
ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು NEET UG 2025ರ ಕೌನ್ಸೆಲಿಂಗ್ ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಮೊದಲ ಹಂತದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ mcc.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಸೀಟು ಫಲಿತಾಂಶಗಳನ್ನು ಪರಿಶೀಲಿಸಬಹುದು. ದೇಶಾದ್ಯಂತ 15 ಪ್ರತಿಶತ MBBS ಮತ್ತು BDS ಸೀಟುಗಳ ಪ್ರವೇಶಕ್ಕಾಗಿ MCC ಕೌನ್ಸೆಲಿಂಗ್ ನಡೆಸುತ್ತಿದೆ.
ಎಂಸಿಸಿ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಮೊದಲ ಸುತ್ತಿನಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾದ ಅಭ್ಯರ್ಥಿಗಳು ಆಗಸ್ಟ್ 14 ರೊಳಗೆ ತಮ್ಮ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಮತ್ತು ಪ್ರವೇಶಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಎಂಸಿಸಿ ಹೊರಡಿಸಿದ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಪುತ್ರನನ್ನು ವರಿಸಲಿರುವ ಸಾನಿಯಾ ಚಂದೋಕ್ ಯಾರು? ಆಕೆಯ ವಿದ್ಯಾರ್ಹತೆ ಏನು?
ಮೊದಲ ಸುತ್ತಿನ ಆಯ್ಕೆ ಭರ್ತಿ ಮತ್ತು ಸೀಟು ಲಾಕ್ ಪ್ರಕ್ರಿಯೆಯು ಆಗಸ್ಟ್ 11 ರವರೆಗೆ ಮುಂದುವರೆಯಿತು. ಉಳಿದ ಶೇಕಡಾ 85 ರಷ್ಟು MBBS ಮತ್ತು BDS ಸೀಟುಗಳನ್ನು ರಾಜ್ಯ ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಲಾಗುತ್ತದೆ. NEET UG ಪರೀಕ್ಷೆಯನ್ನು ಮೇ 4 ರಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಪೆನ್-ಪೇಪರ್ ಮೋಡ್‌ನಲ್ಲಿ ನಡೆಸಲಾಯಿತು. ಜೂನ್ 14 ರಂದು ಫಲಿತಾಂಶಗಳನ್ನು ಘೋಷಿಸಲಾಯಿತು. ಪರೀಕ್ಷೆಗೆ ಹಾಜರಾದ ಸುಮಾರು 22 ಲಕ್ಷ ಅಭ್ಯರ್ಥಿಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಆಯೋಜಿಸಿತ್ತು.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Thu, 14 August 25