Global Teacher Prize 2023: ಜಾಗತಿಕ ಶಿಕ್ಷಣ ಪ್ರಶಸ್ತಿ -ಟಾಪ್ 10 ಅಭ್ಯರ್ಥಿಗಳಲ್ಲಿ ಪಶ್ಚಿಮ ಬಂಗಾಳ ಶಿಕ್ಷಕಗೆ ಸ್ಥಾನ
ದೀಪ್ ನಾರಾಯಣ್ ನಾಯಕ್ ಅವರ ನವೀನ ಬೋಧನಾ ವಿಧಾನಗಳು, ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಅವರ ಬೋಧನಾ ಕ್ರಮಗಳು ಹಿಂದುಳಿದ ಮಕ್ಕಳ ಮೇಲೆ ಗಮನಾರ್ಹ ಧನಾತ್ಮಕ ಪ್ರಭಾವವನ್ನು ಬೀರಿದೆ. ಗ್ಲೋಬಲ್ ಟೀಚರ್ ಪ್ರಶಸ್ತಿಯು ಶಿಕ್ಷಣ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿರುವ ಶಿಕ್ಷಕರನ್ನು ಗುರುತಿಸಿ, $ 1 ಮಿಲಿಯನ್ ಪ್ರಶಸ್ತಿಯಿಂದ ಗೌರವಿಸುತ್ತದೆ.
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ದೂರದ ಪ್ರದೇಶಗಳಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಅನನುಕೂಲಕರ ಮಕ್ಕಳ ಮೇಲೆ ಡಿಜಿಟಲ್ ವಿಭಜನೆ ಪರಿಣಾಮ ಬೀರಿತ್ತು. ಅದನ್ನು ಮನಗಂಡು ಆ ಮಕ್ಕಳನ್ನೂ ಡಿಜಿಟಲ್ ಮುಖ್ಯವಾಹಿನಿಯಲ್ಲಿ ಸೇರ್ಪಡೆ ಮಾಡಲು ದೀಪ್ ನಾರಾಯಣ್ ನಾಯಕ್ ಕೊಠಡಿಗಳಿಂದ ಹೊರಬಂದು, ಹೊರಾಂಗಣದಲ್ಲಿ ಶಿಕ್ಷಣವನ್ನು ನೀಡತೊಗಿದ್ದರು.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಶಾಲಾ ಶಿಕ್ಷಕರೊಬ್ಬರು 130 ವಿವಿಧ ದೇಶಗಳ ಶಿಕ್ಷಕರನ್ನು ಒಳಗೊಂಡಿರುವ ಗ್ಲೋಬಲ್ ಟೀಚರ್ ಪ್ರೈಜ್ 2023 ಗಾಗಿ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ದೀಪ್ ನಾರಾಯಣ್ ನಾಯಕ್ ಅವರ ನವೀನ ಬೋಧನಾ ವಿಧಾನಗಳು, ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಅವರ ಬೋಧನಾ ಕ್ರಮಗಳು ಹಿಂದುಳಿದ ಮಕ್ಕಳ ಮೇಲೆ ಗಮನಾರ್ಹ ಧನಾತ್ಮಕ ಪ್ರಭಾವವನ್ನು ಬೀರಿದೆ. ಗ್ಲೋಬಲ್ ಟೀಚರ್ ಪ್ರಶಸ್ತಿಯು ಶಿಕ್ಷಣ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿರುವ ಶಿಕ್ಷಕರನ್ನು ಗುರುತಿಸಿ, $ 1 ಮಿಲಿಯನ್ ಪ್ರಶಸ್ತಿಯಿಂದ ಗೌರವಿಸುತ್ತದೆ.
‘ಬೀದಿಗಳ ಶಿಕ್ಷಕ’ (Teacher of the Streets) ಎಂದು ಕರೆಯಲ್ಪಡುವ ನಾಯಕ್ ಅಸನ್ಸೋಲ್‌ನ ಜಮುರಿಯಾದಲ್ಲಿರುವ ತಿಲ್ಕಾ ಮಾಂಝಿ ಆದಿವಾಸಿ ಉಚಿತ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಾರೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ದೂರದ ಪ್ರದೇಶಗಳಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಅನನುಕೂಲಕರ ಮಕ್ಕಳ ಮೇಲೆ ಡಿಜಿಟಲ್ ವಿಭಜನೆ ಪರಿಣಾಮ ಬೀರಿತ್ತು. ಅದನ್ನು ಮನಗಂಡು ಆ ಮಕ್ಕಳನ್ನೂ ಡಿಜಿಟಲ್ ಮುಖ್ಯವಾಹಿನಿಯಲ್ಲಿ ಸೇರ್ಪಡೆ ಮಾಡಲು ದೀಪ್ ನಾರಾಯಣ್ ನಾಯಕ್ ಕೊಠಡಿಗಳಿಂದ ಹೊರಬಂದು, ಹೊರಾಂಗಣದಲ್ಲಿ ಶಿಕ್ಷಣವನ್ನು ನೀಡತೊಗಿದ್ದರು. ನಾಯಕ್ ಅವರು ಮಣ್ಣಿನ ಗೋಡೆಗಳನ್ನು ಕಪ್ಪು ಹಲಗೆಗಳಾಗಿ ಮತ್ತು ರಸ್ತೆಗಳನ್ನು ತರಗತಿಗಳಾಗಿ ಪರಿವರ್ತಿಸಿದರು. ಇಲ್ಲದಿದ್ದರೆ ಆ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.
ಇದೇ ವೇಳೆ ಅವರು ಅನಕ್ಷರತೆಯ ಚಕ್ರವನ್ನು ಮುರಿಯುವ ಮತ್ತು ಮೊದಲ ತಲೆಮಾರಿನ ಕಲಿಯುವವರ ಭವಿಷ್ಯವನ್ನು ಸುಧಾರಿಸುವ ಗುರಿಯೊಂದಿಗೆ ಪೋಷಕರಿಗೆ, ವಿಶೇಷವಾಗಿ ತಾಯಂದಿರು ಮತ್ತು ಅಜ್ಜಿಯರಿಗೆ ಶಿಕ್ಷಣ ನೀಡುವ ಪ್ರಯತ್ನಗಳನ್ನು ಮಾಡಿದರು. ಅವರ ಬೋಧನಾ ತಂತ್ರಗಳು ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಮೂಢನಂಬಿಕೆಗಳ ನಿರ್ಮೂಲನೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಕೊಡುಗೆ ನೀಡಿವೆ.
ನಾಯಕ್ ಅವರು ಅಪೌಷ್ಟಿಕತೆ, ಮಕ್ಕಳ ಶೋಷಣೆ ಮತ್ತು ಬಾಲ್ಯ ವಿವಾಹಗಳಂತಹ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವರ ಅದ್ಭುತವಾದ ’ಮೂರು ಆಯಾಮದ ಮಾದರಿ’ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಜೊತೆಗೆ ಮಕ್ಕಳ ತಾಯಂದಿರ ಫುಟ್‌ಬಾಲ್ ತಂಡವು ಕ್ರೀಡಾ ಮನೋಭಾವ, ಲಿಂಗ ಸಮಾನತೆ ಮತ್ತು ಜಾಗತಿಕ ಶಾಂತಿಯನ್ನು ಉತ್ತೇಜಿಸುತ್ತದೆ.
I’m incredibly grateful and humbled to be chosen as a top 10 finalist for the 2023 Varkey Foundation Global Teacher Prize, supported by UNESCO and Dubai Cares. Thank you, @varkeyfdn, @UNESCO, and @DubaiCares, for this incredible honor. 🙏🌟 #GlobalTeacherPrize2023 #Education pic.twitter.com/jMAUh7MtVm
— Deep Narayan Nayak (@DeepNarayanNay2) October 26, 2023
ಸುಸ್ಥಿರತೆ ಮತ್ತು ಪರಿಸರ ಜಾಗೃತಿಯ ಮೇಲೆ ಗಮನ ಕೇಂದ್ರೀಕರಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು ಮಾತ್ರವಲ್ಲದೆ ಮರಗಳ ನೆಡುವುದನ್ನು ಉತ್ತೇಜಿಸುತ್ತದೆ. ಇದಲ್ಲದೆ, ಅವರ ‘ಟೀಚರ್ ಅಟ್ ಯುವರ್ ಡೋರ್‌ಸ್ಟೆಪ್’ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಮಾರ್ಗದರ್ಶನವನ್ನು ನೀಡಿದೆ. ಗೈರುಹಾಜರಿಯನ್ನು ಕಡಿಮೆ ಮಾಡಲು ಮತ್ತು ಶಾಲೆ ಬಿಡುವವರನ್ನು ತಡೆಯುವ ಗುರಿಯನ್ನೂ ಹೊಂದಿದೆ.
Published On - 5:32 pm, Fri, 27 October 23