ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿರುವ ಟೊಯೋಟಾ ಇನ್‌ಸ್ಟಿಟ್ಯೂಟ್
Bidadi Toyota Technical Institute: ಬಿಡದಿಯಲ್ಲಿರುವ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಆರ್ಥಿಕವಾಗಿ ಹಿಂದುಳಿದ ಜನರ ಮಕ್ಕಳ ಬಾಳಿಗೆ ಬೆಳಕಾಗಿದೆ. 10 ನೇ ತರಗತಿ ಅಥವಾ ಪಿಯುಸಿ ನಂತರ ಶಿಕ್ಷಣ ಪಡೆಯಲು ಕಷ್ಟಪಡುವ ವಿದ್ಯಾರ್ಥಿಗಳು ಟಿಟಿಟಿಐ ಮೂಲಕ ದೇಶ ವಿದೇಶಗಳಲ್ಲಿ ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
2007 ರಲ್ಲಿ ಪ್ರಾರಂಭವಾದಾಗಿನಿಂದ ಟೊಯೊಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (TTTI) ತನ್ನ ಸಮಗ್ರ ಪಠ್ಯಕ್ರಮದ ಮೂಲಕ, ಸುಧಾರಿತ ತಂತ್ರಜ್ಞಾನಗಳ (Advanced Technologies) ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಟಿಟಿಟಿಐ ಗ್ರಾಮೀಣ ಯುವಕರನ್ನು ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ನುರಿತ ಮಾನವಶಕ್ತಿಯಾಗಿ ಪರಿವರ್ತಿಸುವ ಮೂಲಕ ಒಟ್ಟಾರೆ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ. ಟಿಟಿಟಿಐನ ಯಶಸ್ಸಿಗೆ ಕೊಡುಗೆ ನೀಡುವ ಪ್ರಮುಖ ಅಂಶವೆಂದರೆ ಅದರ ವಿದ್ಯಾರ್ಥಿಗಳ ಸ್ಥಿರವಾದ ಹೆಚ್ಚಿನ ಉದ್ಯೋಗ ದರ.
ಟಿಟಿಟಿಐ ವಿದ್ಯಾರ್ಥಿಗಳು ಕರ್ನಾಟಕ ಮತ್ತು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಪ್ರಾರಂಭಿಸಲಾದ ‘ಟೊಯೊಟಾ ಕೌಶಲ್ಯ’ ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ. ಸೈದ್ಧಾಂತಿಕ ಕಲಿಕೆಯನ್ನು ಆನ್-ದಿ-ಜಾಬ್ ತರಬೇತಿಯೊಂದಿಗೆ (OJT) ಸಂಯೋಜಿಸುವ ಮೂಲಕ ಉತ್ಪಾದನಾ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಪಡೆಯಲು ಮತ್ತು ತಮ್ಮ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಯುವಕರಿಗೆ ಒಂದು ಅನನ್ಯ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಕೌಶಲ್ಯವನ್ನು ಉತ್ತೇಜಿಸಲು ಟಿಟಿಟಿಐ, ಜಪಾನ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (GIM) ಕೌಶಲ್ಯ ವರ್ಗಾವಣೆ ಉತ್ತೇಜನ ಕಾರ್ಯಕ್ರಮದ ಅಡಿಯಲ್ಲಿನ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಜಪಾನೀಸ್ ಶೈಲಿಯ ಉತ್ಪಾದನಾ ಕೌಶಲ್ಯಗಳು ಮತ್ತು ಅಭ್ಯಾಸಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಆ ಮೂಲಕ ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ ಅಭಿಯಾನಕ್ಕೆ ಟಿಟಿಟಿಐ ಕೊಡುಗೆ ನೀಡುತ್ತದೆ‘.
- ಟಿಟಿಟಿಐ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಪ್ರೇರೇಪಿಸುತ್ತಿದೆ.
- ವಿದ್ಯಾರ್ಥಿಗಳು ಇಂಡಿಯಾ ಸ್ಕಿಲ್ಸ್ ಮತ್ತು ವರ್ಲ್ಡ್ ಸ್ಕಿಲ್ಸ್ ಕಾಂಪಿಟೇಷನ್ ನಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಇದು ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತರುತ್ತದೆ.
- ಟಿಟಿಟಿಐನ ಶಿಕ್ಷಣದ ಒಂದು ಲಕ್ಷಣವೆಂದರೆ ಅದರ ವಸತಿ ತರಬೇತಿ ಕಾರ್ಯಕ್ರಮ. ಇದು ಜ್ಞಾನ, ಕೌಶಲ್ಯ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ವಿಷಯದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಒದಗಿಸುತ್ತದೆ. ಇದು ಟಿಟಿಟಿಐ ಅನ್ನು ಅಪೇಕ್ಷಿತ ಕಲಿಕೆಯ ಸಂಸ್ಥೆಯನ್ನಾಗಿ ಮಾಡಿದೆ.
ಟಿಟಿಟಿಐ ಕಾರ್ಯಕ್ರಮಗಳ ಯಶಸ್ಸನ್ನು ಪರಿಗಣಿಸಿ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಟಿಕೆಎಂ 2023 ರ ಅಂತ್ಯದ ವೇಳೆಗೆ ಸಂಸ್ಥೆಯು 600 ರಿಂದ 1200 ಕ್ಕೆ ವಿದ್ಯಾರ್ಥಿಗಳನ್ನು ಅಡ್ಮಿಶನ್ ಮಾಡಿಕೊಳ್ಳಲು ನಿರ್ಧರಿಸಿದೆ.
ಬಿಡದಿಯಲ್ಲಿರುವ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಆರ್ಥಿಕವಾಗಿ ಹಿಂದುಳಿದ ಜನರ ಮಕ್ಕಳ ಬಾಳಿಗೆ ಬೆಳಕಾಗಿದೆ. 10 ನೇ ತರಗತಿ ಅಥವಾ ಪಿಯುಸಿ ನಂತರ ಶಿಕ್ಷಣ ಪಡೆಯಲು ಕಷ್ಟಪಡುವ ವಿದ್ಯಾರ್ಥಿಗಳು ಟಿಟಿಟಿಐ ಮೂಲಕ ದೇಶ ವಿದೇಶಗಳಲ್ಲಿ ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಿಟಿಟಿಐ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಿ
www.toyotabharat.com/toyota-in-india/ttti/
ಟೊಯೊಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಟಿಟಿಟಿಐ) ತನ್ನ 14ನೇ ಬ್ಯಾಚ್ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮವನ್ನು ಹೆಮ್ಮೆಯಿಂದ ಆಚರಿಸಿದೆ. ಈ ಕಾರ್ಯಕ್ರಮವು ಗ್ರಾಮೀಣ ಕರ್ನಾಟಕದ 62 ಟಿಟಿಟಿಐ ರೆಗ್ಯುಲರ್ ಮತ್ತು 41 ಟೊಯೊಟಾ ಕೌಶಲ ಕೋರ್ಸ್ ವಿದ್ಯಾರ್ಥಿಗಳಿಗೆ ಜಾಗತಿಕ ಉತ್ಪಾದನಾ ವಿಧಾನಗಳ ಸಮಗ್ರ ಕೌಶಲ್ಯ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಇದನ್ನೂ ಓದಿ: ಚೀನಾದಲ್ಲಿ ಸುಮಾರು 10,000 ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ- ವಿ ಮುರಳೀಧರನ್
ಮುಖ್ಯ ಅತಿಥಿ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ, ಟೊಯೋಟಾ ಗ್ರೂಪ್ ಕಂಪನಿಗಳು, ಪೂರೈಕೆದಾರರು, ಸಿಐಐ, ಎಸಿಎಂಎ ಮತ್ತು ಟೊಯೊಟಾ ಇಂಡೋನೇಷ್ಯಾ ಅಕಾಡೆಮಿಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ರೆಗ್ಯುಲರ್ ಟಿಟಿಟಿಐ 3 ವರ್ಷದ ಕೋರ್ಸ್ ನಿರ್ಗಮಿತ ಬ್ಯಾಚ್ ವಿದ್ಯಾರ್ಥಿಗಳಿಗೆ ಮತ್ತು ಟೊಯೋಟಾ ಕೌಶಲ್ಯ 2 ವರ್ಷದ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗೌರವಗಳನ್ನು ಸಲ್ಲಿಸಲಾಯಿತು.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Sat, 12 August 23