ಆಂಧ್ರಪ್ರದೇಶ: ಕಷ್ಟ ಪಟ್ಟು ಓದಿ ಎಲ್ಲಾ ವಿಷಯಗಳಲ್ಲಿಯೂ ಫುಲ್ ಅಂಕ ಪಡೆಯುವ ಮೂಲಕ ಟಾಪರ್ ಆಗುವ ಕನಸು ಕಂಡಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷಾ ಫಲಿತಾಂಶ ಕಂಡು ಶಾಕ್ ಆಗಿದೆ. ಟಾಪರ್ ಆಗಬೇಕಿದ್ದ ಬಾಲಕಿ ಸಮಾಜ ವಿಜ್ಞಾನದಲ್ಲಿ ಫೇಲ್ ಆಗಿದ್ದಾಳೆ. ಬಳಿಕ ಮರುಮೌಲ್ಯಮಾಪನಕ್ಕೆ ಕಳುಹಿಸಿದ್ದು ಇದೀಗ 96 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಮೌಲ್ಯಮಾಪಕರ ನಿರ್ಲಕ್ಷ್ಯಕ್ಕೆ ಬಾಲಕಿಯ ಪೋಷಕರು ಸೇರಿದಂತೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿಯ ತೇಜಸ್ವಿನಿ.
ಐದು ವಿಷಯಗಳಲ್ಲಿ 90 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದ ತೇಜಸ್ವಿನಿ ಸಮಾಜ ವಿಜ್ಞಾನದಲ್ಲಿ ಅನುತ್ತೀರ್ಣಳಾಗಿದ್ದಾಳೆ. ಸಮಾಜ ವಿಜ್ಞಾನದಲ್ಲಿ ಕೇವಲ 23 ಅಂಕಗಳನ್ನು ಕಂಡು ಈಕೆ ಕುಸಿದು ಹೋಗಿದ್ದಾಳೆ. ಮಗಳ ಸ್ಥಿತಿ ಕಂಡು ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದು, ಬಳಿಕ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಇತ್ತೀಚಿಗಷ್ಟೇ ಮರುಮೌಲ್ಯಮಾಪನದ ಫಲಿತಾಂಶ ಹೊರ ಬಿದಿದ್ದು, ಫೇಲ್ ಆದ ತೇಜಸ್ವಿನಿ 96 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿ ಮಿಂಚಿದ್ದಾಳೆ. ಇದೀಗ ಆಕೆಗೆ 575 ಅಂಕಗಳು ಬಂದಿವೆ.
ಇದನ್ನೂ ಓದಿ: ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಬಂದ ಇಬ್ಬರು ವಿದ್ಯಾರ್ಥಿನಿಯರು: ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಮೊದಲು ಅನುತ್ತೀರ್ಣ ಅಂಕಗಳನ್ನು ನೀಡಲಾಯಿತು, ಮತ್ತು ನಂತರ ಮರುಮೌಲ್ಯಮಾಪನದಲ್ಲಿ 96 ಅಂಕಗಳನ್ನು ನೀಡಲಾಯಿತು. ಈ ಮಧ್ಯೆ, ಟ್ರಿಪಲ್ ಐಟಿಗೆ ಅರ್ಜಿ ಸಲ್ಲಿಸುವ ಗಡುವು ಮುಗಿದಿದೆ ಎಂದು ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಅಂಕಗಳೊಂದಿಗೆ ಅವಳಿಗೆ ಸೀಟು ಸಿಗುವ ಅವಕಾಶವಿದೆ ಎಂದು ನಂಬಿರುವ ಶಿಕ್ಷಕರು, ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Wed, 28 May 25