TV9 Education Summit 2025: ಟಿವಿ9 ಎಜುಕೇಷನ್ ಎಕ್ಸ್ಪೋಗೆ ಇಂದು ಕೊನೇ ದಿನ
TV9 Education Expo 2024: Find Your Perfect Course in Bengaluru: ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಟಿವಿ9 ನೆಟ್ವರ್ಕ್ ಹಮ್ಮಿಕೊಂಡಿರುವ ಎಜುಕೇಷನ್ ಎಕ್ಸ್ಪೋ 2025ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮೂರನೇ ಮತ್ತು ಅಂತಿಮ ದಿನವಾದ ಇಂದು ಸಹಸ್ರಾರು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಎಂಜಿನಿಯರಿಂಗ್, ಮೆಡಿಸಿನ್, ಕಲೆ ಮತ್ತು ವಿಜ್ಞಾನ ಮುಂತಾದ ವಿವಿಧ ಕೋರ್ಸ್‌ಗಳ ಮಾಹಿತಿಯನ್ನು ಶಿಕ್ಷಣ ತಜ್ಞರು ಒದಗಿಸುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನವನ್ನೂ ಒದಗಿಸಲಾಗುತ್ತಿದೆ.
ಬೆಂಗಳೂರು, ಏಪ್ರಿಲ್ 6: ಬೆಂಗಳೂರಿನ ಅರಮನೆ ಮೈದಾನದಲ್ಲಿ ಟಿವಿ9 ನೆಟ್ವರ್ಕ್ ಆಯೋಜಿಸಿರುವ ಶಿಕ್ಷಣ ಮೇಳಕ್ಕೆ (TV9 Education Expo 2025) ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೂರು ದಿನಗಳ ಈ ಮೇಳದ ಅಂತಿಮ ದಿನವಾದ ಇಂದು ಸಹಸ್ರಾರು ಜನರು ಭೇಟಿ ನೀಡುತ್ತಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದು, ಉನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುತ್ತಿವೆ. ಎಂಜಿನಿಯರಿಂಗ್, ವೈದ್ಯಕೀಯ, ಫಾರ್ಮಸಿ, ಕಲೆ, ವಿಜ್ಞಾನ, ಹಣಕಾಸು, ಅಗ್ನಿಶಾಮಕ ಸುರಕ್ಷತೆ, ಹೋಟೆಲ್ ನಿರ್ವಹಣೆ, ಅನಿಮೇಷನ್ ಮತ್ತು ವಾಣಿಜ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಲಭ್ಯವಿರುವ ಕೋರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿದ್ದಾರೆ. ಯಾವ ಕೋರ್ಸ್ ಅನ್ನು ಆಯ್ದುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಮಾರ್ಗದರ್ಶನವನ್ನು ಒದಗಿಸಲಾಗುತ್ತಿದೆ. ಈ ಮೇಳವು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಯೋಜನೆಗಳನ್ನು ರೂಪಿಸಲು ಅನುಕೂಲವಾಗಿದೆ. ಏಪ್ರಿಲ್ 4ರಂದು ಆರಂಭವಾದ ಟಿವಿ9 ಎಜುಕೇಶನ್ ಎಕ್ಸ್ಪೋ ಇಂದು (ಏಪ್ರಿಲ್ 6) ಮುಕ್ತಾಯಗೊಳ್ಳುತ್ತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ