2nd PUC Result 2023: ಪಿಯುಸಿ ಮರು ಮೌಲ್ಯಮಾಪನದಲ್ಲಿ ಅಚ್ಚರಿ ಫಲಿತಾಂಶ: ವಿಶೇಷ ಚೇತನ ವಿದ್ಯಾರ್ಥಿ ರಾಜ್ಯಕ್ಕೆ ಫಸ್ಟ್

ಪಿಯುಸಿ ಮರು ಮೌಲ್ಯಮಾಪನದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದ್ದು, ಮರು ಮೌಲ್ಯ ಮಾಪನದಲ್ಲಿ ಇಂದು ಪಿಯು ಕಾಲೇಜಿನ ವಿದ್ಯಾರ್ಥಿ ಕುಶು ನಾಯ್ಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

Follow us
ಗಂಗಾಧರ​ ಬ. ಸಾಬೋಜಿ
|

Updated on:May 19, 2023 | 1:58 PM

ಬೆಂಗಳೂರು: ಪಿಯುಸಿ ಮರು ಮೌಲ್ಯಮಾಪನ (PUC re-evaluation) ದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದ್ದು, ಮರು ಮೌಲ್ಯ ಮಾಪನದಲ್ಲಿ ಕಲಾ ವಿಭಾಗದಲ್ಲಿ ವಿದ್ಯಾರ್ಥಿ ಕುಶ್​​ ನಾಯ್ಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಆ ಮೂಲಕ ಬೆಂಗಳೂರಿನ ಜಯನಗರ ಕಾಲೇಜಿನ ವಿದ್ಯಾರ್ಥಿನಿ ತಬಸುಮ್ ಶೇಖ್​ನನ್ನು ಹಿಂದಿಕ್ಕಿದ್ದಾನೆ. ತಬಸುಮ್ ಶೇಖ್ 593 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಆದರೆ ಮರು ಮೌಲ್ಯಮಾಪನದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ವಿಶೇಷ ಚೇತನ ವಿದ್ಯಾರ್ಥಿ ಕುಶ್​ ನಾಯ್ಕ್​ ದ್ವಿತೀಯ ಪಿಯುಸಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಸತತ 8 ಬಾರಿ ಪ್ರಥಮ ರ‍್ಯಾಂಕ್‌ ಪಡೆದ ಕುಟ್ಟೂರು

ಮೌಲ್ಯಮಾಪನ ಫಲಿತಾಂಶದಲ್ಲಿ ಕಲಾ ವಿಭಾಗದ ಐಚ್ಚಿಕ ಕನ್ನಡ ವಿಷಯದಲ್ಲಿ 592 ಅಂಕಗಳಿಂದ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಫಸ್ಟ್ ರಾಂಕ್​ ಬಂದಿದ್ದಾರೆ. ಇಂದು ಪಿಯು ಕಾಲೇಜಿನ ಇನೋರ್ವ ವಿದ್ಯಾರ್ಥಿ ಕೃಷ್ಣ ಒಟ್ಟು 593 ಅಂಕಗಳ ಮೂಲಕ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾನೆ. ಈ ಮೂಲಕ ಸತತ ಎಂಟನೇ ಬಾರಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜಿಗೆ ಪ್ರಥಮ ಸ್ಥಾನ ಲಭಿಸಿದೆ.

ಇದನ್ನೂ ಓದಿ: ಸಿಇಟಿ ಪರೀಕ್ಷೆ ದಿನವೇ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ: ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಸಮಸ್ಯೆ ಭೀತಿ

ಈ ಬಾರಿ ಶೇ.74.64ರಷ್ಟು ವಿದ್ಯಾರ್ಥಿಗಳು ತೇರ್ಗಡೆ

2022–23ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶ ಏಪ್ರಿಲ್​ 21 ರಂದು ಪ್ರಕಟವಾಗಿದೆ. ಮಾ. 9ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಈ ಬಾರಿ ಶೇ.74.64ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 61.22%, ವಿಜ್ಞಾನ ವಿಭಾಗದಲ್ಲಿ 85.71%, ವಾಣಿಜ್ಯ ವಿಭಾಗದಲ್ಲಿ 75.89% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: ಕನಿಷ್ಠ ಹಾಜರಾತಿಯಿಂದ ಪರೀಕ್ಷೆ ವಂಚಿತರಾಗಿದ್ದ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪೂರಕ ಪರೀಕ್ಷೆಗೆ ನೊಂದಾಯಿಸಲು ಅವಕಾಶ

ಮರುಮೌಲ್ಯಮಾಪನಕ್ಕೆ ಅವಕಾಶ

ಈ ಹಿಂದೆ ಮರುಮೌಲ್ಯಮಾಪನದ ನಂತರ ಸುಮಾರು 6 ಅಂಕಗಳು ವ್ಯತ್ಯಾಸವಾಗಿದ್ದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತಿತ್ತು. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ಒಂದೆರಡು ಅಂಕಗಳ ವ್ಯತ್ಯಾಸದಿಂದ ಡಿಸ್ಟಿಂಕ್ಷನ್ (85% ಗಿಂತ ಮೇಲೆ) ಕಳೆದುಗೊಂಡಿದ್ದರು. ಆದರೆ ಈ ವರ್ಷದಿಂದ ಪಿಯು ವಿದ್ಯಾರ್ಥಿಗಳು 1 ಅಂಕ ಪಡೆಯಬೇಕಾದರೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿತ್ತು.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:56 pm, Fri, 19 May 23