JEE Main Result 2022: ಜೆಇಇ ಮೇನ್ಸ್​ ಫಲಿತಾಂಶ ಪ್ರಕಟ

ಜೆಇಇ ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು 2,50,000 ಮಂದಿಗೆ ಅವಕಾಶವಿದೆ. ನಿಮ್ಮ ರ್‍ಯಾಂಕಿಂಗ್ ಇಷ್ಟರ ಒಳಗೆ ಬಂದರೆ ಮಾತ್ರ ಬಿಇ, ಬಿ-ಟೆಕ್​ಗೆ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಸಿಗುತ್ತದೆ.

JEE Main Result 2022: ಜೆಇಇ ಮೇನ್ಸ್​ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
Image Credit source: NDTV
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 11, 2022 | 8:44 AM

ದೆಹಲಿ: ಜೆಇಇ 2022 ಪರೀಕ್ಷೆಗಳ ಮೊದಲ ಸೆಷನ್ (Joint Entrance Exam Main 2022 Session 1 – JEE) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಪ್ರಕಟಿಸಿದೆ. ಜೆಇಇ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಸಾಮಾನ್ಯ ವರ್ಗಕ್ಕೆ ಶೇ 75 ಮತ್ತು ಎಸ್​ಸಿ ಮತ್ತು ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ಶೇ 65 ಕನಿಷ್ಠ ಅಂಕಗಳನ್ನು ನಿಗದಿಪಡಿಸಲಾಗಿದೆ. ಜುಲೈ 6, 2022ರಂದು ಮೊದಲ ಪತ್ರಿಕೆಯ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು.

ಅರ್ಹತೆಯಷ್ಟು ಅಂಕ ಪಡೆದ ಅಭ್ಯರ್ಥಿಗಳು ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಗೆ ಹಾಜರಾಗಬಹುದಾಗಿದೆ. 2ನೇ ಸೆಷನ್ ಪರೀಕ್ಷೆಗಳು ಮುಗಿದ ನಂತರ ಜೆಇಇ ಅಡ್ವಾನ್ಸ್​ಡ್​ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಈ ಪರೀಕ್ಷೆಗೆ ಕನಿಷ್ಠ ಅಂಕಗಳನ್ನು ಎನ್​ಟಿಎ ನಂತರದ ದಿನಗಳಲ್ಲಿ ಪ್ರಕಟಿಸಲಿದೆ. ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಈ ಕೆಳಕಂಡ ವೆಬ್​ಸೈಟ್​ಗಳಲ್ಲಿ ನೋಡಬಹುದು. ನೇರವಾಗಿ ಫಲಿತಾಂಶದ ವೆಬ್​ಸೈಟ್​ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ. ಈ ವೆಬ್​ಸೈಟ್​ಗಳಲ್ಲಿಯೂ jeemain.nta.nic.in, ntaresults.ac.in, nta.ac.in ಫಲಿತಾಂಶ ಲಭ್ಯವಿದೆ.

ಫಲಿತಾಂಶ ನೋಡುವುದು ಹೇಗೆ

jeemain.nta.nic.in ವೆಬ್​ಸೈಟ್​ಗೆ ಹೋಗಿ. JEE Main 2022 session 1 ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿ ನೀಡಿದ ನಂತರ Submit ಬಟನ್ ಕ್ಲಿಕ್ ಮಾಡಿ. ಸ್ಕ್ರೀನ್ ಮೇಲೆ ನಿಮ್ಮ ಫಲಿತಾಂಶ ಕಾಣಿಸುತ್ತದೆ.

ಫಲಿತಾಂಶವನ್ನು ನೋಡಿಕೊಳ್ಳಿ. ಡೌನ್​ಲೋಡ್ ಬಟನ್ ಕ್ಲಿಕ್ ಮಾಡಿ. ಮುಂದಿನ ಉಪಯೋಗಕ್ಕಾಗಿ ಒಂದು ಪ್ರಿಂಟೌಟ್ ತೆಗೆದು ಇರಿಸಿಕೊಳ್ಳಿ. ಜೆಇಇ ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು 2,50,000 ಮಂದಿಗೆ ಅವಕಾಶವಿದೆ. ನಿಮ್ಮ ರ್‍ಯಾಂಕಿಂಗ್ ಇಷ್ಟರ ಒಳಗೆ ಬಂದರೆ ಮಾತ್ರ ಬಿಇ, ಬಿ-ಟೆಕ್​ಗೆ (ಎಲ್ಲ ವರ್ಗಗಳೂ ಸೇರಿದಂತೆ) ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಸಿಗುತ್ತದೆ.

ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಗಳು (JEE Main 2022 Session 2) ಜುಲೈ 21, 22, 23, 24, 25, 26, 27, 28, 29 ಮತ್ತು 30ರಂದು ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಮೊದಲ ಸೆಷನ್​ನ ಫಲಿತಾಂಶಗಳನ್ನು ಮಾತ್ರ ಪ್ರಕಟಿಸಿದೆ. ರಾಷ್ಟ್ರಮಟ್ಟದ ರ್‍ಯಾಂಕ್ ಮತ್ತು ಕೌನ್ಸೆಲಿಂಗ್​ಗೆ ಬಳಸುವ ಕಟ್​ ಆಫ್ ಅಂಕಗಳನ್ನು ಸೆಷನ್ 2ರ ಪರೀಕ್ಷೆಗಳ ನಂತರವಷ್ಟೇ ಪ್ರಕಟಿಸುತ್ತದೆ.

Published On - 8:44 am, Mon, 11 July 22