ನವದೆಹಲಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎರಡನೇ ವಿಸ್ತೃತ ಸುತ್ತಿನ ಕೆಸಿಇಟಿ 2021 ಸೀಟು ಹಂಚಿಕೆ ಫಲಿತಾಂಶಗಳನ್ನು ಪ್ರಕಟಿಸಿದೆ. KCET 2021 ಎರಡನೇ ವಿಸ್ತೃತ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ kea.kar.nic.inನಲ್ಲಿ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು. KCET ಸೀಟು ಹಂಚಿಕೆ 2021 ಅನ್ನು ಪರಿಶೀಲಿಸಲು, ಆಕಾಂಕ್ಷಿಗಳು ತಮ್ಮ CET ಅರ್ಜಿ ನಮೂನೆ ಸಂಖ್ಯೆಯನ್ನು (CET Application form Number) ಬಳಸಬೇಕಾಗುತ್ತದೆ
ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಇಂದಿನಿಂದ (ಡಿಸೆಂಬರ್ 28) ಡಿಸೆಂಬರ್ 30ರ ನಡುವೆ (ಸಂಜೆ 5:30 ರವರೆಗೆ) ನಿಗದಿಪಡಿಸಿದ ಇನ್ಸ್ಟಿಟ್ಯೂಟ್ನಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ. ಈ ನಿಗದಿತ ಸಮಯದೊಳಗೆ ಸಂಸ್ಥೆಯಲ್ಲಿ ವರದಿ ಮಾಡಿಕೊಳ್ಳಲು ವಿಫಲರಾದ ಎಲ್ಲಾ ಆಕಾಂಕ್ಷಿಗಳ ಸೀಟುಗಳನ್ನು ರದ್ದುಗೊಳಿಸಲಾಗುತ್ತದೆ.
ಎರಡನೇ ಸುತ್ತಿನ KCET 2021 ಸೀಟು ಹಂಚಿಕೆಯನ್ನು ಪರಿಶೀಲಿಸಲು ಹೀಗೆ ಮಾಡಿ.
– ಮೊದಲು KCET 2021 ಅಧಿಕೃತ ವೆಬ್‌ಸೈಟ್ kea.kar.nic.inಗೆ ಭೇಟಿ ನೀಡಿ.
– ಎರಡನೇ ವಿಸ್ತೃತ ಸುತ್ತಿನ KCET ಹಂಚಿಕೆ 2021 ಅನ್ನು ಪರಿಶೀಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
– ನಿಮ್ಮ ಕರ್ನಾಟಕ ಸಿಇಟಿ ಸಂಖ್ಯೆಯನ್ನು ನಮೂದಿಸಿ.
– ಅಲ್ಲಿ UGCET 2021 ಸೀಟು ಹಂಚಿಕೆಯ ಮಾಹಿತಿ ಹೋಂ ಸ್ಕ್ರೀನ್ನಲ್ಲಿ ಕಾಣುತ್ತದೆ.
– ಆ ಸೀಟು ಹಂಚಿಕೆಯ ಮಾಹಿತಿಯನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
KCET ಸೀಟು ಹಂಚಿಕೆ 2021 ಫಲಿತಾಂಶಗಳನ್ನು ಆಕಾಂಕ್ಷಿಗಳು ನಮೂದಿಸಿದ ಆಯ್ಕೆಗಳ ಆಧಾರದ ಮೇಲೆ ಪ್ರಕಟಿಸಲಾಗಿದೆ. ಎರಡನೇ ವಿಸ್ತೃತ ಸುತ್ತಿನ KCET 2021 ಆಯ್ಕೆ ಪ್ರವೇಶ ಪೋರ್ಟಲ್ ಡಿಸೆಂಬರ್ 26ರವರೆಗೆ ತೆರೆದಿರುತ್ತದೆ.
ಆಗಸ್ಟ್ 28, 29 ಮತ್ತು 30ರಂದು KCET ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಪರೀಕ್ಷೆಯನ್ನು ಮಾಡಲಾಗಿತ್ತು. ಫಲಿತಾಂಶವನ್ನು ಸೆಪ್ಟೆಂಬರ್ 20ರಂದು ಪ್ರಕಟಿಸಲಾಯಿತು. UGCET ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ನವೆಂಬರ್ 27ರಂದು ಬಿಡುಗಡೆ ಮಾಡಲಾಯಿತು. ಇದೀಗ 2ನೇ ವಿಸ್ತ್ರತ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಸಿಇಟಿ ಪರೀಕ್ಷೆಯು ರಾಜ್ಯದಲ್ಲಿ ನೆಲೆಗೊಂಡಿರುವ ಕಾಲೇಜುಗಳು ಮತ್ತು ಸಂಸ್ಥೆಗಳು ನೀಡುವ ಎಂಜಿನಿಯರಿಂಗ್, ಫಾರ್ಮಸಿ, ಫಾರ್ಮಾ ಡಿ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶವನ್ನು ಒದಗಿಸಲು ಆಯೋಜಿಸಲಾದ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.
ಇದನ್ನೂ ಓದಿ: KCET 2021: ಕರ್ನಾಟಕ ಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ; ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ