಯಲದ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪ್ರಶ್ನೆ ಪತ್ರಿಕೆ ಮಾರಾಟವಾಗಿದೆ.

ಕರ್ನಾಟಕ ಮುಕ್ತ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್, ಪರೀಕ್ಷೆಗೆ ಒಂದು ದಿನ ಮೊದಲೇ ವಾಟ್ಸಪ್​ನಲ್ಲಿ ಮಾರಾಟ
Follow us on

ಮೈಸೂರು, (ಸೆಪ್ಟೆಂಬರ್ 22): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) (karnataka state open university) ಮತ್ತೊಂದು ಅವತಾರ ಬಯಲಾಗಿದೆ. ಪರೀಕ್ಷೆಗೆ ಒಂದು ದಿನ ಮೊದಲೇ ಕರ್ನಾಟಕ ಮುಕ್ತ ವಿವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ(question paper) ಮಾರಾಟವಾಗಿದೆ. ವಾಟ್ಸಾಪ್ ಮೂಲಕ ಮಾರಾಟ ಮಾಡಲಾಗಿದ್ದು, ಕೆಎಸ್‌ಓಯು ಮಂಗಳೂರು ಕೇಂದ್ರದ ಸಿಬ್ಬಂದಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ವಿದ್ಯಾರ್ಥಿಯೋರ್ವ ಪರಿಶೀಲನೆ ಮಾಡಲು ಹಣ ನೀಡಿ ಪ್ರಶ್ನೆ ಪತ್ರಿಕೆ ತೆಗೆದುಕೊಂಡಿದ್ದು, ನಂತರ ಪರೀಕ್ಷೆಗೆ ನೀಡಿದ ಪ್ರಶ್ನೆ ಪತ್ರಿಕೆ ಹಾಗೂ ಮಾರಾಟ ಮಾಡಿದ ಪ್ರಶ್ನೆ ಪತ್ರಿಕೆ ಎರಡು ಒಂದೇ ಆಗಿವೆ. ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪರೀಕ್ಷೆ ಪ್ರಶ್ನೆ ಪತ್ರಿಕೆ 2000 ರೂಪಾಯಿಗೆ ಮಾರಾಟವಾಗಿದ್ದು, ಈ ಬಗ್ಗೆ ಚಂದು.ಎಚ್.ಎಸ್. ಎಂಬ ವಿದ್ಯಾರ್ಥಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಮುಕ್ತವಾಗಿ ವಿವರಿಸಿದ ವಿವಿಯ ಉಪನ್ಯಾಸಕ!

ಇನ್ನು ಈ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದ್ರೆ, ಇದುವರೆಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, ಈ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.  ಮುಂದೆ ಈ ಪ್ರಕರಣದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಹಗರಣಗಳ ಕೂಪ. ಅಲ್ಲಿಂದ ಯಾವುದಾದರು ವಿವಾದ ಹೊರಬೀಳದಿದ್ದರೆ ವಿವಿ ಬಂದ್ ಆಗಿದೆ ಅಂತಲೇ ಅರ್ಥ. ಕೆಎಸ್​ಒಯು ಒಂದು ಸದ್ದುದ್ದೇಶದಿಂದ ಸ್ಥಾಪಿಸಲಾಯಿತು. ಆದರೆ, ಆ ಉದ್ದೇಶವೊಂದನ್ನು ಬಿಟ್ಟು ಬೇರೆಲ್ಲ ವಿದ್ಯಮಾನಗಳು-ಅವ್ಯಹಾರಗಳು ಅನ್ನೋದು ಹೆಚ್ಚು ಸೂಕ್ತ; ವಿವಿ, ಅದರ ಪ್ರಾದೇಶಿಕ ಮತ್ತು ಅಧ್ಯಯನ ಕೇಂದ್ರಗಳಲ್ಲಿ (study centre) ನಡೆಯುತ್ತಿವೆ. ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಲವಾರು ಅಕ್ರಮಗಳ ಬಗ್ಗೆ ಅಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುವ ಡಾ ಜಗದೀಶ ಬಾಬು (Dr Jagadish Babu) ಮುಕ್ತವಾಗಿ ಮಾತಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 am, Fri, 22 September 23