ಟಿವಿ9 ಎಜುಕೇಶನ್ ಎಕ್ಸ್‌ಪೋ
ಬೆಂಗಳೂರು, ಏಪ್ರಿಲ್ 5, ಭಾರತ (India) ಸೇರಿದಂತೆ ವಿದೇಶದಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ಹುಡುಕಾಟ ನಡೆಸುವವರಿಗೆ ವಿದ್ಯಾರ್ಥಿಗಳಿಗೆ ಟಿವಿ9 ಎಜುಕೇಶನ್ ಎಕ್ಸ್‌ಪೋ (TV9 Education Expo ) ಅತ್ಯುತ್ತಮ ವೇದಿಕೆಯಾಗಿದೆ. ಹೌದು, ಏಪ್ರಿಲ್ 4 ರಿಂದ 6 ರವರೆಗೆ ಬೆಂಗಳೂರಿ (Banglore)ನ ತ್ರಿಪುರವಾಸಿನಿ ಅರಮನೆ ಮೈದಾನ (Tripuravasini at palace grounds) ದಲ್ಲಿ ಶಿಕ್ಷಣ ಶೃಂಗಸಭೆಯೂ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಕಾರ್ಯಕ್ರಮವು ವಿವಿಧ ಉನ್ನತ ಶಿಕ್ಷಣ ಆಯ್ಕೆಗಳು, ಕೋರ್ಸ್‌ಗಳು ಹಾಗೂ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಗಿದೆ.
- ಟಿವಿ9 ಕನ್ನಡ ವಾಹಿನಿ ವತಿಯಿಂದ ನಡೆಯುತ್ತಿರುವ ಶಿಕ್ಷಣ ಶಂಗಸಭೆಯಲ್ಲಿ ಒಟ್ಟು 82 ಕಾಲೇಜುಗಳು ಮತ್ತು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾಗಿಯಾಗಿವೆ.
- ಉನ್ನತ ಶಿಕ್ಷಣ ಹಾಗೂ ಕೋರ್ಸ್ ಗಳ ಆಯ್ಕೆಗಳ ಬಗ್ಗೆ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಆಯಾಯ ಸ್ಟಾಲ್‌ಗಳಲ್ಲಿ ಕೌನ್ಸೆಲಿಂಗ್ ನೀಡುವಲ್ಲಿ ಯಶಸ್ವಿಯಾಗಿವೆ.
- ಎಜುಕೇಶನ್ ಎಕ್ಸ್‌ಪೋದಲ್ಲಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಅಥವಾ ವಿದೇಶಿ ಶಿಕ್ಷಣ ಸಲಹೆಗಾರರಾದ ಡಾ. ಅಬ್ರೋಡ್, ಆಲ್ಫಾ ಅಬ್ರೋಡ್, ಎಲೈಟ್ ಓವರ್ಸೆಸ್, ಲರ್ನ್‌ಟೆಕ್ ಮುಂತಾದವರು ಭಾಗವಹಿಸುತ್ತಿದ್ದಾರೆ.
- ವಿದ್ಯಾರ್ಥಿಗಳಿಗೆ ಅನುಕೂಲವಾಗಳೆಂದು ಈ ಬಾರಿಯ ಶಿಕ್ಷಣ ಶೃಂಗಸಭೆಯಲ್ಲಿ ಎಲ್ಲಾ ಕಾಲೇಜುಗಳಲ್ಲಿ ಸ್ಪಾಟ್ ಅಡ್ಮಿಷನ್ ಲಭ್ಯವಿದೆ ಆದರೆ ಶುಲ್ಕ ವಿನಾಯಿತಿಗಳಿಲ್ಲ.
- ಶಿಕ್ಷಣ ತಜ್ಞರು CET, NEET, JEE, KEA ಸೇರಿದಂತೆ ಇನ್ನಿತ್ತರ ವಿಷಯಗಳ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸುತ್ತಿದ್ದಾರೆ.
- ಈ ಬಾರಿಯ ಟಿವಿ9 ಎಜುಕೇಶನ್ ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ, ಮ್ಯಾನೇಜ್ ಮೆಂಟ್, ಅನಿಮೇಷನ್, ಓವರ್ ಸೀಸ್ ಎಜುಕೇಶನ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.
- ಟಿವಿ9 ಎಜುಕೇಶನ್ ಎಕ್ಸ್‌ಪೋದಲ್ಲಿ ಲರ್ನ್ ಟೆಕ್ ಕಂಪೆನಿ ಭಾಗವಹಿಸಿವೆ.
- ಪೋಷಕರು ವಿದ್ಯಾರ್ಥಿಗಳ ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರವೇಶ ಪ್ರಕ್ರಿಯೆ, ಕಟ್ಆಫ್ ಶೇಕಡಾವಾರು ಪ್ರಮಾಣ ಹಾಗೂ ಯಾವೆಲ್ಲಾ ಕೋರ್ಸ್‌ಗಳು ತಮ್ಮ ವಿದ್ಯಾರ್ಥಿಗಳು ಭವಿಷ್ಯಕ್ಕೆ ಉತ್ತಮ ಆಯ್ಕೆ ಎನ್ನುವ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ