Siddaramaiah: ಮೈಸೂರು ವಿವಿಯಲ್ಲಿ ಕಾನೂನು ವಿಭಾಗದಲ್ಲಿ Rank ಪಡೆದವರಿಗೆ ಸಿದ್ದರಾಮಯ್ಯ ಹೆಸರಲ್ಲಿ ಚಿನ್ನದ ಪದಕ

| Updated By: ಸಾಧು ಶ್ರೀನಾಥ್​

Updated on: Aug 09, 2022 | 4:01 PM

Mysore University: ಮೈಸೂರು ವಿಶ್ವ ವಿದ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಹೆಸರಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಚಿನ್ನದ ಪದಕ ನೀಡಲು ನಿರ್ಧರಿಸಲಾಗಿದೆ.

Siddaramaiah: ಮೈಸೂರು ವಿವಿಯಲ್ಲಿ ಕಾನೂನು ವಿಭಾಗದಲ್ಲಿ Rank ಪಡೆದವರಿಗೆ ಸಿದ್ದರಾಮಯ್ಯ ಹೆಸರಲ್ಲಿ ಚಿನ್ನದ ಪದಕ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಮೈಸೂರು: ಮೈಸೂರು ವಿಶ್ವ ವಿದ್ಯಾಲಯದಲ್ಲಿ (Mysore University) ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ (Siddaramaiah) ಹೆಸರಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಚಿನ್ನದ ಪದಕ (gold medal) ನೀಡಲು ನಿರ್ಧರಿಸಲಾಗಿದೆ. ಸಿದ್ದರಾಮಯ್ಯ 75 ಅಮೃತ ಮಹೋತ್ಸವ ದತ್ತಿ ಚಿನ್ನದ ಪದಕ ಇದಾಗಿದ್ದು, 2022-23ನೇ ಸಾಲಿನಿಂದ ಎಲ್​​ಎಲ್​ಬಿಯಲ್ಲಿ ಱಂಕ್ (Rank) ಪಡೆದವರಿಗೆ ನೀಡಲಾಗುವುದು.

ಮೈಸೂರು ಗ್ರಾಮಾಂತರ ಅಧ್ಯಕ್ಷರ ಹೆಸರಿನಲ್ಲಿ ವಿಶ್ವ ವಿದ್ಯಾಲಯಕ್ಕೆ 1 ಲಕ್ಷ 5 ಸಾವಿರ ರೂಪಾಯಿ ದತ್ತಿ ನೀಡಲಾಗಿದೆ. ಹಾಗಾಗಿ ಎಲ್​​ಎಲ್​ಬಿಯಲ್ಲಿ ಱಂಕ್ ಪಡೆದವರಿಗೆ ಚಿನ್ನದ ಪದಕ ನೀಡಲು ನಿರ್ಧರಿಸಲಾಗಿದೆ ಎಂದು ಟಿವಿ9ಗೆ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.