ಪಿಯುಸಿ ವಿಜ್ಞಾನ
ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದಿದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಬಹಳಷ್ಟು ಆಯ್ಕೆಗಳಿರುತ್ತದೆ. ಈ ವರ್ಷ 14,433,107 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪುಗೊಳಿಸಲು ಇವರಿಗೆ ಮರ್ಗದರ್ಶನದ ಅಗತ್ಯವಿದೆ. ದ್ವಿತೀಯ ಪಿಯುಸಿ ವಿಜ್ಞಾನ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ನಂತರ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಎರಡು ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಬೇಡಿಕೆಯ ವೃತ್ತಿಪರ ಕೋರ್ಸ್ಗಳಾಗಿವೆ. ಆದರೆ ಇವೆರಡಲ್ಲದೆ ಇನ್ನು ಹಲವು ವಲಯಗಳೂ ಇವೆ. ಜೀವಶಾಸ್ತ್ರದ ವಿದ್ಯಾರ್ಥಿಗಳು ಎಂಬಿಬಿಎಸ್(MBBS), ಬಿಡಿಎಸ್(BDS), ಬಿಎಸ್ಸಿ(BSc), ಫಾರ್ಮಸಿ, ಫೋರೆನ್ಸಿಕ್ ಸೈನ್ಸ್, ಮೈಕ್ರೋಬಯಾಲಜಿ, ಹೀಗೆ ಹಲವಾರು ವಿಷಯಗಳನ್ನು ಆಯ್ಕೆ ಮಾಡಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (PCM) ಪದವೀಧರರು ಬಿಟೆಕ್(B.Tech), ಬಿಇ(B.E), ಬಿಆರ್ಚ್(B.Arch.), ಏರೋನಾಟಿಕ್ಸ್ ಮತ್ತು ಇತರ ಕೋರ್ಸ್ ಗಳನ್ನೂ ಆರಿಸಿಕೊಳ್ಳುವ ಅವಕಾಶವಿದೆ.
ಪಿಯುಸಿ ವಿಜ್ಞಾನ (PCM) ನಂತರ ಹೆಚ್ಚಿನ–ಸಂಬಳದ ಸಿಗುವುದಕ್ಕೆ ಮಾಡಬಹುದಾದ ಕೋರ್ಸ್‌ಗಳು:
ವಿಜ್ಞಾನ ಕೋರ್ಸ್ ಅನ್ನು ಮತ್ತಷ್ಟು ವೈದ್ಯಕೀಯ ಮತ್ತು ವೈದ್ಯಕೀಯೇತರ ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಪಿಸಿಎಂ (PCM) ಎಂದು ಕರೆಯಲ್ಪಡುವ ವೈದ್ಯಕೀಯೇತರ ಕ್ಷೇತ್ರಗಳ ಮೂರು ಪ್ರಮುಖ ವಿಷಯ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ. ಪಿಯುಸಿ ವಿಜ್ಞಾನ (PCM) ನಂತರ ಈ ಕೆಳಗಿನ ಕೋರ್ಸ್ ಆಯ್ಕೆ ಮಾಡಿದರೆ ನಿಮಗೆ ಮುಂದೆ ಹೆಚ್ಚು ಸಂಬಳ ಸಿಗಬಹುದು.
ಮೊದಲ ಆಯ್ಕೆ ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್. ಈ ಎರಡು ಕೋರ್ಸ್ ಗಳು ಬಹಳಷ್ಟು ಜನಪ್ರಿಯವಾಗಿವೆ.
- ಇಂಜಿನಿಯರಿಂಗ್: ಇಂಜಿನಿಯರಿಂಗ್ 8 ಸೆಮಿಸ್ಟರ್ ಇರುವ 4 ವರ್ಷದ ಕೋರ್ಸ್. ಈ ಕೋರ್ಸ್ ಗೆ ಸೇರಲು ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಿಮ್ಮ ನೆಚ್ಚಿನ ಕಾಲೇಜಿನಲ್ಲಿ ನಿಮಗೆ ಸೀಟ್ ಬೇಕಾದಲ್ಲಿ ಕೆಲವು ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕು. ಉದಾಹರಣೆಗೆ ರಾಷ್ಟ್ರೀಯ ಮಟ್ಟದಲ್ಲಿ (ಜೆಇಇ ಮೇನ್), ರಾಜ್ಯ ಮಟ್ಟದಲ್ಲಿ (ಸಿಇಟಿ), ಮತ್ತು ಕೆಲವೊಂದು ಸಂಸ್ಥೆಗಳ ಅನುಸಾರವಾಗಿ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಇಂಜಿನಿಯರಿಂಗ್ ನಂತರ ಕನಿಷ್ಠ 4 ಲಕ್ಷ ರೂ. – 6 ಲಕ್ಷ ರೂ ವಾರ್ಷಿಕ ವೇತನ ಸಿಗುತ್ತದೆ.
- ಎಂಬಿಬಿಎಸ್: ಬ್ಯಾಚುಲರ್ ಆಫ್ ಮೆಡಿಕಲ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ 5.5-ವರ್ಷಗಳ ಕೋರ್ಸ್. ಇದು ಇಂಟರ್ನ್‌ಶಿಪ್ ಅನ್ನು ಒಳಗೊಂಡಿದೆ. ಇದು 12 ನೇ ನಂತರ ಹೆಚ್ಚು ಸಂಬಳ ಸಿಗುವ ಕೋರ್ಸ್‌ಗಳ ಉನ್ನತ ಆಯ್ಕೆಗಳಲ್ಲಿ ಒಂದಾಗಿದೆ. ಅಲ್ಲದೇ ಉದ್ಯೋಗವನ್ನು ಖಾತರಿಪಡಿಸುವ ಭಾರತದ ಏಕೈಕ ಕೋರ್ಸ್ ಎಂದರೆ ತಪ್ಪಾಗಲಾರದು. ಇದನ್ನೂ ಆಯ್ಕೆ ಮಾಡುವ ಅಭ್ಯರ್ಥಿಯು ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ 50% ನೊಂದಿಗೆ ಉತ್ತೀರ್ಣರಾಗಿರಬೇಕು. ಇದಲ್ಲದೇ ನೀಟ್ (NEET), ಜೆಐಪಿಎಂಇಆರ್ (JIPMER) ಮತ್ತು ಎಐಎಂಎಂಎಸ್ (AIIMS) ಸೇರಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಎಂಬಿಬಿಎಸ್ (MBBS) ಗಾಗಿ ನಿರ್ವಹಿಸಲಾಗುತ್ತಿದೆ. ಕೋರ್ಸ್ ನಂತರ 8 – 10 ಲಕ್ಷ ರೂ . ಕನಿಷ್ಠ ವಾರ್ಷಿಕ ವೇತನ ಪಡೆಯಬಹುದು.
- ಬಿಬಿಎ: ಪಿಯುಸಿಯಲ್ಲಿ ವಿಜ್ಞಾನವನ್ನು ಮುಗಿಸಿದ ನಂತರ, ತಮ್ಮದೇ ಆದ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಲು ಬಯಸುವ ಅಥವಾ ಹೆಚ್ಚಿನ ವ್ಯವಹಾರ ಅಧ್ಯಯನವನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ BBA ಪ್ರೋಗ್ರಾಂ ಸೂಕ್ತವಾಗಿದೆ. ಬಿಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ಎಂಬಿಎ ವ್ಯಾಸಂಗ ಮಾಡುವ ಅಗತ್ಯವಿಲ್ಲ. ಅರ್ಜಿದಾರರು ಯಾವುದೇ ಸ್ಟ್ರೀಮ್‌ನವರಾಗಿರಬಹುದು ಆದರೆ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕೆಲವು ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆ ಅಥವಾ ಸಂದರ್ಶನದಲ್ಲಿ ಉತ್ತೀರ್ಣರಾಗ ಬೇಕಾಗುತ್ತದೆ. ಈ ಕೋರ್ಸ್ ಬಳಿಕ ನೀವು ನಿಮ್ಮ ವೃತ್ತಿಯನ್ನು 2.4 ಲಕ್ಷ ರೂ ವಾರ್ಷಿಕ ವೇತನದಿಂದ ಪ್ರಾರಂಭಿಸುತ್ತೀರಿ.
- ಬಿ. ಫಾರ್ಮ: ಬಿ. ಫಾರ್ಮ ಕೋರ್ಸ್ 4 ವರ್ಷಗಳ ಅವಧಿಯದಾಗಿದ್ದು ಸಾವಯವ, ರಾಸಾಯನಿಕ ಸಂಯೋಜನೆ ಮತ್ತು ಮಾನವ ದೇಹದ ಮೇಲೆ ಔಷಧಗಳು, ಸಂಬಂಧಿತ ಪದಾರ್ಥಗಳ ಚಿಕಿತ್ಸಕ ಪರಿಣಾಮಗಳನ್ನು ಒಳಗೊಂಡಿದೆ. ಬಿ.ಫಾರ್ಮಸಿ ವಿದ್ಯಾರ್ಥಿಯಾಗಲು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಕನಿಷ್ಠ 50 ಶೇಕಡಾ ಗ್ರೇಡ್‌ನೊಂದಿಗೆ ತಮ್ಮ ಪಿಯುಸಿ ಪೂರ್ಣಗೊಳಿಸಿರಬೇಕು. ಈ ಕೋರ್ಸ್ ಬಳಿಕ ಕನಿಷ್ಠ 1.6-3 ಲಕ್ಷ ರೂ ವಾರ್ಷಿಕ ವೇತನ ಪಡೆಯಬಹುದು
- ವಾಸ್ತುಶಿಲ್ಪ (ಬಿ.ಆರ್ಕ್)– ಈ 5 ವರ್ಷದ ಕೋರ್ಸ್ಆ ರ್ಕಿಟೆಕ್ಟ್ ಪರವಾನಗಿ ಪರೀಕ್ಷೆಗೆ ವಿದ್ಯಾರ್ತಿಗಳನ್ನು ಸಿದ್ಧಪಡಿಸುತ್ತದೆ. ವಾಸ್ತುಶಿಲ್ಪಿಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳನ್ನು ಅಭಿವೃದ್ಧಿಪಡಿಸಲು, ಯೋಜಿಸಲು ಮತ್ತು ಇತರ ಉಪಯುಕ್ತ ಪ್ರದೇಶಗಳು, ಕಟ್ಟಡಗಳು ಮತ್ತು ರಸ್ತೆಮಾರ್ಗಗಳನ್ನು ಸಿದ್ಧಪಡಿಸಲು ಬಳಸಿಕೊಳ್ಳುತ್ತವೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ 50% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿಜ್ಞಾನ ಸ್ಟ್ರೀಮ್‌ನ ವಿದ್ಯಾರ್ಥಿಗಳು ಬಿ ಆರ್ಚ್ ಕೋರ್ಸ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೋರ್ಸ್ ನಂತರ ವಾರ್ಷಿಕ ವೇತನ 4-8 ಲಕ್ಷ ರೂ.
- ಅಂಕಿಅಂಶಗಳು (ಬಿ.ಸ್ಟಾಟ್): ಬಿಸ್ಟಾಟ್, ಅಥವಾ ಬ್ಯಾಚುಲರ್ ಆಫ್ ಸ್ಟ್ಯಾಟಿಸ್ಟಿಕ್ಸ್ ಅನ್ನು ಅಂಕಿಅಂಶಗಳು, ಗಣಿತಶಾಸ್ತ್ರ ಮತ್ತು ಕೆಲವು ಕಂಪ್ಯೂಟರ್ ಅಪ್ಲಿಕೇಶನ್‌ಗಳ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ ಮತ್ತು ಇದು 3 ವರ್ಷಗಳ ಕೋರ್ಸ್. ಅರ್ಜಿದಾರರು ಪಿಯುಸಿಯಲ್ಲಿ ಇಂಗ್ಲಿಷ್ ಮತ್ತು ಗಣಿತ ಅಥವಾ ಅಂಕಿಅಂಶಗಳನ್ನು ಆಯ್ಕೆ ಮಾಡಿಕೊಂಡಿದ್ದವರಾಗಬೇಕು, ಆ ಕಾಲೇಜಿಗೆ ಅಗತ್ಯವಾದ ಕಟ್–ಆಫ್ ಅಂಕಗಳನ್ನು ಪಡೆದಿರಬೇಕು. ಕೋರ್ಸ್ ನಂತರ ವಾರ್ಷಿಕ ವೇತನ 4-5 ಲಕ್ಷ ರೂ.
- ಬಿಎಸ್ಸಿ ಐಟಿ ಮತ್ತು ಸಾಫ್ಟ್‌ವೇರ್: ಈ ಕೋರ್ಸ್ ನಲ್ಲಿ ನೆಟ್‌ವರ್ಕಿಂಗ್, ಕಂಪ್ಯೂಟರ್ ಪ್ರಿನ್ಸಿಪಲ್ಸ್, ಸಾಫ್ಟ್‌ವೇರ್ ಅಭಿವೃದ್ಧಿ, ಆಪರೇಟಿಂಗ್ ಸಿಸ್ಟಮ್‌ಗಳು, ಟೆಸ್ಟಿಂಗ್, ಇನ್ಫರ್ಮೇಷನ್ ಡೇಟಾಬೇಸ್, ವೆಬ್ ಪ್ರೋಗ್ರಾಮಿಂಗ್, ಕ್ವಾಲಿಟಿ ಅಶೂರೆನ್ಸ್ ಜೊತೆ ವಿವಿಧ ವಿಷಯಗಳನ್ನು ಒಳಗೊಂಡಿದೆ. ಅರ್ಜಿದಾರರು ತಮ್ಮ ಪಿಯುಸಿಯಲ್ಲಿ ಇಂಗ್ಲಿಷ್ ಮತ್ತು ಯಾವುದೇ ಸ್ಟ್ರೀಮ್ ಪರೀಕ್ಷೆಯಲ್ಲಿ ಒಟ್ಟು ಕನಿಷ್ಠ 50% ಗಳಿಸಿರಬೇಕು. ಕೋರ್ಸ್ ನಂತರ ವಾರ್ಷಿಕ ವೇತನ 2-4 ಲಕ್ಷ ರೂ.
- ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (BCA): ಬಹುಪಾಲು ಭಾರತೀಯ ಸಂಸ್ಥೆಗಳು ಮತ್ತು ಖಾಸಗಿ ಕಾಲೇಜುಗಳು ಕಂಪ್ಯೂಟರ್ ವಿಜ್ಞಾನ ಮತ್ತು ಅದರ ಅನ್ವಯಗಳನ್ನು ಪರೀಕ್ಷಿಸುವ ಈ ಮೂರು ವರ್ಷಗಳ ಕಾರ್ಯಕ್ರಮವನ್ನು ನೀಡುತ್ತವೆ. ಆಕಾಂಕ್ಷಿ ಅರ್ಜಿದಾರರು ತಮ್ಮ ಉನ್ನತ ಮಾಧ್ಯಮಿಕ ಪರೀಕ್ಷೆಯನ್ನು ಇಂಗ್ಲಿಷ್‌ನಲ್ಲಿ ಮತ್ತು ಯಾವುದೇ ಇತರ ವಿಷಯದಲ್ಲಿ ಕನಿಷ್ಠ 45 ಶೇ. ಉತ್ತೀರ್ಣರಾಗಿರಬೇಕು. ಕೋರ್ಸ್ ನಂತರ ವಾರ್ಷಿಕ ವೇತನ 1ಲಕ್ಷ ರೂ.
ಪಿಯುಸಿ ವಿಜ್ಞಾನ (ಪಿಸಿಬಿ) ನಂತರ ಹೆಚ್ಚಿನ ಸಂಬಳ ಸಿಗುವುದಕ್ಕೆ ಮಾಡಬಹುದಾದ ಕೋರ್ಸ್‌ಗಳು
ಪಿಯುಸಿ ವಿಜ್ಞಾನ (ಪಿಸಿಬಿ) ನಂತರ ಹೆಚ್ಚಿನ ಸಂಬಳ ಸಿಗುವುದಕ್ಕೆ ಮಾಡಬಹುದಾದ ಕೋರ್ಸ್‌ಗಳು ದಂತವೈದ್ಯಶಾಸ್ತ್ರ, ನರ್ಸಿಂಗ್, ಪೋಷಣೆ ಮತ್ತು ಆಹಾರ ಪದ್ಧತಿ (ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್), ಬಯೋಮೆಡಿಕಲ್ ಸೈನ್ಸಸ್ ,ಔಷಧಾಲಯ (ಫಾರ್ಮ). ಈ ಕೋರ್ಸ್ ಗಳಿಗೆ ಸೇರಲು ನೀಟ್ (NEET), ನರ್ಸಿಂಗ್ ಪರೀಕ್ಷೆ ಮತ್ತು ಇತರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಕೆಲವು ಸಂಸ್ಥೆಗಳಲ್ಲಿ ಪ್ರವೇಶ ಪರೀಕ್ಷೆಯು ಇರುತ್ತದೆ. ಈ ಕೋರ್ಸ್ ಗಳನ್ನೂ ಮುಗಿಸಿದ ನಂತರ ವಾರ್ಷಿಕ ವೇತನ 3-5 ಲಕ್ಷ ರೂ ಪಡೆಯಬಹುದು.
ಹೆಚ್ಚಿನ–ಸಂಬಳದ ಸಿಗುವುದಕ್ಕೆ ಇಂಜಿನಿಯರಿಂಗ್ ಅಥವಾ ಗಣಿತ ರಹಿತ ಕೋರ್ಸ್‌ಗಳು:
- ಹೋಮಿಯೋಪತಿ (BHMS): ವಿಜ್ಞಾನ ವಿದ್ಯಾರ್ಥಿಗಳಿಗೆ BHMS ಅಧ್ಯಯನವು ಅತ್ಯುತ್ತಮ ಆಯ್ಕೆ. ಇತ್ತೀಚಿನ ದಿನಗಳಲ್ಲಿ ಹೋಮಿಯೋಪತಿ ವೃತ್ತಿಜೀವನ ಜನಪ್ರಿಯ ಮಾರ್ಗವಾಗಿದೆ, ಮತ್ತು ಇದು ಪಿಯುಸಿ ಪೂರ್ಣಗೊಳಿಸಿದ ನಂತರ ಉತ್ತಮ ಸಂಬಳ ಸಿಗುವ ಕೋರ್ಸ್‌ಗಳಲ್ಲಿ ಒಂದಾಗಿದೆ. ಈ ಕೋರ್ಸ್ 5.5 ವರ್ಷಗಳವರೆಗೆ ಇರುತ್ತದೆ ಮತ್ತು ಪದವಿಯ ನಂತರ, ನಿಮಗೆ ಸಾರ್ವಜನಿಕ ವಲಯದಲ್ಲಿ ವಿವಿಧ ಅವಕಾಶಗಳನ್ನು ಸಿಗುತ್ತದೆ. ವಾಣಿಜ್ಯ ಕ್ಷೇತ್ರದಲ್ಲಿ ಒಬ್ಬ ಹೋಮಿಯೋಪತಿ ವೈದ್ಯರಾಗಿ ವರ್ಷಕ್ಕೆ 3-4.5 ಲಕ್ಷ ರೂ. ಗಳಿಸಬಹುದು.
- ಫಾರ್ಮಸಿ: ಫಾರ್ಮಸಿಯು ಗ್ರಾಹಕರಿಗೆ ಔಷಧಗಳನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಶಿಫಾರಸು ಮಾಡಲಾಗುತ್ತದೆ ಎಂಬುದರ ಕುರಿತು ತಿಳಿದುಕೊಳ್ಳಲು ಬಯಸುವವರಿಗೆ ಇದೊಂದು ಪ್ರಮುಖ ವೃತ್ತಿ ಕ್ಷೇತ್ರವಾಗಿದೆ. ಆಸಕ್ತ ವಿದ್ಯಾರ್ಥಿಗಳು ಡಿ ಫಾರ್ಮಸಿಯನ್ನು ಆಯ್ಕೆ ಮಾಡಬಹುದು ಮತ್ತು ಈ ವಿಷಯದ ಬಗ್ಗೆ ಹೆಚ್ಚು ತಿಳಿಯಲು ಬ್ಯಾಚುಲರ್ ಆಫ್ ಫಾರ್ಮಸಿಯನ್ನು ಮುಂದುವರಿಸಬಹುದು. ಫಾರ್ಮಸಿಯಲ್ಲಿ ಪದವಿಯನ್ನು ಗಳಿಸಿದ ನಂತರ, ಔಷಧೀಯ ಸಂಸ್ಥೆ, ಆಸ್ಪತ್ರೆ ಅಥವಾ ಸಣ್ಣ ಪುಟ್ಟ ಔಷಧಾಲಯ, ಸಂಶೋಧನಾ ಸಂಸ್ಥೆಮತ್ತು ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ವಾರ್ಷಿಕ ವೇತನ 3-6 ಲಕ್ಷ ರೂ ಪಡೆಯುವ ಅವಕಾಶವಿದೆ.
- ಮನೋವಿಜ್ಞಾನ: ಇಂದಿನ ದಿನಗಳಲ್ಲಿ ಜನರು ದೈಹಿಕ ಸದೃಢತೆಗೆ ಹೆಚ್ಚು ಒತ್ತು ನೀಡುವಂತೆ ಮಾನಸಿಕ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡುತ್ತಾರೆ. ಇದು ಮನೋವಿಜ್ಞಾನವನ್ನು ಅಧ್ಯಯನ ಮಾಡಲು ಮತ್ತು ಅದರ ಹಲವಾರು ವಿಶೇಷತೆಗಳಾದ ಇಂಡಸ್ಟ್ರಿಯಲ್ ಸೈಕಾಲಜಿ, ಕೌನ್ಸೆಲಿಂಗ್ ಸೈಕಾಲಜಿ, ಮತ್ತು ಕ್ಲಿನಿಕಲ್ ಸೈಕಾಲಜಿ ಮುಂತಾದವುಗಳಲ್ಲಿ ಅನೇಕ ಆಕಾಂಕ್ಷಿಗಳ ಆಸಕ್ತಿಯನ್ನು ಕೆರಳಿಸಿದೆ. ಭಾರತದಲ್ಲಿ, ನೀವು ಕ್ಲಿನಿಕಲ್ ಮನಶ್ಶಾಸ್ತ್ರಜ್ಞರಾಗಿ ಅಥವಾ ಮನೋವೈದ್ಯರಾಗಿ ವೃತ್ತಿಯನ್ನು ಆರಿಸಿಕೊಳ್ಳುತ್ತೀರಾ ಎಂಬುದರ ಆಧಾರದ ಮೇಲೆ ಮನಶ್ಶಾಸ್ತ್ರಜ್ಞರ ವಿಶಿಷ್ಟ ಆದಾಯವು ವರ್ಷಕ್ಕೆ 2.5 ಮತ್ತು 3.5 ಲಕ್ಷ ರೂ.ಗಳ ನಡುವೆ ಇರುತ್ತದೆ. ಏಕೆಂದರೆ ಮನಶ್ಶಾಸ್ತ್ರಜ್ಞ ಮತ್ತು ಮನೋವೈದ್ಯರ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಕ್ಲಿನಿಕಲ್ ಸೈಕಾಲಜಿಸ್ಟ್ ಅಥವಾ ಸೈಕಿಯಾಟ್ರಿಸ್ಟ್ ಆಗಲು, ನೀವು ಮೊದಲು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಬೇಕು ಆದರೆ ಮನಶ್ಶಾಸ್ತ್ರಜ್ಞರಾಗಲು, ನೀವು ಮೊದಲು PhD ಅನ್ನು ಪಡೆಯಬೇಕು. ಅಥವಾ ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪಡೆಯಬೇಕು
- ಫೋರೆನ್ಸಿಕ್ ಸೈನ್ಸ್: ಫೋರೆನ್ಸಿಕ್ ಸೈನ್ಸ್ ಭೌತಶಾಸ್ತ್ರ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಒಳಗೊಂಡಿದೆ. ಫೋರೆನ್ಸಿಕ್ ಸೈನ್ಸ್ ಕೋರ್ಸ್ ಅನ್ನು ಆಯ್ಕೆ ಮಾಡುವುದರಿಂದ, ನೀವು ಸಾರ್ವಜನಿಕ ವಲಯದಲ್ಲಿ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ವೃತ್ತಿಪರ ಅವಕಾಶಗಳನ್ನು ಪಡೆಯಬಹುದು. ಭಾರತದಲ್ಲಿ ಫೋರೆನ್ಸಿಕ್ ವಿಜ್ಞಾನಿಗಳ ವಾರ್ಷಿಕ ವೇತನವು ಅಂದಾಜು 3-4 ಲಕ್ಷ ರೂ.
NEET ಇಲ್ಲದೆ 12 ನೇ ವಿಜ್ಞಾನ ನಂತರ ಹೆಚ್ಚಿನ ಸಂಬಳ ಸಿಗಬೇಕಾದರೆ ಮಾಡಬಹುದಾದ ಕೋರ್ಸ್‌ಗಳು:
ವಿಜ್ಞಾನ ವಿದ್ಯಾರ್ಥಿಗಳಿಗೆ NEET ಸ್ಕೋರ್ ಅಗತ್ಯವಿಲ್ಲದ ಹಲವಾರು ವೈದ್ಯಕೀಯ ಕೋರ್ಸ್‌ಗಳನ್ನು ಆರಿಸಿಕೊಳ್ಳಬಹುದು. NEET ಅನ್ನು ತೆಗೆದುಕೊಳ್ಳದೆಯೇ ಪಿಯುಸಿ ಪೂರ್ಣಗೊಳಿಸಿದ ನಂತರ ಹೆಚ್ಚಿನ–ಸಂಬಳದ ಸಿಗುವುದಕ್ಕೆ ಮಾಡಬೇಕಾದ ಕೋರ್ಸ್‌ಗಳು ಇಲ್ಲಿವೆ–
ಇಂತಹ ವಿದ್ಯಾರ್ಥಿಗಳಿಗೆ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಕೋರ್ಸ್‌ಗಳನ್ನು ಮುಂದುವರಿಸಬಹುದು, ಇದು ವಿವಿಧ ವಿಶೇಷತೆಗಳಲ್ಲಿ ಲಾಭದಾಯಕ ಪದವಿ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಿಂದ ಹಾಸ್ಪಿಟಲ್ ಮತ್ತು ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್‌ವರೆಗೆ, ಹಲವಾರು ಕೋರ್ಸ್ ಮಾಡಲು ಅವಕಾಶವಿದೆ:
- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BMS)
- ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು
- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (BHM)
- ಸಂಯೋಜನೆಯಲ್ಲಿ ಎಂಬಿಎ
- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA)
ಕಲೆ, ವಿನ್ಯಾಸ ಮತ್ತು ಮಾಧ್ಯಮ ಕೋರ್ಸ್‌ಗಳು
ವೈಜ್ಞಾನಿಕ ಸ್ಟ್ರೀಮ್‌ನಲ್ಲಿ ಪಿಯುಸಿ ಮುಗಿಸಿದ ನಂತರ, ಅನೇಕ ವಿದ್ಯಾರ್ಥಿಗಳು ವಿನ್ಯಾಸ, ಬರವಣಿಗೆ ಮತ್ತು ಚಿತ್ರಕಲೆ ಮುಂತಾದ ಕಲಾತ್ಮಕ ಹವ್ಯಾಸಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ನೀವು ಕಲಾವಿದರಾಗಲು ಅಥವಾ ನಿರಂತರವಾಗಿ ಬೆಳೆಯುತ್ತಿರುವ ಮಾಧ್ಯಮ ವಲಯದಲ್ಲಿ ನಿಮ್ಮ ವೃತ್ತಿಯನ್ನು ಮುನ್ನಡೆಸಲು ಬಯಸಿದರೆ, ನಿಮಗೆ ಪ್ರವೇಶಿಸಬಹುದಾದ ವಿವಿಧ ಅಲ್ಪಾವಧಿಯ ಕೋರ್ಸ್‌ಗಳು ಮತ್ತು ಪದವಿ ಕಾರ್ಯಕ್ರಮಗಳ ಪಟ್ಟಿ ಇಲ್ಲದೆ:
- ಬ್ಯಾಚುಲರ್ ಆಫ್ ಆರ್ಟ್ಸ್ (BA)
- ಬ್ಯಾಚುಲರ್ ಆಫ್ ಡಿಸೈನ್ (B.Des)
- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (BA)
- ಫೋಟೋಗ್ರಫಿ ಕೋರ್ಸ್
- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (BFA)
- ಪತ್ರಿಕೋದ್ಯಮ ಕೋರ್ಸ್‌ಗಳು
- ಫ್ಯಾಷನ್ ಟೆಕ್ನೋಲಜಿ ಕೋರ್ಸ್‌ಗಳು
- ಫೈನ್ ಆರ್ಟ್ ಕೋರ್ಸ್‌ಗಳು
- ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಡಿಪ್ಲೊಮಾ
- ಇಂಗ್ಲಿಷ್ ಲಿಟರೇಚರ್ ಕೋರ್ಸ್‌ಗಳು
- ಮಲ್ಟಿಮೀಡಿಯಾ ಕೋರ್ಸ್‌ಗಳು
- ಇಂಟೀರಿಯರ್ ಡಿಸೈನ್ ಕೋರ್ಸ್‌ಗಳು
- ಜವಳಿ ವಿನ್ಯಾಸ ಕೋರ್ಸ್‌ಗಳು
- ಗ್ರಾಫಿಕ್ ವಿನ್ಯಾಸ ಕೋರ್ಸ್‌ಗಳು
- ಡಿಜಿಟಲ್ ಜಾಹೀರಾತು ಕೋರ್ಸ್‌ಗಳು