ಬೆಂಗಳೂರು, (ಜೂನ್ 14): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಂದು (ಜೂನ್ 14) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) 2025 ರ ಪದವಿ ಫಲಿತಾಂಶ ಪ್ರಕಟಿಸಿದೆ. 12.36 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ರಾಜಸ್ಥಾನದ ಮಹೇಶ್ ಕುಮಾರ್ ಟಾಪರ್ ಆಗಿ ಹೊರಹೊಮ್ಮಿದರೆ, ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ಎರಡನೇ ಸ್ಥಾನ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ದೆಹಲಿಯ ಅವಿಕಾ ಅಗರ್ವಾಲ್ ಟಾಪರ್ ಆಗಿದ್ದಾರೆ. ಇನ್ನು ಕರ್ನಾಟಕದ ನೀಖಿಲ್ ಸೋನದ್ ದೇಶಕ್ಕೆ 17ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ನೀಟ್ ಯುಜಿ 2025 ಗೆ ನೋಂದಾಯಿಸಿಕೊಂಡಿದ್ದ 22,76,069 ಅಭ್ಯರ್ಥಿಗಳಲ್ಲಿ 22,09,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9,37,411 ಪುರುಷರು, 12,71,896 ಮಹಿಳೆಯರು ಮತ್ತು 11 ತೃತೀಯ ಲಿಂಗಿಗಳು. ಇದರಲ್ಲಿ ಪಟ್ಟು 12,36,531 ಅಭ್ಯರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ 5,14,063 ಪುರುಷರು, 7,22,462 ಮಹಿಳೆಯರು ಮತ್ತು 6 ತೃತೀಯ ಲಿಂಗಿಗಳಾಗಿದ್ದಾರೆ.
ಕರ್ನಾಟಕದ ಒಟ್ಟು 1,47,782 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದರು. ಆದ್ರೆ, 1,42,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 83,582 ಅರ್ಹತೆ ಪಡೆದುಕೊಂಡರು.