ಗೃಹಲಕ್ಷ್ಮಿ ಯೋಜನೆಯಂತೆ ವಿದ್ಯಾರ್ಥಿ ವೇತನ: ಇಂಗ್ಲೆಂಡ್​ಗೆ ಕರ್ನಾಟಕ ಸ್ಫೂರ್ತಿ ಆಯ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2024 | 8:18 PM

ಕರ್ನಾಟಕ ಸರ್ಕಾರವು ಯುಕೆಯ ಶಿವ್ನಿಂಗ್ ವಿದ್ಯಾರ್ಥಿವೇತನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಕರ್ನಾಟಕದ ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿ ಓದಲು ಅವಕಾಶ ಸಿಗಲಿದೆ. ಮುಂದಿನ ಮೂರು ವರ್ಷಗಳಲ್ಲಿ 15 ಮಹಿಳೆಯರು ಈ ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಈ ಒಪ್ಪಂದವು ದಕ್ಷಿಣ ಭಾರತದಲ್ಲಿ ಮೊದಲನೆಯದಾಗಿದೆ ಮತ್ತು ಮಹಿಳಾ ಸಬಲೀಕರಣಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ.

ಗೃಹಲಕ್ಷ್ಮಿ ಯೋಜನೆಯಂತೆ ವಿದ್ಯಾರ್ಥಿ ವೇತನ: ಇಂಗ್ಲೆಂಡ್​ಗೆ ಕರ್ನಾಟಕ ಸ್ಫೂರ್ತಿ ಆಯ್ತಾ?
ಗೃಹಲಕ್ಷ್ಮಿ ಯೋಜನೆಯಂತೆ ವಿದ್ಯಾರ್ಥಿ ವೇತನ: ಇಂಗ್ಲೆಂಡ್​ಗೆ ಕರ್ನಾಟಕ ಸ್ಫೂರ್ತಿ ಆಯ್ತಾ?
Follow us on

ಬೆಂಗಳೂರು, ಡಿಸೆಂಬರ್​ 16: ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತಿದೆ. ಸದ್ಯ ಕರ್ನಾಟಕದ ಈ ಯೋಜನೆಯಿಂದ ಇಂಗ್ಲೆಂಡ್ ಸ್ಫೂರ್ತಿ ಪಡೆದಂತಿದೆ. ಏಕೆಂದರೆ ಇದೀಗ ಯುಕೆನಲ್ಲಿ ಸ್ನಾತಕೋತ್ತರ ಪದವಿ ಮಾಡುವ ಕರ್ನಾಟಕದ ಮಹಿಳಾ ಪದವೀಧರರಿಗೆ ಶಿವ್ನಿಂಗ್​ ವಿದ್ಯಾರ್ಥಿ ವೇತನ (Chevening scholarship) ನೀಡಲು ಮುಂದಾಗಿದ್ದು, ಇದಕ್ಕಾಗಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಕರ್ನಾಟಕದ ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ವಿಶಿಷ್ಟ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಇಂದಿನ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ, ಗಣಿತ ಶಿಕ್ಷಕರಿಗೆ ಬರ: 22 ಲಕ್ಷ ವಿದ್ಯಾರ್ಥಿಗಳಿಗೆ 9 ಸಾವಿರ ಶಿಕ್ಷಕರು!

ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್, ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಚಂದ್ರು ಅಯ್ಯರ್ ಅವರು ಕರ್ನಾಟಕ ಮತ್ತು ಯುಕೆ ಸರ್ಕಾರಿ ಅಧಿಕಾರಿಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಶಿವ್ನಿಂಗ್ ಎಂಬುದು ಯುಕೆ ಸರ್ಕಾರದ ಅಂತಾರಾಷ್ಟ್ರೀಯ ಪ್ರಶಸ್ತಿ ಯೋಜನೆಯಾಗಿದೆ. ಪ್ರತಿ ವರ್ಷ 45 ವಿದ್ಯಾರ್ಥಿವೇತ ಮತ್ತು 45 ಫೆಲೋಶಿಪ್ಗಳನ್ನು ನೀಡುತ್ತದೆ. ಇಂದು 160 ದೇಶಗಳು ಶಿವ್ನಿಂಗ್ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಭಾರತದಲ್ಲಿ 3,900ಕ್ಕೂ ಹೆಚ್ಚು ಶಿವ್ನಿಂಗ್ ವಿದ್ಯಾರ್ಥಿ ವೇತನ ಪಡೆದುಕೊಂಡ ವಿದ್ಯಾರ್ಥಿಗಳಿದ್ದಾರೆ.

ಸಂತೋಷ ವ್ಯಕ್ತಪಡಿಸಿದ  ಚಂದ್ರು ಅಯ್ಯರ್

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ಶಿವ್ನಿಂಗ್​ವಿದ್ಯಾರ್ಥಿ ವೇತನವು ಕರ್ನಾಟಕದೊಂದಿಗೆ ಪಾಲುದಾರಿಕೆ ಹೊಂದಿದ್ದು, ನನಗೆ ಸಂತೋಷವಾಗಿದೆ. ಯುಕೆ ಮತ್ತು ವಿಶ್ವದಾದ್ಯಂತ ಮಹಿಳಾ ಸಬಲೀಕರಣವು ನಮ್ಮ ಆದ್ಯತೆಯಾಗಿದೆ. ತಂತ್ರಜ್ಞಾನದಿಂದ ಹಿಡಿದು ಹವಾಮಾನ ಸ್ಥಿತಿಸ್ಥಾಪಕತ್ವದವರೆಗೆ ಎಲ್ಲದರಲ್ಲೂ ಭಾರತದೊಂದಿಗಿನ ನಮ್ಮ ಪಾಲುದಾರಿಕೆ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.

ಶಿವ್ನಿಂಗ್​ ವಿದ್ಯಾರ್ಥಿ ವೇತನದ ಒಪ್ಪಂದಕ್ಕೆ ಸಹಿ ಹಾಕಿದ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ನನಗೆ ಸಂತೋಷವಾಗಿದೆ. ಶಿವ್ನಿಂಗ್ ವಿದ್ಯಾರ್ಥಿವೇತನವು ಭಾರತದಾದ್ಯಂತ ವಿದ್ವಾಂಸರು ಮತ್ತು ಫೆಲೋಗಳಿಗೆ ಸಹಾಯ ಮಾಡಿದೆ. ಶಿವ್ನಿಂಗ್ ವಿದ್ಯಾರ್ಥಿವೇತನ ಪಡೆದವರಲ್ಲಿ ಶ್ರೇಣಿ-2 ಮತ್ತು ಶ್ರೇಣಿ-3 ಪಟ್ಟಣಗಳು ಮತ್ತು ನಗರಗಳಿಂದ ಬಂದವರಾಗಿದ್ದಾರೆ. ಇವರು ಭಾರತದ ಸಮೃದ್ಧಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

ಸೆಪ್ಟೆಂಬರ್ 2025 ರಿಂದ ಮೊದಲ ಬ್ಯಾಚ್​ ಆರಂಭ

ಶಿವ್ನಿಂಗ್​ ಮಾಸ್ಟರ್ಸ್ ವಿದ್ಯಾರ್ಥಿ ವೇತನವು ಮುಂದಿನ ಮೂರು ವರ್ಷಗಳವರೆಗೆ ಪ್ರತಿ ವರ್ಷ ಐದು ಮಹಿಳಾ ಪದವೀಧರರಿಗೆ ಯಾವುದೇ ಯುಕೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ  ಮುಂದುವರಿಸಲು ಸಂಪೂರ್ಣ ಹಣವನ್ನು ನೀಡುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 15 ಮಹಿಳಾ ಪದವೀಧರರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಐದು ಮಹಿಳಾ ಪದವಿದರರ ಮೊದಲನೇ ಬ್ಯಾಚ್ ತಮ್ಮ ಯುಕೆ ಶಿಕ್ಷಣವನ್ನು ಸೆಪ್ಟೆಂಬರ್ 2025 ರಿಂದ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು ಗಿಫ್ಟ್: ಬಳ್ಳಾರಿಗೆ ಹೊಸ ನವೋದಯ ವಿದ್ಯಾಲಯ

ಜಾಗತಿಕ ಸಹಯೋಗ, ಶೈಕ್ಷಣಿಕ ಉತ್ಕೃಷ್ಟತೆ ಮತ್ತು ನಾಯಕತ್ವವು ಶಿವ್ನಿಂಗ್​ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಉದ್ದೇಶವಾಗಿದೆ. 40 ವರ್ಷಗಳಿಂದ ಶಿಕ್ಷಣದ ಮೂಲಕ ಜೀವನ ಮತ್ತು ಸಮಾಜಗಳನ್ನು ಸುಧಾರಿಸುತ್ತಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.