AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಕ್ಯಾನ್ಸರ್ ಗೆದ್ದ ಬಾಲಕಿ, ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲೂ ಟಾಪರ್

ಈ ವರ್ಷದ ಎಸ್​ಎಸ್​ಎಲ್​​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.62.34ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. ಈ ಮಧ್ಯೆ ದಾವಣಗೆರೆಯ ಶಾಂತಾ ಎಂಬ ಬಾಲಕಿ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್‌ನಿಂದ ಬಳಲಿ, ಒಂದು ವರ್ಷ ಶಾಲೆಗೆ ಹೋಗಲು ಸಾಧ್ಯವಾಗದಿದ್ದರೂ, ಶೇ. 93.44 ಅಂಕಗಳೊಂದಿಗೆ SSLC ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಆ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ದಾವಣಗೆರೆ: ಕ್ಯಾನ್ಸರ್ ಗೆದ್ದ ಬಾಲಕಿ, ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲೂ ಟಾಪರ್
ವಿದ್ಯಾರ್ಥಿನಿ ಬಿ. ಶಾಂತಾ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:May 04, 2025 | 2:42 PM

Share

ದಾವಣಗೆರೆ, ಮೇ 04: ಆ ಬಾಲಕಿ ಚಿಕ್ಕ ವಯಸ್ಸಿನಲ್ಲೇ ಮಹಾಮಾರಿ ಕ್ಯಾನ್ಸರ್‌ನಿಂದ ಬಳಲಿದ್ದಳು. ಆದರೆ ಜೀವನದಲ್ಲಿ ಹಠ ಎಂಬುದು ಮಾತ್ರ ಕಡಿಮೆ ಆಗಿರಲಿಲ್ಲ. ಕ್ಯಾನ್ಸರ್ (Cancer) ಕಾರಣಕ್ಕೆ ಒಂದು ವರ್ಷ ಶಾಲೆಗೆ ಗೈರು ಕೂಡ ಆಗಿದ್ದಳು. ಹೀಗಿರುವಾಗಲೇ ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾದ ಎಸ್​​ಎಸ್​ಎಲ್​​ಸಿ (SSLC) ಪರೀಕ್ಷೆ ಆಗಮಿಸಿತ್ತು. ಅನಾರೋಗ್ಯದ ನಡುವೆಯೂ ಧೈರ್ಯದಿಂದ ಹೋಗಿ ಪರೀಕ್ಷೆ ಬರೆದಿದ್ದ ಬಾಲಕಿ, ಶೇ. 93.44 ಅಂಕ ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ದಾವಣಗೆರೆ ನಗರದ ನಿಟ್ಟುವಳ್ಳಿಯ ಪಿಎಂ ಶ್ರೀ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ. ಶಾಂತಾ, ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಶೇ 93.44 ಅಂಕ ಗಳಿಸಿದ್ದಾಳೆ. ಕ್ಯಾನ್ಸರ್ ಕಾಟದ ನಡುವೆ ಸಹ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾಳೆ.

ಇದನ್ನೂ ಓದಿ: ಹದಿನಾರರ ಪೋರ ಚಿರಂತ್ ಹೊನ್ನಾವರ ಸಾಧನೆಗೆ ಮೂಳೆ ಕ್ಯಾನ್ಸರ್ ಅಡ್ಡಿಯಾಗಲಿಲ್ಲ, ಹತ್ತನೇ ತರಗತಿಯಲ್ಲಿ 92% ಮಾರ್ಕ್ಸ್!

ಇದನ್ನೂ ಓದಿ
Image
SSLC ಫಲಿತಾಂಶ: 22 ವಿದ್ಯಾರ್ಥಿಗಳಿಗೆ ಔಟ್​ ಆಫ್ ಔಟ್​
Image
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಫಲಿತಾಂಶ ಯಾವ ಸೈಟ್ ಗಳಲ್ಲಿ ಲಭ್ಯ?
Image
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Image
ಕರ್ನಾಟಕ ಎಸ್‌ಎಸ್‌ಎಲ್‌ಸಿ ಶೇ. 62.14 ಫಲಿತಾಂಶ

ದಾವಣಗೆರೆ ನಗರದನಿಟ್ಟುವಳ್ಳಿ ಬಸವರಾಜಪ್ಪ ಮತ್ತು ಆಶಾ ದಂಪತಿಯ ಮೊದಲ ಪುತ್ರಿ ಬಿ. ಶಾಂತಾ ಕನ್ನಡ ವಿಷಯದಲ್ಲಿ 122, ಇಂಗ್ಲಿಷ್‌ನಲ್ಲಿ 85, ಹಿಂದಿಯಲ್ಲಿ 90, ಸಮಾಜದಲ್ಲಿ 94, ವಿಜ್ಞಾನದಲ್ಲಿ 99 ಮತ್ತು ಗಣಿತದಲ್ಲಿ 94, ಒಟ್ಟು 584 ಅಂಕ ಗಳಿಸಿದ್ದಾರೆ. ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಎಲ್ಲರ ಸಹಕಾರದಿಂದ ಕ್ಯಾನ್ಸರ್‌ ಗೆದ್ದ ಬಿ. ಶಾಂತಾ 

ಇನ್ನು ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಿ. ಶಾಂತಾ ತಮ್ಮ ಮನೆಯವರು, ವಿಶೇಷವಾಗಿ ಶಿಕ್ಷಕರು ಮತ್ತು ಸಮಾಜದವರ ಸಹಕಾರದಿಂದ ಸದ್ಯ ಮಹಾಮಾರಿ ಕ್ಯಾನ್ಸರ್ ಗೆದ್ದಿದ್ದಾಳೆ. ಬಿ. ಶಾಂತಾ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಮುಂದುರೆಸಲಿದ್ದು, ಭವಿಷ್ಯದಲ್ಲಿ ಕೆಎಎಸ್ ಇಲ್ಲವೇ ಐಎಎಸ್ ಮಾಡಿ, ಸಮಾಜ ಸೇವೆ ಮಾಡುವ ಅಭಿಲಾಷೆ ಹೊಂದಿದ್ದಾಳೆ. ಆ ಮೂಲಕ ಸಮಾಜದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವಾಗುವ ಇಚ್ಛೆ ಶಾಂತಾ ಅವರದ್ದಾಗಿದೆ.

ಕ್ಯಾನ್ಸರ್​​ ನಡುವೆಯೂ 92 ಪರ್ಸೆಂಟ್​​​ ತೆಗೆದ ಛಲಗಾರ!

ಕ್ಯಾನ್ಸರ್​​ಗೆ ಸವಾಲ್ ಹಾಕಿ ವಿದ್ಯಾರ್ಥಿ ಚಿರಂತನ್ ಗೆದ್ದಿದ್ದಾನೆ. ಬೆಂಗಳೂರಿನ ನಾಗರಾಬಾವಿಯ ಈ ಚಿರಂತನ್​​ಗೆ, ಬರ್ತ್​​ಡೇ ದಿನ ಕೈಯಲ್ಲಿ ನೋವು ಕಂಡಿತ್ತು. ಪರೀಕ್ಷೆ ಮಾಡಿದಾಗ ಬೋನ್​​ ಕ್ಯಾನ್ಸರ್ ಇರೋದು ಧೃಡಪಟ್ಟಿತ್ತು. ಸರ್ಜರಿ ಮಾಡಿದರೂ 6 ಕಿಮೋ ತೆರಪಿ ಆಗಿತ್ತು. ಆಸ್ಪತ್ರೆಯಲ್ಲಿ ಕ್ಯಾನ್ಸರ್​ ವಿರುದ್ಧ ಹೋರಾಡ್ತಿದ್ರೂ ಚಿರಂತನ್​​ಗೆ ಓದುವ ಛಲವಿತ್ತು. ಯಾವ ಟ್ಯೂಷನ್​​ಗೆ ಹೋಗದೆ ಚಿರಂತನ್​, ICSC 10ನೇ ಕ್ಲಾಸ್​​ನಲ್ಲಿ 92 ಪರ್ಸೆಂಟ್​​​ ಪಡೆದಿದ್ದಾನೆ. ಮುಂದೆ LLB ಮಾಡಿ, ಐಪಿಎಸ್​ ಆಗುವ ಕನಸು ಹೊಂದಿದ್ದಾನೆ.

ಇದನ್ನೂ ಓದಿ: SSLC ಫಲಿತಾಂಶ: 6ಕ್ಕೆ 6 ವಿಷಯದಲ್ಲಿ ಫೇಲ್‌ ಆಗಿದ್ರೂ ಕೇಕ್‌ ತಿನ್ನಿಸಿ ಆತ್ಮಸ್ಥೈರ್ಯ ತುಂಬಿದ ಪೋಷಕರು!

ಮೇ 26ರಿಂದ ಜೂನ್ 2ರವರೆಗೆ ಎಸ್​ಎಸ್​ಎಲ್​ಸಿ ಎರಡನೇ ಪರೀಕ್ಷೆ ನಡೆಯಲಿದೆ. ಇದ್ರಲ್ಲೂ ಪಾಸ್ ಆಗದಿದ್ದರೆ ಜೂನ್ 23-ಜೂನ್ 30ರಂದು ನಡೆಯುವ ಮೂರನೇ ಪರೀಕ್ಷೆಯ ಬಾಗಿಲು ಕೂಡ ತೆರೆದಿದೆ. ಹಾಗಂತ ನಿರ್ಲಕ್ಷ್ಯ ಬೇಡ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:38 pm, Sun, 4 May 25

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ