Sree Siddaganga Mutt Orphanage: ಸಿದ್ಧಗಂಗಾ ಮಠದ ಅನಾಥಾಲಯದ ಪ್ರವೇಶ ಪತ್ರ ಸಲ್ಲಿಸಲು ಮೇ 25 ಕೊನೆಯ ದಿನ

|

Updated on: May 21, 2023 | 5:26 PM

ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯಕ್ಕೆ ಹೊಸದಾಗಿ 3ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಬಯಸುವ ಗ್ರಾಮೀಣ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀ ಮಠದ ಲೆಕ್ಕಪತ್ರ ವಿಭಾಗದಲ್ಲಿ ಪ್ರವೇಶ ಪತ್ರವನ್ನು ಪಡೆಯಬಹುದು.

Sree Siddaganga Mutt Orphanage: ಸಿದ್ಧಗಂಗಾ ಮಠದ ಅನಾಥಾಲಯದ ಪ್ರವೇಶ ಪತ್ರ ಸಲ್ಲಿಸಲು ಮೇ 25 ಕೊನೆಯ ದಿನ
ಸಿದ್ಧಗಂಗಾ ಮಠದ ಅನಾಥಾಲಯದ ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನ
Follow us on

ತುಮಕೂರು: ಶ್ರೀಸಿದ್ದಲಿಂಗೇಶ್ವರ ಅನಾಥಾಲಯದ (Sri Siddalingeshwara Ashram) ಪ್ರವೇಶ ಪತ್ರಗಳನ್ನು (Admission) ದಿನಾಂಕ 01.05.2023 ರಿಂದ ಕೊಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 25 ಎಂದು ಮಠ ನೀಡಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ. ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯಕ್ಕೆ ಹೊಸದಾಗಿ 3 ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಬಯಸುವ ಗ್ರಾಮೀಣ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀ ಮಠದ ಲೆಕ್ಕಪತ್ರ ವಿಭಾಗದಲ್ಲಿ ಪ್ರವೇಶ ಪತ್ರವನ್ನು ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆದ್ಯತೆಯನ್ನು ಕೊಡಲಾಗುವುದು ಎಂದು ಸುತ್ತೋಲೆ ಹೇಳುತ್ತದೆ.

ಸರಿಯಾಗಿ ಭರ್ತಿ ಮಾಡಿದ ಪ್ರವೇಶ ಪತ್ರವನ್ನು ಆಯಾ ತಾಲ್ಲೋಕಿನ ತಹಶೀಲ್ದಾರ್ ರವರಿಂದ ನಿಗಧಿತ ನಮೂನೆಯಲ್ಲಿ ಧೃಡೀಕರಿಸಲ್ಪಟ್ಟ ವಾರ್ಷಿಕ ವರಮಾನದ ಆದಾಯ ಪ್ರಮಾಣ ಪತ್ರವನ್ನು ಉಳಿದ ಸರ್ಟಿಫಿಕೇಟುಗಳೊಂದಿಗೆ 25.05.20230 ಒಳಗೆ ಅನಾಥಾಲಯದ ಕಛೇರಿಯನ್ನು ತಲುಪುವಂತೆ ಕಳುಹಿಸಬೇಕಾಗಿದೆ. ಸರಿಯಾಗಿ ಭರ್ತಿ ಮಾಡವಿರುವ ಮತ್ತು ಸರ್ಟಿಫಿಕೇಟುಗಳನ್ನು ಲಗತ್ತಿಸದೆ ಬರುವ ಪ್ರವೇಶ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಇದನ್ನೂ ಓದಿ: ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ಪ್ರವೇಶವನ್ನು ಅಪೇಕ್ಷಿಸುವ ವಿದ್ಯಾರ್ಥಿಗಳು, ದಿನಾಂಕ 29.05.2023 ರಿಂದ ಪ್ರಾರಂಭವಾಗುವ ಸಂಧರ್ಶನದ ವೇಳೆಯಲ್ಲಿ ಖುದ್ದಾಗಿ ಬಂದು ಅಧ್ಯಕ್ಷರ ಸಂಧರ್ಶನ ಪಡೆಯ ತಕ್ಕದ್ದು, ಪ್ರತ್ಯೇಕವಾದ ಸಂದರ್ಶನದ ಪತ್ರಗಳನ್ನು ಕಳುಹಿಸಿ ಕೊಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಪಿಯುಸಿ ಮರು ಮೌಲ್ಯಮಾಪನದಲ್ಲಿ ಅಚ್ಚರಿ ಫಲಿತಾಂಶ: ವಿಶೇಷ ಚೇತನ ವಿದ್ಯಾರ್ಥಿ ರಾಜ್ಯಕ್ಕೆ ಫಸ್ಟ್

ಹೆಚ್ಚಿನ ಮಾಹಿತಿಗಾಗಿ ಶ್ರೀಸಿದ್ಧಲಿಂಗ ಸ್ವಾಮಿಗಳು, ಅಧ್ಯಕ್ಷರು, ಶ್ರೀ ಸಿದ್ಧಗಂಗಾ ಮಠ, ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯ, ಶ್ರೀ ಸಿದ್ಧಗಂಗಾ ಮಠ, ತುಮಕೂರು ಇವರನ್ನಾಗಲಿ ಅಥವಾ 0816-2955059 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Published On - 5:22 pm, Sun, 21 May 23