ಬೆಂಗಳೂರು, (ಡಿಸೆಂಬರ್ 28): ದ್ವಿತೀಯ ಪಿಯುಸಿ (Second PUC) ಪ್ರಿಪರೇಟರಿ ಮತ್ತು ಪ್ರಥಮ ಪಿಯುಸಿಯ(First PUC) ಅಂತಿಮ ಪರೀಕ್ಷೆಯ ವೇಳಾಪಟ್ಟಿ (Exam Time Table) ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2024ರ ಫೆ.13ರಿಂದ 28ರ ವರೆಗೆ ನಡೆಯಲಿವೆ. ಇನ್ನು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪೂರ್ವಭಾವಿಯಾಗಿ ಜಿಲ್ಲಾ ಹಂತದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಜನವರಿ 16ರಿಂದ 30ರ ನಡುವೆ ಜಿಲ್ಲಾಮಟ್ಟದಲ್ಲಿ ನಡೆಸಲು ಸೂಚನೆ ನೀಡಲಾಗಿದೆ.
ಫೆಬ್ರುವರಿ.13- ಕನ್ನಡ, ಅರೇಬಿಕ್, ಫೆ.14- ಹಿಂದಿ, ಫೆ.15- ರಾಜ್ಯಶಾಸ, ಸಂಖ್ಯಾಶಾಸ, ಫೆ.16- ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆೃಂಡ್ ವೆಲ್‌ವೆಸ್, ಫೆ.17- ಐಚ್ಛಿಕ ಕನ್ನಡ, ಲೆಕ್ಕಶಾಸ, ಭೂಗರ್ಭಶಾಸ, ಗೃಹ ವಿಜ್ಞಾನ, ಫೆ.19- ಇತಿಹಾಸ, ಭೌತಶಾಸ, ಫೆ.20- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ್ರೆಂಚ್, ಫೆ.21- ಹಿಂದೂಸ್ತಾನಿ ಸಂಗೀತ, ಮನಃಶಾಸ, ರಸಾಯನಶಾಸ, ಮೂಲ ಗಣಿತ, ಫೆ.22- ತರ್ಕಶಾಸ, ವ್ಯವಹಾರ ಅಧ್ಯಯನ, ಫೆ 23- ಗಣಿತ, ಶಿಕ್ಷಣ ಶಾಸ, ಫೆ.24- ಅರ್ಥಶಾಸ, ಫೆ.26- ಸಮಾಜಶಾಸ, ವಿದ್ಯುನ್ಮಾನಶಾಸ, ಗಣಕ ವಿಜ್ಞಾನ, ಫೆ.27- ಇಂಗ್ಲಿಷ್, ಫೆ.28- ಭೂಗೋಳಶಾಸ ಮತ್ತು ಜೀವಶಾಸ ಪರೀಕ್ಷೆಗಳು ನಡೆಯಲಿವೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ, SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಇನ್ನು ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ. 80 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನವಿರಲಿದೆ.
ಇನ್ನಷ್ಟು ಶಿಕ್ಷಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ