ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಭಾನುವಾರ (ಜೂ.30) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಮರು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಮರು ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು exams.nta.ac.in/NEET ನಲ್ಲಿ ಪರಿಶೀಲಿಸಬಹುದು. ಜೂನ್ 23, 2024 ರಂದು ನಡೆದ ಪರೀಕ್ಷೆಗೆ ಗ್ರೇಸ್ ಅಂಕಗಳನ್ನು ಪಡೆದ 1563 ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ಜೂನ್ 23 ರಂದು ನಡೆಸಲಾಯಿತು. ಈ ಅಭ್ಯರ್ಥಿಗಳಲ್ಲಿ ಕೇವಲ 813 ಅಭ್ಯರ್ಥಿಗಳು ಮಾತ್ರ NEET ಮರು-ಪರೀಕ್ಷೆಗೆ ಹಾಜರಾಗಿದ್ದರು.
ಇನ್ನು ಇದಕ್ಕೂ ಮುನ್ನ ಜೂನ್ 29 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮರು ಪರೀಕ್ಷೆಯ ಉತ್ತರ ಕೀಗಳನ್ನು ಬಿಡುಗಡೆ ಮಾಡಿತ್ತು. ಅಭ್ಯರ್ಥಿಗಳು NEET ನ ಅಧಿಕೃತ ವೆಬ್‌ಸೈಟ್ exams.nta.ac.in ನಿಂದ ತಾತ್ಕಾಲಿಕ ಉತ್ತರ ಕೀಗಳನ್ನು ಡೌನ್‌ಲೋಡ್ ಮಾಡಲು ಅವಕಾಶವನ್ನು ನೀಡಲಾಗಿತ್ತು.
NEET UG ಪರೀಕ್ಷೆಯಲ್ಲಿ ಮೇ 5 ರಂದು, ಏಳು ಕೇಂದ್ರಗಳಲ್ಲಿ 1563 ಅಭ್ಯರ್ಥಿಗಳು ತಪ್ಪಾದ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು. ಇದಕ್ಕಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಗ್ರೇಸ್ ಅಂಕಗಳನ್ನು ನೀಡಲು ನಿರ್ಧರಿಸಿತು. ಆದರೆ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಈ ಪರೀಕ್ಷೆಗೆ ಗ್ರೇಸ್ ಅಂಕ ನೀಡುವುದನ್ನು ರದ್ದು ಮಾಡಿತ್ತು. ಹಾಗೂ ಮರು ಪರೀಕ್ಷೆ ಮಾಡಲು ಆದೇಶವನ್ನು ನೀಡಿತ್ತು.
ಇದನ್ನೂ ಓದಿ: ಡಿಪ್ಲೊಮಾ ಪಾಲಿಟೆಕ್ನಿಕ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ
ಈ ಎಲ್ಲ ಗೊಂದಲದ ನಡುವೆ ಮೇ 5 ರಂದು NTA ನಡೆಸಿದ NEET-UG ಪರೀಕ್ಷೆಯಲ್ಲಿ ಸರಿಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್ 4ರಂದು ಈ ಪರೀಕ್ಷೆ ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು. ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಮತ್ತು ವಿವಿಧ ರಾಜ್ಯಗಳಾದ್ಯಂತ ಇತರ ಅಕ್ರಮಗಳ ಬಗ್ಗೆ ವರದಿಯಾದವು, ಈ ಬಗ್ಗೆ ಕೇಂದ್ರ ಸರ್ಕಾರ ಒಂದು ತನಿಖೆಯನ್ನು ನಡೆಸಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ