ಕೇಂದ್ರೀಯ ವಿದ್ಯಾಲಯಗಳಲ್ಲಿ ಸದ್ಯಕ್ಕೆ ಇಲ್ಲ ಸಂಸದರ ಕೋಟಾದಡಿ ಪ್ರವೇಶ; ಸುತ್ತೋಲೆ ಹೊರಡಿಸಿದ ಶಿಕ್ಷಣ ಸಚಿವಾಲಯ

| Updated By: Lakshmi Hegde

Updated on: Apr 15, 2022 | 8:49 AM

ಕೇಂದ್ರೀಯ ವಿದ್ಯಾಲಯಗಳಲ್ಲಿ 2021-22ರ ಸಾಲಿನಲ್ಲಿ ಒಟ್ಟು 21 ವಿಶೇಷ ನಿಬಂಧನೆಗಳಡಿ 1,75,261 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಅದರಲ್ಲಿ ಸಂಸದರ ಕೋಟಾದಡಿ ಪ್ರವೇಶಾತಿ ಪಡೆದಿದ್ದು 7,301.

ಕೇಂದ್ರೀಯ ವಿದ್ಯಾಲಯಗಳಲ್ಲಿ ಸದ್ಯಕ್ಕೆ ಇಲ್ಲ ಸಂಸದರ ಕೋಟಾದಡಿ ಪ್ರವೇಶ; ಸುತ್ತೋಲೆ ಹೊರಡಿಸಿದ ಶಿಕ್ಷಣ ಸಚಿವಾಲಯ
ಸಾಂದರ್ಭಿಕ ಚಿತ್ರ
Follow us on

ಕೇಂದ್ರೀಯ ವಿದ್ಯಾಲಯಗಳಿಗೆ ಸಂಸದರ ಕೋಟಾ ಸೇರಿ ಇನ್ನಿತರ ವಿಶೇಷ ನಿಬಂಧನೆಗಳಡಿಯಲ್ಲಿ ಪ್ರವೇಶಾತಿಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಸಂಸದರ ಕೋಟಾವನ್ನು ರದ್ದುಗೊಳಿಸಬೇಕೋ ಅಥವಾ ಮುಂದುವರಿಸಬೇಕೋ ಎಂಬ ಬಗ್ಗೆ ಸಂಸದರ ಜತೆ  ಸಮಾಲೋಚನೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿತ್ತು. ಹೀಗಾಗಿ ಸದ್ಯದ ಮಟ್ಟಿಗೆ ಎಂಪಿಗಳ ಕೋಟಾದಡಿ ಯಾವುದೇ ಅಡ್ಮಿಶನ್​ ನಡೆಯುತ್ತಿಲ್ಲ. ಕೇಂದ್ರೀಯ ವಿದ್ಯಾಲಯ ಸಂಘಟನ್​ (KVS) ಎಂಬುದು ಒಂದು ಸ್ವತಂತ್ರ ಸಂಸ್ಥೆ. ದೇಶಾದ್ಯಂತ ಇದರ ಶಾಲೆಗಳಿದ್ದು, ಅವೆಲ್ಲ ಕೇಂದ್ರ ಶಿಕ್ಷಣ ಸಚಿವಲಾಯದಡಿ ಬರುತ್ತವೆ. ಏಪ್ರಿಲ್​ 12ರಂದು, ದೇಶದ ಎಲ್ಲ ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರಿಗೆ ಸುತ್ತೋಲೆ ನೀಡಲಾಗಿದ್ದು, ಮುಂದಿನ ಆದೇಶದವರೆಗೆ ವಿಶೇಷ ನಿಬಂಧನೆಗಳಡಿ ಪ್ರವೇಶಾತಿ ಮಾಡುವಂತಿಲ್ಲ. ಈ ಬಗ್ಗೆ ಕೇಂದ್ರೀಯ ವಿದ್ಯಾಲಯ ಸಂಘಟನ್​ ಪ್ರಧಾನಕಚೇರಿಯಲ್ಲಿ ನಿರ್ಧಾರವಾಗಿದೆ ಎಂದು ತಿಳಿಸಿದೆ. 

ವಿಶೇಷ ನಿಬಂಧನೆ ಅಥವಾ ಹಂಚಿಕೆಯ ಪಟ್ಟಿ ದೊಡ್ಡದಾಗಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಸದರ ಕೋಟಾವನ್ನು ಸದ್ಯಕ್ಕೆ ರದ್ದು ಮಾಡಿಲ್ಲ. ಬದಲಿಗೆ ಉಳಿದ ವಿಶೇಷ ನಿಬಂಧನಾ ಪ್ರವೇಶಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿದಂತೆ ಇದಕ್ಕೂ ತಡೆ ಹಿಡಿಯಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನ್​ ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಕೇಂದ್ರೀಯ ವಿದ್ಯಾಲಯಗಳ ಪ್ರವೇಶಾತಿ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಲೋಕಸಭೆಗೆ ನೀಡಿದ ಡಾಟಾ ಪ್ರಕಾರ, ಕೇಂದ್ರೀಯ ವಿದ್ಯಾಲಯಗಳಲ್ಲಿ 2021-22ರ ಸಾಲಿನಲ್ಲಿ ಒಟ್ಟು 21 ವಿಶೇಷ ನಿಬಂಧನೆಗಳಡಿ 1,75,261 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಅದರಲ್ಲಿ ಸಂಸದರ ಕೋಟಾದಡಿ ಪ್ರವೇಶಾತಿ ಪಡೆದಿದ್ದು 7,301. (ಸಂಸದರ ಕೋಟಾ ಎಂದರೆ, ಪ್ರತಿ ಶೈಕ್ಷಣಿಕ ವರ್ಷದಲ್ಲೂ 1-9 ತರಗತಿವರೆಗಿನ ಪ್ರವೇಶಕ್ಕೆ ಪ್ರತಿ ಸಂಸದ 10  ವಿದ್ಯಾರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಬಹುದು. ಅಂದರೆ ಆ ವಿದ್ಯಾರ್ಥಿಯ ಪಾಲಕರು ಸಂಸದನ ಲೋಕಸಭಾ ಕ್ಷೇತ್ರದವರಾಗಿರಬೇಕು. ಮೊಟ್ಟಮೊದಲು ಈ ಕೋಟಾವನ್ನು ವಿಶೇಷ ವಿತರಣಾ ಯೋಜನೆಯಡಿ 1975ರಲ್ಲಿ ಪರಿಚಯಿಸಲಾಯಿತು. ಹಿಂದೆಯೂ ಎರಡು ಬಾರಿ ಇದನ್ನು ನಿಲ್ಲಿಸಲಾಗಿತ್ತು.

ಇದನ್ನೂ ಓದಿ: 51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ

Published On - 8:35 am, Fri, 15 April 22