
ಬೆಂಗಳೂರು, (ಜೂನ್ 08): ಕರ್ನಾಟಕದಲ್ಲಿ (Karnataka) ಪ್ರಸ್ತಕ ವರ್ಷದಿಂದಲೇ ಶಾಲೆಗಳಲ್ಲಿ ನೈತಿಕ ಶಿಕ್ಷಣ ಜಾರಿಗೆಗೆ ಶಿಕ್ಷಣ ಇಲಾಖೆ (Karnataka Education Department) ಮುಂದಾಗಿದೆ. ನೈತಿಕ ಪಠ್ಯದಡಿ ಲೈಂಗಿಕ ಶಿಕ್ಷಣ ಪರಿಚಯಿಸಲು ಸರ್ಕಾರ ಮುಂದಗಿದೆ ಮಕ್ಕಳ ತರಗತಿ ಹಾಗೂ ವೈಯೋಮಾನಕ್ಕೆ ತಕ್ಕಂತೆ DSERTಯಿಂದ ಲೈಂಗಿಕ ಶಿಕ್ಷಣ (sexual education) ಪಠ್ಯ ಸಿದ್ಧ ಮಾಡಲಾಗಿದ್ದು, ಪ್ರಾರಂಭಿಕ ಹಂತದಲ್ಲಿ 8 ರಿಂದ 12 ನೇ ತರಗತಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲು ಸರ್ಕಾರ ಪ್ಲಾನ್ ಮಾಡಿತ್ತು. ಈಗ DSERT ವಯೋಮಿತಿ ಅನುಗುಣವಾಗಿ ನೈತಿಕ ಪಠ್ಯದಡಿ ಲೈಂಗಿಕ ಪಠ್ಯ ಪರಿಚಯಿಸಲು ಮುಂದಾಗಿದೆ. ಯಾವ ವಯೋಮಿತಿಗೆ ಏನೆಲ್ಲ ನೈತಿಕ ಪಠ್ಯ ಅವಶ್ಯಕತೆ ಇದೆ. ವಾರಕ್ಕೆ ಎಷ್ಟು ತರಗತಿಗಳು ಬೇಕು ಎಂದು DSERT ಪ್ರತ್ಯೇಕ ಪಠ್ಯ ನೀಡಲು ಮುಂದಾಗಿದ್ದು, ಇದೇ ವರ್ಷದಿಂದ ಲೈಂಗಿಕ ಶಿಕ್ಷಣವು ಶುರುವಾಗಲಿದೆ.
ಪ್ರಾರಂಭದಲ್ಲಿ ವಾರಕ್ಕೆ ಎರಡು ತರಗತಿ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು ಈ ಕ್ರಮಕ್ಕೆ ಮುಂದಾಗಿದ್ದು, ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆ ಮೂಲಕ ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ತಿಳವಳಿಕೆ ನೀಡಲು ಮುಂದಾಗಿದೆ . ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು, ಸಹಜವಾಗಿ ಆಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು, ಅವುಗಳೆಲ್ಲವನ್ನೂ ಸಹಜ ರೀತಿಯಲ್ಲಿ ಸ್ವೀಕರಿಸುವ ಮತ್ತು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಲೈಂಗಿಕ ಶಿಕ್ಷಣ ನೀಡಲು ಇಲಾಖೆ ಪ್ಲಾನ್ ಮಾಡಿಕೊಂಡಿದೆ.
ಶಾಲೆಗಳಲ್ಲಿ ನೈತಿಕ ಶಿಕ್ಷಣದ ಅಡಿಯಲ್ಲಿ ಲೈಂಗಿಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮುಂದಾಗಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ. ಶಿಕ್ಷಣ ಇಲಾಖೆಯ ಈ ನಡೆ ಈಗ ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಬದಲಾದ ಆಹಾರ ಪದ್ಧತಿ, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಹಾರ್ಮೋನ್ ಇಂಬ್ಯಾಲೆನ್ಸ್ ನಿಂದ ಸೆಕ್ಸ್ ಮೆಚ್ಯುರಿಟಿ ಬೇಗ ಆಗುತ್ತಿದೆ. ಈ ಹೊತ್ತಿನಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅಗತ್ಯತೆ ಇದೇನಾ ಎಂದು ಹಿಂದೂಪರ ಸಂಘಟನೆಗಳು ಕಿಡಿಕಾರಿದ್ದು, ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಪರ ವಿರೋಧಕ್ಕೆ ಕಾರಣವಾಗಿದೆ.