NEET PG 2022: ನೀಟ್​ ಪಿಜಿ ಅಪ್ಲಿಕೇಷನ್ ತಿದ್ದುಪಡಿ ವಿಂಡೋ ಓಪನ್; ಬದಲಾವಣೆಗಳನ್ನು ಮಾಡಲು ಹೀಗೆ ಮಾಡಿ

| Updated By: ಸುಷ್ಮಾ ಚಕ್ರೆ

Updated on: Mar 29, 2022 | 5:14 PM

NEET PG 2022 ಪರೀಕ್ಷೆಯನ್ನು ಮೇ 21 ರಂದು ನಡೆಸಲಾಗುವುದು ಮತ್ತು ಫಲಿತಾಂಶಗಳನ್ನು ಜೂನ್ 20, 2022 ರೊಳಗೆ ಪ್ರಕಟಿಸಲಾಗುವುದು.

NEET PG 2022: ನೀಟ್​ ಪಿಜಿ ಅಪ್ಲಿಕೇಷನ್ ತಿದ್ದುಪಡಿ ವಿಂಡೋ ಓಪನ್; ಬದಲಾವಣೆಗಳನ್ನು ಮಾಡಲು ಹೀಗೆ ಮಾಡಿ
ನೀಟ್​ ಪಿಜಿ ಪರೀಕ್ಷೆ
Follow us on

NEET PG 2022: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಸ್ನಾತಕೋತ್ತರ ಪರೀಕ್ಷೆ (NEET PG) 2022ರ ಅರ್ಜಿ ತಿದ್ದುಪಡಿ ವಿಂಡೋ ಇಂದು (ಮಾರ್ಚ್ 29) ತೆರೆಯಲಿದೆ. ವೈದ್ಯಕೀಯ ಪರೀಕ್ಷೆಯ ಆಕಾಂಕ್ಷಿಗಳು ಈಗಾಗಲೇ ತಮ್ಮ NEET PG 2022 ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಕೆಲವರು ಈಗ ಬದಲಾವಣೆಗಳು ಅಥವಾ ತಿದ್ದುಪಡಿಗಳನ್ನು ಮಾಡಲು ಬಯಸುತ್ತಾರೆ. ಅಂಥವರಿಗೆ ಅರ್ಜಿ ನಮೂನೆಯಲ್ಲಿ ಏಪ್ರಿಲ್ 7ರವರೆಗೆ ಬದಲಾವಣೆಗಳನ್ನು ಮಾಡಲು ಸಾಧ್ಯವಾಗುತ್ತದೆ.

ನೀಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ nbe.edu.in ನಲ್ಲಿ ತಮ್ಮ ದಾಖಲೆಗಳೊಂದಿಗೆ ಲಾಗಿನ್ ಆಗಬೇಕು. ನಂತರ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. NEET PG 2022 ಮೇ 21ರಂದು ದೇಶ ಮತ್ತು ವಿದೇಶದಾದ್ಯಂತ ಗೊತ್ತುಪಡಿಸಿದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

NEET PG 2022: ಬದಲಾವಣೆಗಳನ್ನು ಮಾಡುವುದು ಹೇಗೆ?

* ಅಧಿಕೃತ ವೆಬ್‌ಸೈಟ್‌ಗೆ nbe.edu.in. ಭೇಟಿ ನೀಡಿ.
* ಮುಖಪುಟದಲ್ಲಿ, ‘NEET PG 2022’ ಲಿಂಕ್ ಅನ್ನು ಕ್ಲಿಕ್ ಮಾಡಿ.
* ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ.
* ಈಗ, ಎಡಿಟ್ ವಿಂಡೋ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯಲ್ಲಿ ಬದಲಾವಣೆಗಳನ್ನು ಮಾಡಿ.
* ಒಮ್ಮೆ ಬದಲಾವಣೆಗಳನ್ನು ಮಾಡಿದ ನಂತರ NEET PG 2022 ಅರ್ಜಿ ನಮೂನೆಯನ್ನು ಸಲ್ಲಿಸಿ.
* ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಅಗತ್ಯಕ್ಕಾಗಿ ಹಾರ್ಡ್ ಪ್ರತಿಯನ್ನು ಇಟ್ಟುಕೊಳ್ಳಿ.

NEET PG 2022 ಪರೀಕ್ಷೆಯನ್ನು ಮೇ 21 ರಂದು ನಡೆಸಲಾಗುವುದು ಮತ್ತು ಫಲಿತಾಂಶಗಳನ್ನು ಜೂನ್ 20, 2022 ರೊಳಗೆ ಪ್ರಕಟಿಸಲಾಗುವುದು. NEET PG 2022 ಕುರಿತು ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು NBE nbe.edu.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ನೀಟ್ ನಿಷೇಧಕ್ಕೆ ಆಗ್ರಹಿಸಿ ಟ್ವಿಟರ್​ನಲ್ಲಿ ಕರವೇ ಅಭಿಯಾನ: 35 ಸಾವಿರ ಟ್ವೀಟ್

NEET-UG: ನೀಟ್ ಯುಜಿ ಪರೀಕ್ಷೆಗೆ ಗರಿಷ್ಠ ವಯಸ್ಸಿನ ಮಿತಿಯ ಮಾನದಂಡ ರದ್ದುಗೊಳಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ