Pariksha Pe Charcha: ಪರೀಕ್ಷೆಯ ಕುರಿತು ಮಕ್ಕಳಲ್ಲಿದ್ದ ಆತಂಕ ದೂರ ಮಾಡಿದ ಪ್ರಧಾನಿ ಮೋದಿ

|

Updated on: Jan 29, 2024 | 2:05 PM

ಪ್ರಧಾನಿ ನರೇಂದ್ರ ಮೋದಿ(Narendra Modi) ದೆಹಲಿಯಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ(Pariksha Pe Charcha) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪರೀಕ್ಷೆ ಬಗ್ಗೆ ಇದ್ದ ಆತಂಕವನ್ನು ದೂರ ಮಾಡಿದ್ದಾರೆ. ನಿಮ್ಮ ಸ್ನೇಹಿತನಿಗೆ ಯಾವುದೇ ವಿಷಯದಲ್ಲಿ 100ಕ್ಕೆ 90 ಅಂಕ ಬಂದಿದೆ ಎಂದಾದರೆ ನಿಮಗೆ ಕೇವಲ 10 ಅಂಕ ಬರುತ್ತೆ ಎಂದರ್ಥವೇ, ನಿಮಗೂ ಕೂಡ 100 ಅಂಕಗಳೇ ಇರುತ್ತವೆ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸ್ನೇಹಿತನ ಬಗ್ಗೆ ಹೊಟ್ಟೆಕಿಚ್ಚು ಪಡುವುದಕ್ಕಿಂತ ನೀವು ಎಲ್ಲಿ ಹಿಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಂಡು ಸ್ನೇಹಿತರಿಂದ ಸಲಹೆ ಪಡೆದು ಮುನ್ನುಗ್ಗುವುದರ ಬಗ್ಗೆ ಆಲೋಚಿಸಿ ಎಂದು ಮೋದಿ ಸಲಹೆ ನೀಡಿದ್ದಾರೆ.

Pariksha Pe Charcha: ಪರೀಕ್ಷೆಯ ಕುರಿತು ಮಕ್ಕಳಲ್ಲಿದ್ದ ಆತಂಕ ದೂರ ಮಾಡಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ದೆಹಲಿಯಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ(Pariksha Pe Charcha) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪರೀಕ್ಷೆ ಬಗ್ಗೆ ಇದ್ದ ಆತಂಕವನ್ನು ದೂರ ಮಾಡಿದ್ದಾರೆ. ನಿಮ್ಮ ಸ್ನೇಹಿತನಿಗೆ ಯಾವುದೇ ವಿಷಯದಲ್ಲಿ 100ಕ್ಕೆ 90 ಅಂಕ ಬಂದಿದೆ ಎಂದಾದರೆ ನಿಮಗೆ ಕೇವಲ 10 ಅಂಕ ಬರುತ್ತೆ ಎಂದರ್ಥವೇ, ನಿಮಗೂ ಕೂಡ 100 ಅಂಕಗಳೇ ಇರುತ್ತವೆ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸ್ನೇಹಿತನ ಬಗ್ಗೆ ಹೊಟ್ಟೆಕಿಚ್ಚು ಪಡುವುದಕ್ಕಿಂತ ನೀವು ಎಲ್ಲಿ ಹಿಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಂಡು ಸ್ನೇಹಿತರಿಂದ ಸಲಹೆ ಪಡೆದು ಮುನ್ನುಗ್ಗುವುದರ ಬಗ್ಗೆ ಆಲೋಚಿಸಿ ಎಂದು ಮೋದಿ ಸಲಹೆ ನೀಡಿದ್ದಾರೆ.

ವಿದ್ಯಾರ್ಥಿಯ ಪ್ರಶ್ನೆ: ದೆಹಲಿಯ ಬುರಾರಿಯ ಮೊಹಮ್ಮದ್ ಅರ್ಶ್ ಅವರು ಬೋರ್ಡ್ ತಯಾರಿಯ ನಡುವೆ ಪರೀಕ್ಷೆಯ ಒತ್ತಡವನ್ನು ಹೇಗೆ ಕಡಿಮೆ ಮಾಡುವುದು ಎಂದು ಆನ್‌ಲೈನ್‌ನಲ್ಲಿ ಪ್ರಧಾನಿ ಮೋದಿಯವರನ್ನು ಕೇಳಿದರು.

ಪ್ರಧಾನಿ ಉತ್ತರ: ಮಕ್ಕಳ ಪರೀಕ್ಷೆಯ ಒತ್ತಡದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ಪೋಷಕರು ಖಂಡಿತವಾಗಿಯೂ ಈ ಸಮಸ್ಯೆಗಳನ್ನು ಯಾವುದಾದರೂ ರೂಪದಲ್ಲಿ ಅನುಭವಿಸಿರುತ್ತಾರೆ. ಯಾವುದೇ ರೀತಿಯ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಮೊದಲು ತಂದುಕೊಳ್ಳಬೇಕು, ನೀವೇ ತಯಾರಿ ನಡೆಸಬೇಕು ಎಂದರು.

ವಿದ್ಯಾರ್ಥಿಯ ಪ್ರಶ್ನೆ: ಪರೀಕ್ಷೆಗೆ ತಯಾರಿಯಲ್ಲಿ ವ್ಯಾಯಾಮ ಹೇಗೆ ಪ್ರಮುಖ ಪಾತ್ರವಹಿಸುತ್ತದೆ?

ಪ್ರಧಾನಿ ಉತ್ತರ: ವಿದ್ಯಾರ್ಥಿಯ ಈ ಪ್ರಶ್ನೆಗೆ, ಉತ್ತರಿಸಿರುವ ಪ್ರಧಾನಿ ಮೋದಿ ಪುಸ್ತಕ ತೆಗೆದುಕೊಂಡು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತುಕೊಳ್ಳಿ, ನೀವು ಸಾಕಷ್ಟು ನಿದ್ರೆ ಮಾಡುತ್ತಿದ್ದೀರೋ ಎಂಬುದರ ಬಗ್ಗೆ ಆಲೋಚಿಸಬೇಕು.
ತಾಯಿ ಮತ್ತು ತಂದೆ ನಿಮಗೆ ಬೇಗ ಮಲುಗುವಂತೆ ಹೇಳಿದರೆ ಅದನ್ನು ಪಾಲಿಸಿ ರಾತ್ರಿ ರೀಲ್ಸ್​ ನೋಡುತ್ತಾ ನಿದ್ದೆ ಹಾಳುಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಮತ್ತಷ್ಟು ಓದಿ: Pariksha Pe Charcha 2024: ನಿಮಗಿಂತ ಹೆಚ್ಚು ಪ್ರತಿಭಾವಂತರ ಬಳಿ ಸ್ನೇಹ ಬೆಳೆಸಿ, ಅಸೂಯೆ ಬಿಟ್ಟುಬಿಡಿ: ಮೋದಿ ಸಲಹೆ

ವಿದ್ಯಾರ್ಥಿಗಳ ಪ್ರಶ್ನೆ: ಪರೀಕ್ಷೆಗೆ ತಯಾರಿ ನಡೆಸುವಾಗ ಬಾಹ್ಯ ಒತ್ತಡವನ್ನು ತಪ್ಪಿಸುವುದು ಹೇಗೆ?

ಪ್ರಧಾನಿ ಉತ್ತರ: ಒತ್ತಡ ಬರುತ್ತಲೇ ಇದೆ. ಇದನ್ನು ಎದುರಿಸಲು ನಿಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯ. ತಾವೇ ಸೃಷ್ಟಿಸಿಕೊಳ್ಳುವ ಒತ್ತಡವೂ ಇದೆ, ನೀವು ನಿಮ್ಮ ಗುರಿ ಬಗ್ಗೆ ಹೆಚ್ಚಿನ ಗಮನಕೊಡಬೇಕು ಎಂದು ಹೇಳಿದರು.

ಶಿಕ್ಷಕರ ಪ್ರಶ್ನೆ: ಅರುಣಾಚಲ ಪ್ರದೇಶದ ಶಿಕ್ಷಕಿ ಟೋಬಿ ಲೋಬಿ, ವಿದ್ಯಾರ್ಥಿಗಳು ಮುಖ್ಯವಾಗಿ ಕ್ರೀಡೆ ಮತ್ತು ಅಧ್ಯಯನದ ಮೇಲೆ ಹೇಗೆ ಗಮನಹರಿಸಬಹುದು?

ಪ್ರಧಾನಿ ಉತ್ತರ: ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನೀವು ಕ್ರೀಡೆಗಾಗಿ ವಿದ್ಯಾರ್ಥಿಗಳಿಗೆ ಪೂರ್ಣ ಸಮಯವನ್ನು ನೀಡಬೇಕು ಎಂದು ಹೇಳಿದರು. ಇದು ಸಂಪೂರ್ಣ ಅಭಿವೃದ್ಧಿಗೆ ಕಾರಣವಾಗುತ್ತದೆ. ಪಠ್ಯ ಮತ್ತು ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಕಲಿಸಿ.

ವಿದ್ಯಾರ್ಥಿಗಳ ಪ್ರಶ್ನೆ: ಇಷ್ಟು ಕೆಲಸ ಮತ್ತು ಒತ್ತಡದ ನಡುವೆ ನೀವು ಹೇಗೆ ಧನಾತ್ಮಕವಾಗಿರುತ್ತೀರಿ?

ಪ್ರಧಾನಿ ಉತ್ತರ: ಪ್ರಧಾನಿಯವರೂ ಹೆಚ್ಚಿನ ಒತ್ತಡವನ್ನು ಎದುರಿಸುತ್ತಾರೆ ಎಂಬುದು ವಿದ್ಯಾರ್ಥಿಗಳು ತಿಳಿದಿರುವುದು ಒಳ್ಳೆಯದು ಎಂದು ಆಸಕ್ತಿದಾಯಕ ರೀತಿಯಲ್ಲಿ ಹೇಳಿದರು. ನಾನು ಸವಾಲುಗಳನ್ನೂ ಎದುರಿಸುತ್ತೇನೆ ಎಂದು ಹೇಳಿದರು. ಏನೇ ನಡೆದರೂ 140 ಕೋಟಿ ದೇಶವಾಸಿಗಳು ನನ್ನೊಂದಿಗಿದ್ದಾರೆ ಎಂದು ನಾನು ಯಾವಾಗಲೂ ನಂಬುತ್ತೇನೆ. ಲಕ್ಷಗಟ್ಟಲೆ ಸವಾಲುಗಳಿವೆ ಮತ್ತು ಕೋಟಿಗಟ್ಟಲೆ ಜನ ಅದಕ್ಕೆ ನಿಂತಿದ್ದಾರೆ. ಸವಾಲುಗಳಿಗೇ ನಾನು ಸವಾಲು ಹಾಕುತ್ತೇನೆ, ಎಂದೂ ನಿರಾಶನಾಗುವುದಿಲ್ಲ, ಹೆಚ್ಚು ಪಾಸಿಟಿವ್ ಆಗಿ ಆಲೋಚನೆ ಮಾಡುತ್ತೇನೆ. ಕಷ್ಟ ಬಂದಿದೆ ಅದು ಯಾವಾಗ ಕಳೆದು ಹೋಗಬಹುದು ಎಂದು ಕೊರಗುತ್ತಾ ಕೂರುವುದಿಲ್ಲ. ಆ ಕಷ್ಟವನ್ನು ಹಿಮ್ಮೆಟ್ಟಿಸುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸುತ್ತೇನೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ