NEET Exam: ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳಿಗಾಗಿ ಇಂದು ನೀಟ್ ಪರೀಕ್ಷೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2022 | 8:14 AM

ದೇಶಾದ್ಯಂತ ಒಟ್ಟು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ದೇಶಾದ್ಯಂತ ಒಟ್ಟು 497 ನಗರದಲ್ಲಿ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 1,19,626 ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದಾರೆ.

NEET Exam: ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳಿಗಾಗಿ ಇಂದು ನೀಟ್ ಪರೀಕ್ಷೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳಿಗಾಗಿ ಇಂದು (ಜುಲೈ 17ರಂದು) ದೇಶಾದ್ಯಂತ ನೀಟ್ (NEET Exam) ಪರೀಕ್ಷೆ ನಡೆಯಲಿದೆ. ದೇಶಾದ್ಯಂತ ಒಟ್ಟು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ದೇಶಾದ್ಯಂತ ಒಟ್ಟು 497 ನಗರದಲ್ಲಿ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 1,19,626 ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದಾರೆ. ಎಂಬಿಬಿಎಸ್​​, ಬಿಡಿಎಸ್​​​, ಬಿಎಎಮ್​​​ಎಸ್​​, ಬಿಎಸ್​​ಎಮ್​​​ಎಸ್​​, ಬಿಯೂಎಮ್​​ಎಸ್​​, ಬಿಎಚ್​​​ಎಮ್​​​ಎಸ್ ಕೋರ್ಸ್​​​ಗಳಿಗೆ ಎನ್​ಟಿಎ (NATIONAL TESTING AGENCY) ಪರೀಕ್ಷೆ​​​​ ನಡೆಸುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ 5:20ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲು ಕಟ್ಟುನಿಟ್ಟಿನ ನಿಯಮ ಪಾಲಿಸೋದು ಕಡ್ಡಾಯವಿದ್ದು, ಪರೀಕ್ಷೆಗೆ ಹಾಜರಾಗವವರು ಯಾವುದೇ ಎಲೆಕ್ಟ್ರಾನಿಕ್ ವಸ್ತು ಕೊಂಡೊಯ್ಯವಂತಿಲ್ಲ. ಯಾವುದೇ ರೀತಿಯ ಆಭರಣ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ನೀರಿನ ಬಾಟಲ್ ಕೊಂಡೊಯ್ಯುವುದು, ಉದ್ದ ತೋಳಿನ ವಸ್ತ್ರ, ಶೂಗಳನ್ನ ಧರಿಸುವಂತ್ತಿಲ್ಲ. ವಿದ್ಯಾರ್ಥಿಗಳು ಪೆನ್, ಪೆನ್ಸಿಲ್ ತೆಗೆದುಕೊಂಡು ಬರುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ನೀಡುವ ಪೆನ್ ಬಳಸಿಯೇ ಪರೀಕ್ಷೆ ಬರೆಯಬೇಕು. ಚಪ್ಪಲಿ ಧರಿಸಿ ಪರೀಕ್ಷೆಗೆ ಹಾಜರಾಗುವಂತೆ NTA ಸೂಚನೆ ನೀಡಿದೆ.

ಇದನ್ನೂ ಓದಿ: 2nd PUC Supplementary Exam Timetable: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್ ಕಾರಣದಿಂದಾಗಿ 20 ಪ್ರಶ್ನೆಗಳನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಆದರೆ ಸಮಯವನ್ನು ಹೆಚ್ಚಿಸಲಿಲ್ಲ. ಈ ವರ್ಷ ಸಮಯ ವಿಸ್ತರಣೆ ಮಾಡಿರುವುದರಿಂದ 180 ಪ್ರಶ್ನೆಗಳಿಗೆ 200 ನಿಮಿಷದಲ್ಲಿ ಉತ್ತರಿಸಬೇಕಿದೆ. ಕನ್ನಡ ಮತ್ತು ಹಿಂದೆ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ನೀಟ್​ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಒಂದು ನಿಮೀಷ ತಡವಾಗಿ ಬಂದರು ಪ್ರವೇಶವಿರುವುದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸ್ಪಷ್ಟ ಪಡಿಸಿದೆ.

ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ, ಪಾಸ್‌ಪೋರ್ಟ್ ಸೈಜ್​​​​ ಭಾವಚಿತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್‌ನಂತಹ ಯಾವುದೇ ಗುರುತಿನ ದಾಖಲೆಯನ್ನು ಕೊಂಡೊಯ್ಯಬೇಕು. ಅಭ್ಯರ್ಥಿಗಳು ಮಾಸ್ಕ್ ಧರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಸ್ಯಾನಿಟೈಸರ್ ಕೊಂಡೊಯ್ಯಬಹುದಾಗಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ದೇಶಾದ್ಯಂತ ಇಂದು ನಡೆಯುತ್ತಿರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ.