UGC NET: ನೆಟ್ ಎಕ್ಸಾಮ್ ಪ್ರವೇಶ ಪತ್ರ ಬಿಡುಗಡೆ, ಡೌನ್‌ಲೋಡ್ ಮಾಡುವ ವಿಧಾನ ಹೀಗಿದೆ
ಡಿಸೆಂಬರ್ನಲ್ಲಿ ಆಗಬೇಕಿದ್ದ ಯುಜಿಸಿ ನೆಟ್ 2022 ರ ಸಾಲಿನ ಪರೀಕ್ಷೆಯು ಫೆಬ್ರವರಿ 21 ರಿಂದ ಪ್ರಾರಂಭವಾಗಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಇಂದು ಯುಜಿಸಿ ನೆಟ್ ಡಿಸೆಂಬರ್ 2022 ಪರೀಕ್ಷೆಗಳಿಗೆ ಹಾಲ್ ಟಿಕೆಟ್ ಅನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ugcnet.nta.nic.in ನಲ್ಲಿ ಹಾಲ್ ಟಿಕೆಟ್ ಅನ್ನು ಪಡೆಯಬಹುದು.
UGC NET 2022 ಪ್ರವೇಶ ಕಾರ್ಡ್: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA)ಯು ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಎನ್‌ಇಟಿ ಫೇಸ್ 1 ರ ಪ್ರವೇಶ ಪತ್ರವನ್ನು ಇಂದು ಬಿಡುಗಡೆ ಮಾಡಿದೆ. ಡಿಸೆಂಬರ್ನಲ್ಲಿ ನಡೆಯಬೇಕಿದ್ದ ಯುಜಿಸಿ ನೆಟ್ 2022 ರ ಸಾಲಿನ ಪರೀಕ್ಷೆಯು ಫೆಬ್ರವರಿ 21 ರಿಂದ ಪ್ರಾರಂಭವಾಗಲಿದೆ. ಈಗ ಇದೆ ಹಂತ-1 ರ 57 ವಿಷಯಗಳಿಗೆ ಪ್ರವೇಶ ಪಾತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
UGC NET ಡಿಸೆಂಬರ್ 2022 ಪರೀಕ್ಷೆಗಳು ಫೆಬ್ರವರಿ 21 ರಿಂದ ಮಾರ್ಚ್ 10 ರವರೆಗೆ ನಡೆಯಲಿವೆ. ಇದರ ಮೊದಲ ಹಂತದ ಪರೀಕ್ಷೆಗಳನ್ನು ಫೆಬ್ರವರಿ 21 ಮತ್ತು 24 ರ ನಡುವೆ ನಡೆಯಲಿವೆ.
ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?
- ಹಂತ 1: ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ
- ಹಂತ 2: ಹೋಂ ಪೇಜ್ನಲ್ಲಿ ನೀಡಿರುವ ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಟ್ಯಾಪ್ ಮಾಡಿ
- ಹಂತ 3: ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನಂತಹ ನಿಮ್ಮ ವಿವರಗಳನ್ನು ಭರ್ತಿ ಮಾಡಿ
- ಹಂತ 4 ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಮುಂದಿನ ಉಲ್ಲೇಖಗಳಿಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ
UGC NET ಪರೀಕ್ಷೆ ಕಂಪ್ಯೂಟರ್ ಆಧಾರಿತ ಮೋಡ್‌ನದ್ದಾಗಿದ್ದು (CBT), ಜೂನಿಯರ್ ರಿಸರ್ಚ್ ಫೆಲೋಶಿಪ್‌ಗಾಗಿ ನೆಡೆಸಲಾಗುತ್ತದೆ. ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆಯನ್ನು ನಿರ್ಧರಿಸಲು ಬಹು ಪಾಳಿಯಲ್ಲಿ ಕೂಡ ಈ ಪರೀಕ್ಷಯ್ನನು ನಡೆಸುತ್ತಾರೆ.
ಇದನ್ನೂ ಓದಿ: NEET PG 2023 ಅರ್ಜಿ ನಮೂನೆಯಲ್ಲಿ ಬದಲಾವಣೆಗೆ ಇಂದಿನಿಂದ ಅವಕಾಶ: ಇಲ್ಲಿದೆ ಸಂಪೂರ್ಣ ವಿವರ
ಎರಡು ಪ್ರಶ್ನೆ ಪತ್ರಿಕೆಗಳು ಇರಲಿದ್ದು ವಸ್ತುನಿಷ್ಠ ಮಾದರಿ, ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಮೊದಲ ಪತ್ರಿಕೆಯಲ್ಲಿ 50 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಎರಡನೇ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 3 ಗಂಟೆಗಳ ಸಮಯವಕಾಶ ಇರುತ್ತದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ