ನವದೆಹಲಿ: ಕೊವಿಡ್ ಹೆಚ್ಚಳದ ಕಾರಣದಿಂದ ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶದ ನೀಟ್ ಪಿಜಿ ಪರೀಕ್ಷೆಗಳನ್ನು ಕನಿಷ್ಠ ನಾಲ್ಕು ತಿಂಗಳವರೆಗೆ ಮುಂದೂಡಲಾಗುವುದು ಎಂದು ಪ್ರಧಾನಮಂತ್ರಿಗಳ ಕಚೇರಿ ಸೋಮವಾರ ಪ್ರಕಟಿಸಿದೆ. ಕೊವಿಡ್ 19 ಪರಿಸ್ಥಿತಿಯ ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಯನ್ನು ಹೆಚ್ಚಿಸುವ ಪ್ರಮುಖ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅಧಿಕೃತಗೊಳಿಸಿದ್ದು, ನೀಟ್ ಮತ್ತು ಸ್ನಾತಕೋತ್ತರ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.
100 ದಿನಗಳ ಕೊವಿಡ್ ಕರ್ತವ್ಯಗಳನ್ನು ಪೂರೈಸಿದ ವೈದ್ಯಕೀಯ ಸಿಬ್ಬಂದಿಗೆ ಮುಂಬರುವ ನಿಯಮಿತ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುವುದು. ಅಲ್ಲದೇ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೊವಿಡ್ ನಿರ್ವಹಣಾ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೂಡ ಕೊವಿಡ್ ನಿಯಂತ್ರಣ ಕೆಲಸಕ್ಕೆ ಒಬ್ಬರು ಹಿರಿಯ ಸಿಬ್ಬಂದಿಯ ಅಡಿಯಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ. ಅಲ್ಲದೇ ಬಿಎಸ್ಸಿ ಅಥವಾ ಜಿಎನ್ಎಮ್ ಪದವೀದರ ನರ್ಸ್ಗಳನ್ನು ಪೂರ್ಣ ಕೊವಿಡ್ ಕರ್ತವ್ಯಕ್ಕೆ ಹಿರಿಯ ವೈದ್ಯರು ಅಥವಾ ನರ್ಸ್ಗಳ ಜಿತೆ ಬಳಸಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
Prime Minister @narendramodi authorises key decisions to boost the availability of medical personnel to fight #COVID19
NEET-PG exam to be postponed for at least 4 months#IndiaFightsCorona
Details: https://t.co/l1F71ceY4t
(1/2)
— PIB India (@PIB_India) May 3, 2021
ಏಪ್ರಿಲ್ 15, 2021 ರಂದು ಕೊವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ನೀಟ್ ಮತ್ತು ಸ್ನಾತಕೋತ್ತರ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ತಿಳಿಸಿದ್ದರು.
ಇದನ್ನೂ ಓದಿ:
ಬೆಳಗಾವಿ ರಾಣಿ ಚೆನ್ನಮ್ಮ ವಿವಿಯ ಎಲ್ಲ ಪರೀಕ್ಷೆ, ದಾವಣಗೆರೆ ವಿವಿ ಬಿಇಡಿ ಪರೀಕ್ಷೆ ಮುಂದೂಡಿಕೆ
ವಿಟಿಯು ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಪರೀಕ್ಷೆ ಮುಂದೂಡಿಕೆ
(NEET PG exams postponed at least 4 months says PM office)
Published On - 4:43 pm, Mon, 3 May 21